ಕಾರ್ಕಳ: ಸಮಾಜಸೇವಕರಾದ ಕೃಷ್ಣರಾಜ ಹೆಗ್ಡೆ (ತಮ್ಮಣ್ಣ) ಅವರ ಅಗಲಿಕೆ ಬಿಜೆಪಿ, ಹಿಂದೂ ಸಂಘಟನೆ ಹಾಗೂ ಸಮಗ್ರ ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸ್ಮರಣಾರ್ಥ ಇಂದು ನಮ್ಮ ಶಾಸಕ ಸುನೀಲ್ ಕುಮಾರ್ ಅವರ ನಿವಾಸದಲ್ಲಿ ಶೋಕ ಸಭೆ ಆಯೋಜಿಸಲಾಗಿದ್ದು, ವಿವಿಧ ನಾಯಕರು ಹಾಗೂ ಸಂಘಟನಾ ಪ್ರತಿನಿಧಿಗಳು ಭಾಗವಹಿಸಿ, ಅವರ ಸೇವೆಯನ್ನು ಸ್ಮರಿಸಿದರು.
ತಮ್ಮಣ್ಣ ಅವರು ಸದಾ ಸಮಾಜದ ಹಿತವನ್ನು ಕಾಳಜಿಯಿಂದ ನೋಡಿಕೊಂಡು, ನಿಸ್ವಾರ್ಥ ಸೇವಾ ಮನೋಭಾವದ ಮೂಲಕ ಎಲ್ಲರಿಗೂ ಪ್ರೇರಣೆಯಾಗಿದ್ದರು. ಅವರ ಬದ್ಧತೆ, ತ್ಯಾಗ ಮತ್ತು ಜನಪರ ಚಿಂತನೆಗಳು ನಮ್ಮೆಲ್ಲರಿಗೂ ದಾರಿದೀಪವಾಗಿವೆ. ಅವರ ನೆನಪು ಸದಾಕಾಲ ನಮ್ಮೊಂದಿಗೇ ಇರುತ್ತದೆ. ನಾವು ಅವರನ್ನು ಎಂದೆಂದಿಗೂ ಸ್ಮರಿಸುತ್ತೇವೆ ಎಂದು ಶಾಸಕರು ಹೇಳಿದರು.

