ಉಡುಪಿ: ಶ್ರೀ ಮಹಾವಿಷ್ಣು ಕ್ಷೇತ್ರ ಕಾರ್ಮಾರು ಆಟಿ ತಿಂಗಳ ವಿಶೇಷ ಕಾರ್ಯಕ್ರಮ ಹಾಗೂ ಬಲಿವಾಡು ಕಾರ್ಯಕ್ರಮವು ಆ. 1ರಂದು ಜರಗಲಿದೆ.
ಬೆಳಿಗ್ಗೆ ೭-೩೦ರಿಂದ ಪೂಜೆ, ತೆಂಗಿನ ಕಾಯಿ ಗಣಪತಿ ಹವನ, ತುಳುವ ಮಹಾಸಭೆ ಕಾಸರಗೋಡು ಇವರಿಂದ ಮಂದಾರ ರಾಮಾಯಣ ಕಾರ್ಯಕ್ರಮ ನಡೆಯಲಿದೆ. ಮಂಗಳೂರು ಮಂದಾರ ಪ್ರತಿಷ್ಠಾನದ ಅಧ್ಯಕ್ಷ ಡಾ. ರಾಜೇಶ್ ಭಟ್ ಮಂದಾರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಾರ್ಮಾರು ಕ್ಷೇತ್ರದ ಆಡಳಿತ ಮೊಕ್ತೇಸರ ರಾಧಾಕೃಷ್ಣ ರೈ ಕಾರ್ಮಾರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಪ್ರಶಾಂತ್ ರೈ ಪುತ್ತೂರು, ರಚನ ಬಿತ್ಗಲ್, ಲವ ಕುಮಾರ್ ಐಲ ಮಂದಾರ ರಾಮಾಯಣ ಸುಗಿಪು-ದುನಿಪು ನಡೆಸಿಕೊಡಲಿದ್ದಾರೆ. ಸಂಜೆ ದುರ್ಗಾ ಪೂಜೆ ನಡೆಯಲಿದೆ.

