ಕಾರ್ಕಳ : ಸಿಂಧೂರ ಕಲಾವಿದೆರ್ ಕಾರ್ಲ ನೂತನ ನಾಟಕ “ಒಂಜಿ ಗುಜ್ಜೆದ ಕಥೆ” ಶೀರ್ಷಿಕೆ ಅನಾವರಣ

0
16

ಕಾರ್ಕಳ : ಸಿಂಧೂರ ಕಲಾವಿದೆರ್ ಕಾರ್ಲ ತಂಡದ 2026ನೇ ಸಾಲಿನ ನೂತನ ನಾಟಕದ ಶುಭ ಮುಹೂರ್ತ ಹಾಗೂ ನಾಟಕದ ಶೀರ್ಷಿಕೆ ಅನಾವರಣ ಕಾರ್ಯಕ್ರಮವು ಗುರುವಾರ ಶ್ರೀ ಮೂಡು ಮಹಾಗಣಪತಿ ದೇವಸ್ಥಾನ, ಬಂಡಿಮಠ, ಕಾರ್ಕಳದಲ್ಲಿ ಭಕ್ತಿಭಾವದಿಂದ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ತಂಡದ ಈ ವರ್ಷದ ನೂತನ ನಾಟಕದ ಶೀರ್ಷಿಕೆ ಪವನ್ ಕಾರ್ಲ ರಚಿಸಿರುವ, ಸಂದೀಪ್ ಬಾರಾಡಿ ನಿರ್ದೇಶನದ “ಒಂಜಿ ಗುಜ್ಜೆದ ಕಥೆ”ಯನ್ನು ಅತಿಥಿಗಳ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಸಿಂಧೂರ ತಂಡದ ಸಂಚಾಲಕರು ವಿಜಯ್ ಶೆಟ್ಟಿ (ಕಾರ್ಕಳ), ಪ್ರಸನ್ನ ಶೆಟ್ಟಿ (ಬೈಲೂರು), ಸುನಿಲ್ ನೆಲ್ಲಿಗುಡ್ಡೆ, ಪ್ರವೀಣ್ ಶೆಟ್ಟಿ, ಸೀತಾರಾಮ್ ಶೆಟ್ಟಿ ಚಂದ್ರನಾಥ್ ಬಜಗೋಳಿ, ನಿತಿನ್ ಪೂಜಾರಿ, ವಿಖ್ಯಾತ್ ಶೆಟ್ಟಿ, ನವೀನ್ ದೇವಾಡಿಗ, ಅಶೋಕ್ ಪೊಸಲಾಯಿ ಹಾಗೂ ಲೀಲಾವತಿ ಪೊಸಲಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಅನೇಕ ಗಣ್ಯರು ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದು, ಸಿಂಧೂರ ಕಲಾವಿದೆರ್ ಕಾರ್ಲ ತಂಡಕ್ಕೆ ಶುಭ ಹಾರೈಸಿದರು. ಅತಿಥಿಗಳನ್ನು ಸಂದೀಪ್ ಬಾರಾಡಿ ಸ್ವಾಗತಿಸಿದರು. ತಾರಾನಾಥ್ ಬೋಳ ವಂದನಾರ್ಪಣೆ ಸಲ್ಲಿಸಿದರು ಅಜಿತ್ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here