ಕಾರ್ಕಳ : ಎರಡು ಕಿಡ್ನಿ ಕಳೆದುಕೊಂಡ ಸರೋಜಿನಿಗೆ ಜೀವದಾನಕ್ಕಾಗಿ ದಾನಿಗಳ ನೆರವು ಅಗತ್ಯ

0
75

ಕಾರ್ಕಳ ಜೋಡು ರಸ್ತೆ ನಿವಾಸಿ ಹರೀಶ್ ರವರ ಪತ್ನಿ ಸರೋಜಿನಿಯವರು ಎರಡು ಕಿಡ್ನಿಗಳನ್ನು ಕಳೆದುಕೊಂಡು ಆತಂಕ ಸ್ಥಿತಿಯಲ್ಲಿದ್ದಾರೆ. ಕಳೆದ 15 ವರ್ಷಗಳ ಹಿಂದೆ ಈ ದಂಪತಿಗಳ ಮದುವೆ ಆಗಿತ್ತು. ಇವರಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ವೃತ್ತಿಯಲ್ಲಿ ಕ್ಷವ್ರಿಕ ನಾಗಿರುವ ಹರೀಶ್ ರವರು ತನ್ನ ಪತ್ನಿಯ ಕಿಡ್ನಿಯ ಚಿಕಿತ್ಸೆಗಾಗಿ ಈಗಾಗಲೇ ಲಕ್ಷಾಂತರ ಮೊತ್ತವನ್ನು ಖರ್ಚು ಮಾಡಿದ್ದು, ಇನ್ನೂ ಕೂಡಾ ಅವರು ಆರೋಗ್ಯದಿಂದ ಚೇತರಿಕೆ ಕಂಡಿಲ್ಲ. ಕಳೆದ ಕೆಲವು ತಿಂಗಳ ಹಿಂದೆ ವೈದ್ಯರು ಸರೋಜಿನಿಯವರಿಗೆ ಬೇರೆ ಕಿಡ್ನಿ ಜೋಡಣೆ ಮಾಡುವುದಾಗಿ ತಿಳಿಸಿದ್ದಾರೆ.

ಈ ಕಿಡ್ನಿ ಜೋಡಣೆಗಾಗಿ ಸುಮಾರು 50 ಲಕ್ಷ ಮೊತ್ತದ ಅವಶ್ಯಕತೆ ಇರುವುದಾಗಿ ವೈದ್ಯರು ಹೇಳಿದ್ದು, ಪ್ರತಿ ನಿತ್ಯ ತನ್ನ ಕಾಯಕದಿಂದ ಬರುವ ಹಣದಲ್ಲಿ ತನ್ನ ಸಂಸಾರ ಸರಿದೂಗಿಸುವ ಇವರಿಗೆ ಒಂದೇ ಬಾರಿಗೆ ಈ ವಿಚಾರ ಶಾಕ್ ಬಡಿದಂತೆ ಆಗಿದೆ.

ತನ್ನ ಪುಟ್ಟ ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಅವರ ಕನಸು ನುಚ್ಚು ನೂರಾಗುವತ್ತ ಸಾಗಿದೆ. ಯಾರಾದರೂ ದಾನಿಗಳಿದ್ದರೆ ಇವರ ಖಾತೆಗೆ ಹಣ ಹಾಕಿದರೆ,  ಈ ಮಹಿಳೆಯ ಆರೋಗ್ಯ ಕಾಪಾಡಲು ಸಹಕಾರಿ ಆಗಬಹುದು. ಪ್ರತಿ ವ್ಯಕ್ತಿಯು ಕೂಡಾ ದಾನದ ರೂಪದಲ್ಲಿ ಇವರಿಗೆ ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ.

ಈ ಸ್ಕ್ಯಾನ್ ಸಂಖ್ಯೆಗೆ ಹಣ ಕಳುಹಿಸಿ. ಸರೋಜಿನಿಯವರ ಆರೋಗ್ಯ ಕಾಪಾಡಲು ಸಹಕಾರ ನೀಡಿ.

Account No 81910200001446
IFSC code BARBOVJKUKU MICR code 576012018

LEAVE A REPLY

Please enter your comment!
Please enter your name here