ಕಾರ್ಕಳ ಬೈಪಾಸ್ ಬಳಿ ಹೊರ ರಾಜ್ಯದ ಕೆರೆ ಮಣ್ಣು ಮಿಶ್ರಿತ ಮಣ್ಣಿನ ಪರಿಕರಗಳನ್ನು ಅನಧಿಕೃತವಾಗಿ ಸ್ಥಳೀಯ ಆಡಳಿತದ ಅನುಮತಿಯಿಲ್ಲದೆ ರಸ್ತೆ ಬಳಿ ರಾಶಿ ಹಾಕಿ ಕೆಲವು ತಿಂಗಳಿಂದ ಮಾರಾಟ ಮಾಡುತ್ತಿದ್ದು ಈ ಕೂಡಲೇ ಅದನ್ನು ತೆರವುಗೊಳಿಸಿ ಸ್ಥಳೀಯ ಕುಂಬಾರರಿಗೆ ಅನುಕೂಲ ಕಲ್ಪಿಸಿ ಕೊಡುವಂತೆ ಸಂಬಂಧ ಪಟ್ಟ ಲೋಕೋಪಯೋಗಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು, ಕಾರ್ಯ ನಿರ್ವಾಹಕ ಅಧಿಕಾರಿ ತಾಲೂಕ್ ಪಂಚಾಯತ್, ಕಾರ್ಕಳ ತಾಲೂಕಿನ ಮಾನ್ಯ ತಹಶೀಲ್ದಾರರು ಹಾಗೂ ಸಾಣೂರು ಗ್ರಾಮ ಪಂಚಾಯತ್ ಪಿ. ಡಿ. ಓ ಇವರಿಗೆ ಮನವಿ ಯನ್ನು ಸಲ್ಲಿಸಲಾಯಿತು.ಕುಲಾಲ ಚಾವಡಿಯ ಕಾರ್ಯಕರ್ತರು, ಕಾರ್ಕಳ ತಾಲೂಕಿನ ವಿವಿಧ ಕುಲಾಲ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿ ಸುಮಾರು 25 ಜನರು ಉಪಸ್ಥಿತರಿದ್ದರು.
ಮೂರು ದಿನಗಳ ಒಳಗೆ ನಮ್ಮ ಮನವಿಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಸಂಬಂಧಿಸಿದ ಇಲಾಖಾಧಿಕಾರಿಗಳು ನೀಡಿದರು.
ಸಂತೋಷ್ ಕುಲಾಲ್ ಪದವು, ಶಂಕರ್ ಕುಲಾಲ್ ಸಾಣೂರು, ವಿಠ್ಠಲ್ ಮೂಲ್ಯ ಬೇಲಾಡಿ, ಕುಶಾ R ಮೂಲ್ಯ,ಸುಧೀರ್ ಬಂಗೇರ,ಮೋಹನ್ ಕುಲಾಲ್ ಇರ್ವತ್ತೂರು, ದೀಪಕ್ ಬೆಳ್ಮಣ್, ಸುರೇಶ್ ಕುಲಾಲ್ ಪಾಲಾಜೆ,ಜಯರಾಮ್ ಬಂಗೇರ ಕೆರ್ವಾಶೆ, ಪ್ರಮೋದ್ ಕುಲಾಲ್ ಹೊಸ್ಮಾರ್, ದೇವಪ್ಪ ಕುಲಾಲ್ ನಿಟ್ಟೆ, ಜ್ಯೋತಿ ಕುಲಾಲ್ ಪದವು, ಪ್ರೇಮ ಕುಲಾಲ್, ವಿಜೇಶ್ ಕುಲಾಲ್,ಪ್ರಭಾಕರ್ ಬೇಲಾಡಿ, ಮಹೇಶ್ ಬೇಲಾಡಿ, ಉಮೇಶ್ ಬೋರ್ಗಲಗುಡ್ಡೆ, ಹರಿಶ್ಚಂದ್ರ ಕುಲಾಲ್, ಮಂಜುನಾಥ್ ಕುಲಾಲ್ ಪದವು, ಸುನಿಲ್ ಕುಲಾಲ್ ಪದವು,ಸುಮಿತ್ರ ಕುಲಾಲ್ ಸಾಣೂರು ವಿಮಲಾ ಕುಲಾಲ್ ಸಾಣೂರು ಪದ್ಮಕ್ಷಿ ಕುಲಾಲ್ ಸಾಣೂರು ಜಯಂತಿ ಕುಲಾಲ್ ಸಾಣೂರು ಪ್ರತೀಕ್ಷಾ ಕುಲಾಲ್ ಸಾಣೂರು ಉಪಸ್ಥಿತರಿದ್ದರು.