ಮಂಗಲ್ಪಾಡಿ ಶಾಖೆಯ ಮೊದಲ ಯೋಜನೆಯಾದ “ಬೆಳಕು” (ಬದುಕಿಗೊಂದು ಭರವಸೆಯ ಬೆಳಕು) ಎಂಬ ಸಮಾಜ ಕಾರ್ಯದ ಉದ್ದೇಶದಲ್ಲಿ ಸಂಕಷ್ಟದಲ್ಲಿರುವ ಆಶಕ್ತ ಕುಲಾಲ ಕುಟುಂಬಕ್ಕಾಗಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಯೋಜನೆ ಆದಿತ್ಯವಾರ ಗೌರಧ್ಯಕ್ಷರಾದ ಶ್ರೀ ವಾಸು ಕುಲಾಲ್ ಬೊಲ್ಲಾರ್ ಉಪಸ್ಥಿತಿಯಲ್ಲಿ, ಸದಸ್ಯರ ಜತೆ, ಹಿರಿಯ ವ್ಯಕ್ತಿಗಳ ಸಮ್ಮುಖದಲ್ಲಿ ಚಾಲನೆಗೊಂಡು ಮೊದಲ ಸಹಾಯರ್ಥವಾಗಿ ಕೊಂಡೆವೂರು ದಿ /ತಿಮ್ಮಪ್ಪ ಮೂಲ್ಯ
ಜಯನಗರ(ಮನೆ),ಕೊಂಡೆವೂರು,ಉಪ್ಪಳ(ಅಂಚೆ), ಕಾಸರಗೋಡು.ಇವರು ಅಲ್ಪಕಾಲದ ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು.ಯಾವುದೇ ಚಿಕಿತ್ಸೆ ಫಲಕಾರಿಯಾಗದೆ ಅಗಲಿದ ಕುಟುಂಬಕ್ಕೆ ನೊಂದ ಕುಟುಂಬಕ್ಕೊಂದು ಆಸರೆಯ ಬೆಳಕು ಸಲುವಾಗಿ ಸಂಗ್ರಹವಾದ ಕಿಂಚಿತ್ ಸೇವಾರೂಪವನ್ನು ಹಿರಿಯ ಗೌರವ ಸಲಹೆಗಾರರಾದ ಶ್ರೀ ಸೇಸಪ್ಪ ಮೂಲ್ಯ ಅವರ ನೇತೃತ್ವದಲ್ಲಿ ತಾ.15/06/2025 ಆದಿತ್ಯವಾರ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಕಾರ್ಯದರ್ಶಿಗಳಾದ ಶ್ರೀ ರವೀಂದ್ರ ಬೊಳ್ಳಾರ್, ಕೃಷ್ಣ ಎಸ್ ಕುಲಾಲ್ ಕುಬಣೂರು , ಸದಾನಂದ ಕೆ ಆರ್ ಬೇಕೂರು,ಶಾಖಾ ಸಂಚಾಲಕರಾದ ಎನ್ ಕೆ ಕುಲಾಲ್ ಬೇಕೂರು,ಪುನೀತ್ ಬಾಯಾರು, ಶ್ರವಣ್ ಕೊಂಡೆವೂರು, ವನಿತಾ ರಾಜೇಶ್ ಕುಲಾಲ್ ಕೊಂಡೆವೂರು ಉಪಸ್ಥಿತರಿದ್ದರು.