ಕಸಾಪ ಕಾರ್ಕಳ ಕೃತಜ್ಞತಾ ಸಭೆ

0
32

ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ಕಾರ್ಕಳ ಇವರುಕ ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆಯನ್ನು ಸಲ್ಲಿಸಲಾಯಿತು.

ಈ ಕೃತಜ್ಞತಾ ಸಭೆಯು ಕಸಾಪ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಇವರ ಅಧ್ಯಕ್ಷತೆಯಲ್ಲಿ ಕಾರ್ಕಳದ ಪ್ರಕಾಶ್ ಹೋಟೆಲಿನ ಸಂಭ್ರಮ ಸಭಾಂಗಣದಲ್ಲಿ ನಡೆಯಿತು .

ಕಾರ್ಕಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನವು ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಾಲೇಜಿನಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಹಿರಿಯ ಪತ್ರಕರ್ತ ಸಿದ್ಧಾಪುರ ವಾಸುದೇವ ಭಟ್ಟ ವಹಿಸಿ ಯಶಸ್ಸುಗೊಳಿಸಿದರು.

ಸಮ್ಮೇಳನದಲ್ಲಿ ಪುರಮೆರವಣಿಗೆ, ಉದ್ಘಾಟನಾ ಸಮಾರಂಭ, ಪುಸ್ತಕ ಬಿಡುಗೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪುಸ್ತಕ ಮಳಿಗೆ ಉದ್ಘಾಟನೆ ವಿಚಾರ ಗೋಷ್ಠಿ ಸಂವಾದ ಮತ್ತು ಸಮಾರೋಪ ಸಮಾರಂಭದಲ್ಲಿ ಸಾಧಕರ ಸನ್ಮಾನ ಹಾಗೂ ವಿಶೇಷ ಸಾಧಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಸಮ್ಮೇಳನದ ಯಶಸ್ಸಿನಲ್ಲಿ ಕ್ರಿಯೇಟಿವ್ ಪುಸ್ತಕ ಮನೆ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಸಂಸ್ಥಾಪಕರು, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಸಿಬ್ಬಂದಿ ವೃಂದ ಹಾಗೂ ವಿದ್ಯಾರ್ಥಿಗಳು ತಾಲೂಕಿನ ಸ್ಕೌಟ್ಸ್ ಗೈಡ್ಸ್ ಎನ್ ಎಸ್ ಎಸ್ ಎನ್ ಸಿ ಸಿ ಚೆಂಡೆ ತಂಡಗಳು ಗೊಂಬೆಯಾಟ ತಂಡಗಳು ವಿದ್ಯಾರ್ಥಿಗಳು ತುಂಬು ಹೃದಯದ ಸಹಕಾರವಿತ್ತರು. ಹಾಗೆಯೇ ನಮಸ್ತ ಕಾರ್ಕಳ ಜನತೆ ಜಿಲ್ಲಾ ಪರಿಷತ್ತು ಕಾರ್ಕಳ ತಾಲೂಕು ಘಟಕದ ಸದಸ್ಯರು ಘಟಕದ ಕಾರ್ಯಕಾರಿ ಸಮಿತಿ ಸದಸ್ಯರು ಸಹಕರಿಸಿದ್ದರು. ಈ ಸಹಕಾರಕ್ಕೆ ಕಸಾಪ ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸಿದರು.

ಈ ಕೃತಜ್ಞತಾ ಸಭೆಯಲ್ಲಿ
ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಜಿಲ್ಲಾ ಗೌರವ ಪ್ರತಿನಿಧಿ ನಿತ್ಯಾನಂದ ಪೈ ಕಾರ್ಯದರ್ಶಿ ದೇವದಾಸ ಕೆರೆಮನೆ ಸಂಘಟನಾ ಕಾರ್ಯದರ್ಶಿ ಗಣೇಶ್ ಜಾಲ್ಸೂರು ಶಿವಸುಬ್ರಹ್ಮಣ್ಯ ಭಟ್ ದೇವುದಾಸ್ ನಾಯಕ್ ನಾಗೇಶ್ ನಾಗೇಶ್ ನಲ್ಲೂರು ಸುಲೋಚನಾ ಡಾ ಸುಮತಿ ತಿಪ್ಪೇಸ್ವಾಮಿ ರಮೇಶ್ ಪ್ರಭು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here