ಪಾಂಗೋಡು, ಕಾಸರಗೋಡು : ಶ್ರೀ ಪಾಂಗೋಡು ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನ ದಲ್ಲಿ ಕಳೆದ 11.10.2026.ರಿಂದ ನಡೆದು ಬರುತ್ತಿರುವ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ “ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿರುವ “ಕಾಸರಗೋಡು ದಸರಾ ಸಂಕೀರ್ತನ ದಷಾಹ ಕಾರ್ಯಕ್ರಮ ದಲ್ಲಿ, ಲಕ್ಷ್ಮಣಾನಂದ ಸರಸ್ವತಿ ಮಹಿಳಾ ಭಜನಾ ಸಂಘ ಗೌರವ ಅಧ್ಯಕ್ಷೆ, ಹಾಗೂ ರಾಮರಾಜ ಕ್ಷತ್ರಿಯ ಯಾನೆ ಕೋಟೆಯರ್ ಮಹಿಳಾ ಸಂಘ ಜಿಲ್ಲಾ ಗೌರವ ಅಧ್ಯಕ್ಷೆ ಕಾಸರಗೋಡು ಮರ್ಚೆಂಟ್ಸ್ ಜಿಲ್ಲಾ ಉಪಾಧ್ಯಕ್ಷಯಾಗಿ ಹೀಗೆ ವಿವಿಧ ಸಂಘ, ಸಂಸ್ಥೆಗಳ ಮೂಲಕ ತನ್ನ ಜೀವಿತವನ್ನು ಧಾರ್ಮಿಕ, ಸಾಮಾಜಿಕ, ಸಮುದಾಯಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ, ಸಮಾಜ ಸೇವಕಿ, ಆಶಾ ರಾಧಾಕೃಷ್ಣ ಅನಂಗೂರ್ ಇವರನ್ನು ಕಾಸರಗೋಡು ದಸರಾ ಪ್ರದಾನ ಸಂಚಾಲಕ, ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ “ಕಾಸರಗೋಡು ದಸರಾ ಸಾಧಕ ಪ್ರಶಸ್ತಿ “ನೀಡಿದರು.

ನವೀನ್ ನಾಯ್ಕ್ ಪಾಂಗೋಡು ಕ್ಷೇತ್ರ ಕಾರ್ಯ ನಿರ್ವಣಾಧಿಕಾರಿ ಇವರು ಕ್ಷೇತ್ರ ದ ಪರವಾಗಿ ಹೂ ಹಾರ ತೊಡಿಸಿ ಸ್ಮರಣಿಕೆ ನೀಡಿ ಗೌರವಿಸಿದರು.. ಇವರು ಈ ಸಮಯದಲ್ಲಿ ಪಾಂಗೋಡು ಕ್ಷೇತ್ರದಲ್ಲಿ ನಡೆದ “ಮಹಾ ಚಂಡಿಕಾ ಯಾಗ “ದ ಸಂದರ್ಭದಲ್ಲಿ ಇವರು ಮಹಿಳಾ ಸಂಘದ ಅಧ್ಯಕ್ಷೆಯಾಗಿ ಅಹರ್ನಿಷಿ ದುಡಿದ ಕಾರ್ಯಗಳನ್ನು ಸ್ಮರಿಸಿ ಕೊಂಡಾಡಿದರು. ಸಂದ್ಯಾ ರಾಣಿ ಸ್ವಾಗತಿಸಿ ಉಷಾ ಕಿರಣ್ ಅನಂಗೂರ್ ಕಾರ್ಯಕ್ರಮ ನಿರೂಪಸಿ, ರಶ್ಮಿ ಅನಂಗೂರ್ ವಂದಿಸಿದರು.

