ಕಾಪು ಕಿಶೋರ ಯಕ್ಷಗಾನ ಸಂಭ್ರಮ 2025 – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ

0
109

ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇವರು ತರಬೇತಿ ನೀಡಿದ ಕಾಪು ವಿಧಾನಸಭಾ ಕ್ಷೇತ್ರದ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ “ಕಿಶೋರ ಯಕ್ಷಗಾನ ಸಂಭ್ರಮ – 2025” ಸಮಾರಂಭ ಇಂದು ದಿನಾಂಕ 05-12-2025 ರಂದು ಶಿರ್ವ ಮಹಿಳಾ ಸೌಧದಲ್ಲಿ ನಡೆಯಿತು. ಶಾಸಕರು, ಕಾಪು ಪ್ರದರ್ಶನ ಸಂಘಟನಾ ಸಮಿತಿ ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಪ್ರದರ್ಶನ ಸಂಘಟನಾ ಸಮಿತಿ, ಶಿರ್ವ ಸಹಕಾರದೊಂದಿಗೆ ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ವತಿಯಿಂದ ಆಯೋಜಿಸಲಾದ ಈ “ಕಿಶೋರ ಯಕ್ಷಗಾನ – 2025” ಶಿರ್ವ ಮಹಿಳಾ ಸೌಧದಲ್ಲಿ ದಿನಾಂಕ 05-12-2023 ರಿಂದ 07-12-2025 ರ ವರೆಗೆ ಸಂಜೆ 5.00 ರಿಂದ ರಾತ್ರಿ 8.00 ರ ವರೆಗೆ ದಿನಕ್ಕೆ ಎರಡು ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಎರಡು ಪ್ರಸಂಗಗಳಂತೆ ನಡೆಯಲಿದೆ. ಈ ಸಂದರ್ಭದಲ್ಲಿ ಉದ್ಯಮಿ ಅಬ್ಬೆಟ್ಟುಗುತ್ತು ಸಾಯಿನಾಥ ಶೆಟ್ಟಿ, ಕೆ. ಶ್ರೀಪತಿ ಕಾಮತ್, ಶಿರ್ವ ಮಹಿಳಾ ಮಂಡಲ ಅಧ್ಯಕ್ಷೆ ಸ್ಫೂರ್ತಿ ಬಿ ಶೆಟ್ಟಿ,ಯಕ್ಷಗಾನ ಕಲಾರಂಗ (ರಿ.) ಅಧ್ಯಕ್ಷರಾದ ಎಂ.ಗಂಗಾಧರ ರಾವ್, ಯಕ್ಷ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಟ್ರಸ್ಟಿ ವಿ.ಜಿ ಶೆಟ್ಟಿ ಹಾಗೂ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here