ಕೇಮಾರು : ಡಿ. 20ರಂದು ಶಾಲಾ ವಾರ್ಷಿಕೋತ್ಸವ

0
33

ಕೇಮಾರು ದ. ಕ ಜಿ. ಪಂ. ಕಿರಿಯ ಪ್ರಾಥಮಿಕ ಶಾಲೆ, ಎಸ್.ಡಿ.ಎಂ.ಸಿ ಸಮಿತಿ, ಶಾಲಾಭ್ಯುದಯ ಸಮಿತಿ, ಹಳೆವಿದ್ಯಾರ್ಥಿ ಸಂಘ, ಅಂಗನವಾಡಿ ಕೇಂದ್ರ ಹಾಗೂ ಊರವರ ಸಹಕಾರದೊಂದಿಗೆ ಶಾಲಾ ವಾರ್ಷಿಕೋತ್ಸವ ಸಮಾರಂಭವು 20-12-2025 ನೇ ಶನಿವಾರದಂದು ಜರಗಲಿದೆ.

ಬೆಳಿಗ್ಗೆ 9.00 ಗಂಟೆಗೆ ಧ್ವಜಾರೋಹಣ , ಸಂಜೆ 06.00 ಗಂಟೆಗೆ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ಸಂಜೆ ಗಂಟೆ 07.00 ಗಂಟೆಗೆ ಸಭಾ ಕಾರ್ಯಕ್ರಮ , ರಾತ್ರಿ 9:00 ಗಂಟೆಗೆ : ಶಾಲಾ ಮಕ್ಕಳಿಂದ ಪೌರಣಿಕ ನಾಟಕ “ಭಕ್ತ ಮಾರ್ಕಾಂಡೇಯ . ರಾತ್ರಿ 9.30 ರಿಂದ : ಹಳೆವಿದ್ಯಾರ್ಥಿ ಮತ್ತು ಊರವರಿಂದ ಮನೋರಂಜನಾ ಕಾರ್ಯಕ್ರಮಗಳು .

ರಾತ್ರಿ 10.30 ಗಂಟೆಗೆ : ಸಂಭ್ರಮ ಕಲಾವಿದರು ಕಲ್ಲಮುಂಡ್ಕೂರು ಕಲಾವಿದರಿಂದ “ಗೊಬ್ಬು ಗೊಬ್ಬಾವುನಾಯೆ” ತುಳು ಹಾಸ್ಯಮಯ ನಾಟಕ ಜರುಗಲಿರುವುದು , ಎಂದು ಶಾಲೆಯ ಅಧ್ಯಾಪಕ ವೃಂದ, ಎಸ್.ಡಿ.ಎಂ.ಸಿ ಸಮಿತಿ, ಹಳೆವಿದ್ಯಾರ್ಥಿ ಸಂಘವು ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದೆ‌.

LEAVE A REPLY

Please enter your comment!
Please enter your name here