
ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯತಿ ವತಿಯಿಂದ ಕಿನ್ನಿಗೋಳಿ ಎಳತ್ತೂರು- ಪಂಜಿನಡ್ಕ ಸಂಪರ್ಕ ರಸ್ತೆಯ ಬಲೆಪು ಬಳಿ ಅಮೃತ್ 2.೦ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಅವೈಜ್ಞಾನಿಕವಾಗಿ ನಿದಾನ ಗತಿಯಲ್ಲಿ ನಡೆಯುತ್ತಿದ್ದು ಭಾರೀ ಮಳೆಗೆ ರಸ್ತೆ ಕೆಸರುಮಯವಾಗಿ ಪರಿಣಮಿಸಿದೆ.
ಕಳೆದ ಕೆಲ ದಿನಗಳಿಂದ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಸ್ಥಗಿತಗೊಂಡಿದ್ದು ರಸ್ತೆ ಬದಿ ಪೈಪ್ ಲೈನ್ ಅಳವಡಿಸಲು ಆಗೆದ ಹೊಂಡ ಅಪಾಯಕಾರಿಯಾಗಿ ಪರಿಣಮಿಸಿದೆ, ಹೊಂಡದಿಂದ ತೆರವುಗೊಳಿಸಿದ ಮಣ್ಣು ರಸ್ತೆಯಲ್ಲಿ ಹರಡಿ ರಸ್ತೆ ಕೆಸರುಮಯವಾಗಿ ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿದ್ದು ಅನೇಕ ದ್ವಿಚಕ್ರವಾಹನಗಳು ಅಪಘಾತಕ್ಕೀಡಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಸ್ಥಳೀಯರಾದ ಶಂಕರ್ ಕೋಟ್ಯಾನ್ ಮಾಧ್ಯಮದ ಜೊತೆ ಮಾತನಾಡಿ ಕಳೆದ ಕೆಲ ದಿನಗಳಿಂದ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಸ್ಥಗಿತಗೊಂಡಿದ್ದು ನಮ್ಮ ಮನೆ ಎದುರು ಭಾಗ ಸಂಪರ್ಕ ರಸ್ತೆ ಕೂಡಾ ಅಗೆದು ಹಾಕಿದ್ದಾರೆ ಈ ಬಗ್ಗೆ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಕುಡಿಯುವ ನೀರಿನ ಪೈಪ್ ಅಳವಡಿಸಿ ಅಪಾಯಕಾರಿ ಹೊಂಡವನ್ನು ಮುಚ್ಚಬೇಕು ಎಂದು ಒತ್ತಾಯಿಸಿದ್ದಾರೆ