ಕಾಶಿ ಮೂಲ ಮಠ ವಾರಣಾಸಿ : ಮಾಯಾ ಕಾಮತ್ ಬಳಗದವರಿಂದ ಭಜನಾ ಸಂದ್ಯಾ

0
10

ಕಾಶಿಮಠಾದೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಶ್ರೀಪಾದರ 25 ವರ್ಷದ ಚಾತುರ್ಮಸ ಇದರ ಅಂಗವಾಗಿ ಇತ್ತೀಚಿಗೆ ಮಾಯಾ ಕಾಮತ್ ಈಶ್ವರ ನಗರ ಮಣಿಪಾಲ, ರಮ್ಯಾ ಮಲ್ಯ ಕುಂದಾಪುರ ಮತ್ತು ಬಳಗ ದವರಿಂದ ಶ್ರೀ ಸಂಸ್ಥಾನ ದೇವರು ಮತ್ತು ಶ್ರೀಪಾದರ ಸಮ್ಮುಖದಲ್ಲಿ ನಿರಂತರ 2 ಗಂಟೆಗಳ ಕಾಲ ಭಜನಾ ಸಂದ್ಯಾ ಕಾರ್ಯಕ್ರಮದಲ್ಲಿ ಮರಾಠಿ , ಕನ್ನಡ , ದಾಸರ ಪದಗಳು , ಕೊಂಕಣಿ ಭಜನೆ ಹಾಡಿದರು .

ಪೂಜ್ಯ ಶ್ರೀಗಳು ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು , ಹಾರ್ಮೋನಿಯಂನಲ್ಲಿ ಮಹೇಶ್ ಶೆಣೈ ಮೂಡುಬಿದಿರೆ, ತಬಲದಲ್ಲಿ ಕೃಷ್ಣಾನಂದ ಕಾಮತ್ ಕಾರ್ಕಳ, ತಾಳದಲ್ಲಿ ಹರೀಶ್ ಭಟ್ ನವ ದೆಹಲಿ ಸಹಕರಿಸಿದರು , ಪ್ರಮೀಳಾ ಪ್ರಭು ಪೆರ್ಡೂರ್ ಹಾಗೂ ದೇವಿಕ ಪ್ರಭು ಕುಂದಾಪುರ ಉಪಸ್ಥಿತರಿದ್ದರು.