5 ಕೋಟಿ ರೂ ವೆಚ್ಚದಲ್ಲಿ 2 ಅಂತಸ್ತಿನ ಕನ್ನಡ ಗ್ರಾಮ ಸಾಂಸ್ಕೃತಿಕ ಭವನ ಸಮುಚ್ಚಯದ ಶಿಲಾನ್ಯಾಸ 2025
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಕಾಸರಗೋಡಿನಲ್ಲಿ ನಿರಂತರವಾಗಿ ಕನ್ನಡ ಭಾಷೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಕಾಸರಗೋಡು ಕನ್ನಡ ಗ್ರಾಮದಲ್ಲಿ ಸುಮಾರು 5 ಕೋಟಿ ರೂ ವೆಚ್ಚದಲ್ಲಿ 2 ಅಂತಸ್ತಿನ ಕನ್ನಡ ಗ್ರಾಮ ಸಾಂಸ್ಕೃತಿಕ ಭವನ ಸಮುಚ್ಚಯದ ನಿರ್ಮಾಣ ಯೋಜನೆಯನ್ನು ಕೈಗೊಳ್ಳಲಾಗಿದೆ. ಕಾಸರಗೋಡು ಕನ್ನಡ ಗ್ರಾಮದಲ್ಲಿ 300 ಅಸನವುಳ್ಳ ಸಾಂಸ್ಕೃತಿಕ ಭವನ ನಿರ್ಮಾಣವಾಗಲಿದೆ. ಹೋಂ ಸ್ವ ಮಾದರಿಯ 4 ಅತಿಥಿಗ್ರಹ, ಪ್ರಾದೇಶಿಕ ಜಾನಪದ ವಸ್ತು ಸಂಗ್ರಹಾಲಯ,ಆರ್ಟ್ ಗ್ಯಾಲರಿ,ಬಯಲು, ಸಾಂಸ್ಕೃತಿಕ ರಂಗಮಂಟಪ, ಹಾಗೂ ಕಾಸರಗೋಡು ಸ್ವ ಉದ್ಯೋಗ ತರಬೇತಿ ಕೇಂದ್ರ, ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಶಿಕ್ಷಣ ಅಧ್ಯಯನ ಕೇಂದ್ರ ನಿರ್ಮಾಣದ ಯೋಜನೆಯನ್ನು ಸಿದ್ಧಪಡಿಸಲಾಗಿದೆ.
ಕಾಸರಗೋಡು ಕನ್ನಡ ಗ್ರಾಮ ಸಾಂಸ್ಕೃತಿಕ ಭವನ ಸಮುಚ್ಚಯದ ಆವರಣದಲ್ಲಿ ಕಾಸರಗೋಡು ಸ್ವ ಉದ್ಯೋಗ ತರಬೇತಿ ಕೇಂದ್ರವು ನಿರ್ಮಾಣವಾಗುತ್ತಿದ್ದು,ವಿಶ್ವ ಮಾಧ್ಯಮ ಕೇಂದ್ರ, ಕಂಪ್ಯೂಟರ್ ಮಾಧ್ಯಮ ತರಬೇತಿ ಕೇಂದ್ರ, ಉದ್ಯೋಗಸ್ಥ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಗ್ರಹಿಣಿಯರಿಗೆ ಹೊಲಿಗೆ – ವಸ್ತ್ರ ವಿನ್ಯಾಸ ತರಬೇತಿ ಕೇಂದ್ರ,ಹಿರಿಯ ನಾಗರಿಕರಿಗಾಗಿ ವೈದ್ಯಕೀಯ ತಪಾಸಣಾ ಕೇಂದ್ರ, ಕೆ.ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯ, ಕೆ. ಯಶೋಧ ಸ್ಮಾರಕ,ಕಾಸರಗೋಡು ಗೋಶಾಲೆ, ಕನ್ನಡ ಗ್ರಾಮ,ಕೃಷಿ ಕುಟೀರ ಮತ್ತು ಸಂಸ್ಥಾಪಕ ಅಧ್ಯಕ್ಷರ ಕಾರ್ಯಾಲಯಗಳ ಕಾಮಗಾರಿಯು ಪ್ರಾರಂಭಗೊಂಡಿದ್ದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ),ಕನ್ನಡ ಗ್ರಾಮ, ಕಾಸರಗೋಡು ಇದರ 35 ನೇ ಸಂಸ್ಥಾಪನಾ ದಿನದಂದು 2025 ನವೆಂಬರ್ 4 ರಂದು ಕಾಸರಗೋಡು ಕನ್ನಡ ಗ್ರಾಮದ ಬ್ರಹತ್ ಯೋಜನೆಯ ಶಿಲಾನ್ಯಾಸ ನಡೆಯಲಿದೆ.
ಕನ್ನಡ ಗ್ರಾಮ ಸಾಂಸ್ಕೃತಿಕ ಭವನ ಸಮುಚ್ಚಯದಲ್ಲಿರುವ ವಿವಿಧ ಕೊಠಡಿಗಳ ನಿರ್ಮಾಣಕ್ಕಾಗಿ, ಕಂಪ್ಯೂಟರ್, ಪೀಟೋಪಕರಣ ಇತ್ಯಾದಿಗಳ ಖರೀದಿಗಾಗಿ ಸಾರ್ವಜನಿಕ ಸಂಘ ಸಂಸ್ಥೆಗಳು ಮತ್ತು ಮಹನೀಯರು ನೀಡುವ ದೇಣೆಗೆಯನ್ನು ಸ್ವೀಕರಿಸಲಾಗುವುದು. 2025 ರಿಂದ ಅನುಷ್ಠಾನಗೊಳ್ಳಲಿರುವ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಕನ್ನಡ ಗ್ರಾಮ ಸಾಂಸ್ಕೃತಿಕ ಭವನ ಸಮುಚ್ಚಯದ ಪ್ರಥಮ ಹಂತದ ಈ ಕಾರ್ಯ ಯೋಜನೆಗಳಿಗೆ ಸುಮಾರು ಐದು ಕೋಟಿ ರೂಪಾಯಿ ಅಂದಾಜು ವೆಚ್ಚ, ಮಾಡಬೇಕಾಗುತ್ತದೆ.ಮಹಾ ದಾನಿಗಳು ಕನ್ನಡ ಗ್ರಾಮ ಸಾಂಸ್ಕೃತಿಕ ಭವನ ಸಮುಚ್ಚಯದಲ್ಲಿರುವ ವಿವಿಧ ಅತಿಥಿ ಗ್ರಹಗಳ ಕೊಠಡಿಗಳ ನಿರ್ಮಾಣಕ್ಕೆ ಈ ರೀತಿ ಸಹಕರಿಸಬಹುದು.
1) ರೂಪಾಯಿ ಒಂದು ಕೋಟಿ ರೂಪಾಯಿ ಧನ ಸಹಾಯ ನೀಡಿದವರ ಹೆಸರನ್ನು ಕನ್ನಡ ಗ್ರಾಮ ಸಾಂಸ್ಕೃತಿಕ ಭವನಕ್ಕೆ ಇರಿಸಲಾಗುವುದು.
2) ರೂಪಾಯಿ 50 ಲಕ್ಷ ಮತ್ತು ಅದಕ್ಕಿಂತ ಹೆಚ್ಚು ದೇಣಿಗೆ ನೀಡುವ ದಾನಿಗಳ ಹೆಸರು,ಭಾವಚಿತ್ರ ಪರಿಚಯವನ್ನು ವಿವಿಧ ಕೇಂದ್ರದ ಕೊಠಡಿಗೆ ಇರಿಸಿ ಅಲ್ಲಿ ದಾನಿಗಳ ಕೊಡುಗೆಯನ್ನು ದಾಖಲಿಸಲಾಗುವುದು ಮತ್ತು ದಾನಿಗಳಿಂದಲೇ ಕೊಠಡಿಯನ್ನು ಉದ್ಘಾಟಿಸಲಾಗುವುದು.
3) ರೂಪಾಯಿ 25 ಲಕ್ಷ ಮತ್ತು ಅದಕ್ಕಿಂತ ಹೆಚ್ಚು ದೇಣಿಗೆ ನೀಡುವ ದಾನಿಗಳ ಹೆಸರು, ಭಾವಚಿತ್ರವನ್ನು ವಿವಿಧ ಕೇಂದ್ರದ ಕೊಠಡಿಗೆ ಇರಿಸಿ ಅಲ್ಲಿ ದಾನಿಗಳ ಕೊಡುಗೆಯನ್ನು ದಾಖಲಿಸಲಾಗುವುದು ಮತ್ತು ದಾನಿಗಳಿಂದಲೇ ಕೊಠಡಿಯನ್ನು ಉದ್ಘಾಟಿಸಲಾಗುವುದು.
4) ರೂಪಾಯಿ ಹತ್ತು ಲಕ್ಷ ಹಾಗೂ ಅದಕ್ಕಿಂತ ಹೆಚ್ಚು ದೇಣಿಗೆ ನೀಡುವ ದಾನಿಗಳನ್ನು “ಮಹಾಪೋಷಕರು” ಎಂದು ಗೌರವಿಸಲಾಗುವುದು.
ಅಂಥವರ ಹೆಸರು, ಭಾವಚಿತ್ರ, ಪರಿಚಯವನ್ನು ಸಾಂಸ್ಕೃತಿಕ ಭವನದಲ್ಲಿ ಇರಿಸಲಾಗುವುದು.
5) ರೂಪಾಯಿ ಐದು ಲಕ್ಷ ಹಾಗೂ ಅದಕ್ಕಿಂತ ಹೆಚ್ಚು ದೇಣಿಗೆ ನೀಡುವ ದಾನಿಗಳನ್ನು “ಪೋಷಕರು” ಎಂದು ಗೌರವಿಸಲಾಗುವುದು .
6) ರೂಪಾಯಿ ಒಂದು ಲಕ್ಷ ಹಾಗೂ ಅದಕ್ಕಿಂತ ಹೆಚ್ಚು ದೇಣಿಗೆ ನೀಡುವ ದಾನಿಗಳನ್ನು
ವಿಶ್ವ ಕನ್ನಡ “ಅಭಿಮಾನಿಗಳು”ಎಂದು ಗೌರವಿಸಲಾಗುವುದು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ವಾರ್ಷಿಕ ಸ್ಮರಣ ಸಂಚಿಕೆ ಮತ್ತು “ನಮ್ಮ ಕಾಸರಗೋಡು ಕನ್ನಡ ಗ್ರಾಮ” ತ್ರೈಮಾಸಿಕ ಕನ್ನಡ ಪತ್ರಿಕೆಯಲ್ಲಿ ವಿವಿಧ ಕಾರ್ಯ ಯೋಜನೆಗಳ ಅನುಷ್ಠಾನಕ್ಕಾಗಿ ನೀಡುವ ದೇಣಿಗೆಯನ್ನು ದಾಖಲಿಸಿ ದಾನಿಗಳ ಹೆಸರು, ಭಾವಚಿತ್ರ, ಪರಿಚಯದೊಂದಿಗೆ ಪ್ರಕಟಿಸಲಾಗುವುದು.
ಸಂಪರ್ಕ ವಿಳಾಸ:- ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕನ್ನಡ ಗ್ರಾಮ ರಸ್ತೆ,
ಕಾಸರಗೋಡು – 671121
ಮೊಬೈಲ್ :-9448572016,
9901951965
ಸಾರ್ವಜನಿಕ ಸಂಘ ಸಂಸ್ಥೆಗಳು ಮತ್ತು ಮಹನೀಯರು ನೀಡುವ ದೇಣಿಗೆಯನ್ನು ಈ ಬ್ಯಾಂಕ್ ಖಾತೆಗೆ ಕಳುಹಿಸಿ ಪ್ರೋತ್ಸಾಹಿಸಬಹುದು.
NAME OF THE ACCOUNT HOLDER:-KARAVALI SAMSKRITIKA PRATHISTANA KASARAGOD
NAME OF THE BANK:-CANARA BANK HAMPANAKATTA, MANGALURU:- 575001
SB ACCOUNT NUMBER:-
0612 101 103297
IFSC CODE:-CNRB0000612,
COMMUNICATION ADDRESS:-(SPEED POST & COURIER )
SHIVARAMA KASARAGOD, PRESIDENT, KARAVALI SAMSKRITHIKA PRATHISTANA (R), KANNADA GRAMA, KANNADA GRAMA ROAD
KASARAGOD – 671121
MANGALURU ADDRESS
SHIVARAMA KASARAGOD, SHRI MAHAMAYYA
MADOOR, PO KOTEKAR, MANGALURU – 575022,
MOBILE :-9448572016,
9901951965
email:-
Shivaramakasaragod @ gmail.Com
ಗೂಗಲ್ ಫೇಯಲ್ಲಿ ಹಣ ಕಳುಹಿಸುವವರು, SHIVARAMA KASARAGOD -9448572016 ಇವರಿಗೆ ಕಳುಹಿಸಬಹುದು
ಶಿವರಾಮ ಕಾಸರಗೋಡು
ಮೊಬೈಲ್ :-9448572016
ಅಧ್ಯಕ್ಷರು,