ಕಾರ್ಕಳ: ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ನೂತನ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿರುವ ಮಾಧ್ಯಮ ಕ್ಷೇತ್ರದ ಸಾಧಕರು, ಕ್ರೀಯಾಶೀಲ ಪತ್ರಕರ್ತ ಕಾರ್ಕಳದ ವಸಂತ್ ಕುಲಾಲ್ ಬಿಂಬಧ್ವನಿ ಅವರನ್ನು ತುಳುನಾಡು ವಾರ್ತೆ ಸಮೂಹ ಸಂಸ್ಥೆಗಳ ಪರವಾಗಿ ಆ. 23ರಂದು ಗೌರವಪೂರ್ವಕವಾಗಿ ಸನ್ಮಾನಿಸಿ, ಅಭಿನಂದಿಸಲಾಯಿತು.
ತುಳುನಾಡು ವಾರ್ತೆ ಸಮೂಹ ಸಂಸ್ಥೆಗಳ ಮುಖ್ಯಸ್ಥರು, ಪ್ರಧಾನ ಸಂಪಾದಕರಾಗಿರುವ ಪುನಿತ್ ಮುಂಡ್ಕೂರು ತುಳುನಾಡು ವಾರ್ತೆ ಕಾರ್ಕಳ ತಾಲೂಕು ವರದಿಗಾರ್ತಿ ಅಶ್ವಿನಿ, ವರದಿಗಾರರಾದ ಜಗದೀಶ್ ಪೂಜಾರಿ ಕಡಂದಲೆ, ಶಿವರಾಜ್ ಕರ್ಕೇರ, ತುಳುನಾಡು ವಾರ್ತೆ ಕೆಮರಾಮೆನ್ ಗಳಾದ ಸಂಪತ್, ಶ್ರವಣ್, ಉಪ ಸಂಪಾದಕ ಪದ್ಮನಾಭ ಕುಲಾಲ್ ವೇಣೂರು, ಕಚೇರಿ ಸಿಬ್ಬಂದಿ ಪ್ರಫುಲ್ಲ, ಪತ್ರಕರ್ತ ಯಶೋಧರ ಬಂಗೇರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

