ಕಾರ್ಕಳ : ನಿಯಂತ್ರಣ ತಪ್ಪಿ ಸ್ಕೂಟರ್ ಪರಪ್ಪು ಸೇತುವೆಯ ಬಳಿ ನೀರಿಗೆ ಬಿದ್ದ ಪರಿಣಾಮ ಸವಾರ ಮೃತ ಪಟ್ಟ
ಘಟನೆ ಕಾರ್ಕಳದ ಕುಕ್ಕುಂದೂರು ಗ್ರಾಮದಲ್ಲಿ ನಡೆದಿದೆ.
ಕೆ. ಸುಬ್ರಹ್ಮಣ್ಯ (36) ಸಾವನ್ನಪ್ಪಿದವರು. ರಾತ್ರಿ ಮನೆಯಿಂದ ಸ್ಕೂಟರ್ ನಲ್ಲಿ ಕಾರ್ಕಳ ಪೇಟೆಗೆ ಹೋಗಿದ್ದರು. ಆದರೆ ಮರುದಿನ ಬೆಳಿಗ್ಗೆ ನಕ್ರೆ ಪರಪ್ಪು ಸೇತುವೆಯ ಬಳಿ ಸ್ಕೂಟರ್ ಸಮೇತ ನೀರಿನಲ್ಲಿ ಬಿದ್ದು ಮುಳುಗಿರುವುದು ಕಂಡು ಬಂದಿದೆ.
ಕಾರ್ಕಳ ಪೇಟೆಯಿಂದ ನಕ್ರೆ ಕಡೆಗೆ ಸ್ಕೂಟರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹತೋಟಿ ತಪ್ಪಿ ಕುಕ್ಕುಂದೂರು ಗ್ರಾಮದ ಪರಪ್ಪು ಸೇತುವೆಯ ಬಳಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.