Saturday, June 14, 2025
Homeಉಡುಪಿಕಟಪಾಡಿ: ಎ.26-27ರಂದು ಮೂಡಬೆಟ್ಟು ಶ್ರೀ ಬಬ್ಬುಸ್ವಾಮಿ ದೈವದ ಸಿರಿ ಸಿಂಗಾರ ನೇಮೋತ್ಸವ

ಕಟಪಾಡಿ: ಎ.26-27ರಂದು ಮೂಡಬೆಟ್ಟು ಶ್ರೀ ಬಬ್ಬುಸ್ವಾಮಿ ದೈವದ ಸಿರಿ ಸಿಂಗಾರ ನೇಮೋತ್ಸವ

ಕಟಪಾಡಿ: ಮೂಡಬೆಟ್ಟು ಕಟಪಾಡಿ ಶ್ರೀ ಬ್ಬಬುಸ್ವಾಮಿ ದೈವಸ್ಥಾನದ ಸಿರಿಸಿಂಗಾರ ನೇಮೋತ್ಸವ ಮತ್ತು ಮಹಾ ಅನ್ನಸಂತರ್ಪಣೆಯು ಎ.26 ಶನಿವಾರ ಮತ್ತು ಎ. 27 ಆದಿತ್ಯವಾರ ಜರುಗಲಿದೆ.
ದಿನಾಂಕ 26-04-2025 ನೆ ಶನಿವಾರ ಮಧ್ಯಾಹ್ನ 12 ಕ್ಕೆ ನೇಮೋತ್ಸವ ಚಪ್ಪರ ಆರೋಹಣ, 1 ಗಂಟೆಗೆ ಮಹಾ ಅನ್ನಸಂತರ್ಪಣೆ, ಸಂಜೆ 6 ಗಂಟೆಗೆ ಶ್ರೀ ಬಬ್ಬುಸ್ವಾಮಿ ದೈವದ ಭಂಡಾರ ಇಳಿಯುವುದು. ರಾತ್ರಿ 7 ಗಂಟೆಗೆ ಕಂಬೇರ್ಲು ದರ್ಶನ, ರಾತ್ರಿ 9 ಗಂಟೆಗೆ ಶ್ರೀ ಬಬ್ಬುಸ್ವಾಮಿ ದೈವದ ಸಿರಿ ಸಿಂಗಾರ ನೇಮೋತ್ಸವ, ರಾತ್ರಿ 1.20ಕ್ಕೆ ತನ್ನಿಮಾನಿಗ ದೈವದ ನೇಮೋತ್ಸವ ಜರುಗಲಿದೆ.
ದಿನಾಂಕ 27-04-2025 ನೇ ಆದಿತ್ಯವಾರ ಬೆಳಿಗ್ಗೆ 9 ಗಂಟೆಗೆ ಶ್ರೀ ಧೂಮಾವತಿ ಬಂಟ ಹಾಗೂ ಪರಿವಾರ ದೈವಗಳ ನೇಮೋತ್ಸವ ಮಧ್ಯಾಹ್ನ 2.15ಕ್ಕೆ ಗುಳಿಗ ದೈವದ ನೇಮೋತ್ಸವ ನಡೆಯಲಿದೆ. ಹಾಗೂ 4.30ಕ್ಕೆ ಶ್ರೀ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ

RELATED ARTICLES
- Advertisment -
Google search engine

Most Popular