ಕೆಸಿಇಟಿ 2026 ಫಲಿತಾಂಶ ಪ್ರಕಟ : ವಿವೇಕಾನಂದ ಪದವಿಪೂರ್ವ ಕಾಲೇಜಿನವಿಶಾಲ್ ಪಿ. ಇಂಜಿನಿಯರಿಂಗ್‌ನಲ್ಲಿ 194ನೇ ರಾಂಕ್ ಪಡೆದು ಪುತ್ತೂರುತಾಲೂಕಿಗೆ ಪ್ರಥಮ

0
3

ಪುತ್ತೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕೆಸಿಇಟಿ-2026 ಫಲಿತಾಂಶದಲ್ಲಿ ಪುತ್ತೂರಿನ Vivekananda Pre-University College ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಕಾಲೇಜಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಇಂಜಿನಿಯರಿಂಗ್ ವಿಭಾಗದಲ್ಲಿ ವಿಶಾಲ್ ಪಿ. ಅವರು 194ನೇ ರಾಂಕ್ ಪಡೆದು ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ತಂದುಕೊಟ್ಟಿದ್ದಾರೆ. ವಿಶಾಲ್ ಅವರು ಪುತ್ತೂರಿನ ಪಡ್ನರಿನ ವಿಠಲ ಪಿ. ಮತ್ತು ರೇಷ್ಮಾ ದಂಪತಿಯ ಪುತ್ರರಾಗಿದ್ದಾರೆ. ಇವರು ಬಿಪಿಒ ವಿಭಾಗದಲ್ಲಿ 558ನೇ ರಾಂಕ್ ಹಾಗೂ ಬಿ.ಫಾರ್ಮ್ ಮತ್ತು ಫಾರ್ಮ್-ಡಿ ವಿಭಾಗದಲ್ಲಿ 1167ನೇ ರಾಂಕ್ ಗಳಿಸಿದ್ದಾರೆ.

ಕಾಲೇಜಿನ ಮತ್ತೋರ್ವ ವಿದ್ಯಾರ್ಥಿ ಅಭಿರಾಮ್ ವಿ. ಭಟ್ ಅವರು ಬಿಪಿಒ ವಿಭಾಗದಲ್ಲಿ 164ನೇ ರಾಂಕ್ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅದಿತಿ ಯು. ಅವರು ಬಿಪಿಟಿ, ಡಿ.ಫಾರ್ಮ್, ಬಿ.ಎಸ್‌ಸಿ. ಎಎಚ್‌ಎಸ್ ವಿಭಾಗಗಳಲ್ಲಿ 291ನೇ ರಾಂಕ್ ಹಾಗೂ ಬಿಪಿಒ ವಿಭಾಗದಲ್ಲಿ 292ನೇ ರಾಂಕ್ ಪಡೆದು ಕಾಲೇಜಿನ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಮುಖ ಸಾಧನೆಗಳು

  • 500ರ ಒಳಗೆ 11 ರಾಂಕ್‌ಗಳು
  • 1000ರ ಒಳಗೆ 27 ರಾಂಕ್‌ಗಳು
  • 5000ರೊಳಗೆ 100ಕ್ಕೂ ಅಧಿಕ ರಾಂಕ್‌ಗಳು
  • ಇಂಜಿನಿಯರಿಂಗ್‌ನಲ್ಲಿ 194ನೇ ರಾಂಕ್ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ
  • ಬಿಪಿಒ ವಿಭಾಗದಲ್ಲಿ 164ನೇ ರಾಂಕ್ ಹಾಗೂ ಹಲವು ವಿಭಾಗಗಳಲ್ಲಿ ರಾಜ್ಯಮಟ್ಟದ ಸಾಧನೆ

ಇದಲ್ಲದೆ ಮೋಕ್ಷಿತ್ ಪಿ.ಎಸ್., ಚೇತನ್ ಕೆ.ವಿ., ಹೇಮಂತ್ ಕುಮಾರ್ ಕೆ.ವೈ., ಪ್ರಾಪ್ತಿ ಆಳ್ವ, ಹಿತೇಶ್ ಗೌಡ ಕೆ.ಕೆ., ಮಂಗಳಾಮೃತ ಕೆ.ಆರ್., ಅಮೋಘ ಕೃಷ್ಣ, ತೀರ್ಥ ಶೆಟ್ಟಿ, ಚಿರಂಜನ್ ಎ., ಸಮೃದ್ಧಿ ಜೆ. ಶೆಟ್ಟಿ, ಸಪ್ತಮಿ ವೈ.ಪಿ., ಶ್ರೀಜಾ, ಪ್ರಸ್ತುತಿ ಪಿ., ತನ್ಮಯಿ ವಾಗ್ಲೆ, ಧನ್ವಿ ಆರ್.ಬಿ., ನಿಶಾಂತ್ ಕೆ.ವಿ., ವಿದ್ಯಾಲಕ್ಷ್ಮಿ ಎಸ್.ಜಿ., ಟೀನಾ ಬಿ.ಎಂ., ಮಾನ್ಯತಾ, ವೈಷ್ಣವಿ ಪಿ., ತರುಣೇಶ್, ಸಮನ್ವಿತಾ ಎಂ.ಎಸ್., ಪ್ರತ್ಯಷ್ ಆರ್.ವೈ., ಅಜೇಯರಾಮ್, ಅನಿರುದ್ಧ ಕೆ.ಎನ್. ಹಾಗೂ ರಾಕೇಶ್ ಜಿ. ಸೇರಿದಂತೆ ಅನೇಕ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಉನ್ನತ ರಾಂಕ್‌ಗಳನ್ನು ಪಡೆದು ಕಾಲೇಜಿನ ಸಾಧನೆಗೆ ಮತ್ತಷ್ಟು ಮೆರುಗು ತಂದಿದ್ದಾರೆ.

5000ರೊಳಗೆ ಸುಮಾರು 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಂಕ್ ಪಡೆದು ಕಾಲೇಜಿನ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಈ ಸಾಧನೆಗಾಗಿ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಸಿಬ್ಬಂದಿ ಅಭಿನಂದಿಸಿ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here