ಅ.25ರಂದು ಪಾಣೂರು ಗದ್ದೆಯಲ್ಲಿ ‘ಕೆಸರ್‌ದ ಕಂಡೊಡ್ ಒಂಜಿ ದಿನ’ ಕಾರ್ಯಕ್ರಮ

0
12

ವೇಣೂರು: ತುಳುನಾಡಿನ ಮಣ್ಣಿನ ಸೊಗಡು, ಕೃಷಿ ಸಂಸ್ಕೃತಿ ಹಾಗೂ ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ತುಳುವೆರೆ ಕೂಟ ಪಾಣೂರು ಇದರ ಪ್ರಾಯೋಜಕತ್ವದಲ್ಲಿ ‘ಕೆಸರ್‌ದ ಕಂಡೊಡ್ ಒಂಜಿ ದಿನ’ ಕಾರ್ಯಕ್ರಮವು ಅಕ್ಟೋಬರ್ 25ರಂದು ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ನಿಟ್ಟಡೆಯ ಪಾಣೂರು ಗದ್ದೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ತುಳುನಾಡಿನ ವಿಶಿಷ್ಟ ಕೃಷಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೆಸರುಗದ್ದೆಯ ಸಂಭ್ರಮದ ಮೂಲಕ ಸ್ಥಳೀಯ ಸಂಪ್ರದಾಯ ಹಾಗೂ ಗ್ರಾಮೀಣ ಬದುಕಿನ ವೈಶಿಷ್ಟ್ಯವನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವ ಪಡೆದಿದೆ.