ಪ್ರಾಣಿಗಳಿಗಾಗಿ ಇಟ್ಟ ಸ್ಫೋಟಕ ಅಗಿದು ಸಾಕು ನಾಯಿಯೊಂದರ ಮುಖ, ತಲೆ ಛಿದ್ರಗೊಂಡು ಸಾವಿಗೀಡಾದ ಘಟನೆ ತಾಲ್ಲೂಕಿನ ನೀರೆ ಗ್ರಾಮದಲ್ಲಿ ನಡೆದಿದೆ.
ನೀರೆ ಗ್ರಾಮದ ನಾಟ್ಲ ದರ್ಖಾಸ್ ಮನೆಯ ನಿವಾಸಿ ರವೀಂದ್ರ ಪೂಜಾರಿ ಅವರ ಮನೆಯ ನಾಯಿ ಹೊರಗೆ ತೆರಳಿ ಹಿಂತಿರುಗಿ ಬಾರದಿದ್ದಾಗ ಹುಡುಕಲಾಯಿತು. ಹಾಡಿಯಲ್ಲಿ ನಾಯಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

