-ಮಂದಾರ ರಾಜೇಶ್
ಕರ್ನಾಟಕ ಪಾಲಿಟೆಕ್ನಿಕ್ ಮಂಗಳೂರು ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 27, 2026ರ ಭಾನುವಾರದಂದು ಮುಂಜಾನೆ 11.00 ಗಂಟೆಗೆ ಕೆಪಿಟಿ ಸಭಾಂಗಣದಲ್ಲಿ ನಡೆಯಲಿದೆ.
ಅಂದು ಪ್ರಾರ್ಥನೆ ಹಾಗೂ ಸ್ವಾಗತದೊಂದಿಗೆ ಸಭೆಯ ಕಾರ್ಯಕಲಾಪಗಳು ಆರಂಭಗೊಳ್ಳಲಿದ್ದು, ಹಿಂದಿನ ಮಹಾಸಭೆಯ ವರದಿ ಮಂಡನೆ ಮತ್ತು 2025-26ನೇ ಸಾಲಿನ ಲೆಕ್ಕಪತ್ರ ಮಂಡನೆ ಮಾಡಲಾಗುತ್ತದೆ.
ಇದರ ಜೊತೆಗೆ, ಅಧ್ಯಕ್ಷರ ಅನುಮತಿಯ ಮೇರೆಗೆ ಇತರೆ ಪ್ರಮುಖ ವಿಷಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಿ, ಅಂತಿಮವಾಗಿ ವಂದನಾರ್ಪಣೆ ಹಾಗೂ ರಾಷ್ಟ್ರಗೀತೆಯೊಂದಿಗೆ ಸಭೆಯು ಸಂಪೂರ್ಣಗೊಳ್ಳಲಿದೆ.
ಸಂಘದ ಎಲ್ಲಾ ಹಳೆ ವಿದ್ಯಾರ್ಥಿಗಳು ಈ ಮಹಾಸಭೆಯಲ್ಲಿ ತಪ್ಪದೆ ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ಪಾಲಿಟೆಕ್ನಿಕ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಕೋರಿದ್ದಾರೆ.

