ಕೀರ್ತಿಶೇಷ ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯರ
ಭಗವದ್ ಗೀತೆ (ಐದು ಮತ್ತು ಆರನೇ ಅಧ್ಯಾಯ, ಆಚಾರ್ಯತ್ರಯರ ಭಾಷ್ಯದ ವಿಶ್ಲೇಷಣೆಯ ಜತೆಗೆ) ಹಾಗೂ ಹಾಡುಗಬ್ಬಗಳು (ಆನಂದತೀರ್ಥರ ಭಕ್ತಿಗೀತೆಗಳು, ಹದಿನಾಕು ಹಾಡುಗಳು, ಕೃಷ್ಣಮಾಲಾ, ಧ್ಯಾನಮಾಲ, ಶ್ರೀ ಜಯತೀರ್ಥ ಸ್ತುತಿ ಮತ್ತು ಶ್ರೀ ಪೂರ್ಣಬೋಧ ಸ್ತೋತ್ರ (ಶ್ರೀ ರಾಘವೇಂದ್ರ ಸ್ತುತಿ) ಪುಸ್ತಕವನ್ನು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರಮಪೂಜ್ಯ ಪರ್ಯಾಯ ಉಭಯ ಶ್ರೀಪಾದರು ಮೇ 22 ರಂದು ಬಿಡುಗಡೆಗೊಳಿಸಿದರು.
ನಮ್ಮ ಮಠದ ಸುಗುಣಮಾಲಾ ಪತ್ರಿಕೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಶ್ರೀ ಬನ್ನಂಜೆಯವರ ಒಡನಾಟವನ್ನು ಸ್ಮರಿಸಿಕೊಂಡ ಪೂಜ್ಯ ಪರ್ಯಾಯ ಶ್ರೀಪಾದರು ಆಚಾರ್ಯರ ಕೃತಿಗಳು ಅದ್ವಿತೀಯವಾಗಿದ್ದು ಇನ್ನಷ್ಟು ಅವರ ಅಪೂರ್ವ ಕೃತಿಗಳು ಬೇಗನೆ ಜೀಜಾಸುಗಳಿಗೆ ಸಿಗುವಂತಾಗಲಿ ಎಂದು ಹಾರೈಸಿದರು.
ಭಗವದ್ಗೀತೆಯ ಬಹು ಬೇಡಿಕೆ ಯಲ್ಲಿರುವ ಮರುಮುದ್ರಿತ ಈ ಸಂಪುಟ ೫ ಮತ್ತು ಆರನೆಯ ಅಧ್ಯಾಯವನ್ನು ಒಳಗೊಂಡಿರುತ್ತದೆ.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ವಿಶ್ವಸ್ಥರಾದ ಶ್ರೀ ವಿನಯ ಬನ್ನಂಜೆ, ಶ್ರೀ ರಾಘವೇಂದ್ರ ಆಚಾರ್ಯ, ಪರ್ಯಾಯ ಪುತ್ತಿಗೆ ಮಠದ ಶ್ರೀ ಪ್ರಸನ್ನ ಆಚಾರ್ಯ, ಶ್ರೀ ರಮೇಶ್ ಭಟ್ ಉಪಸ್ಥಿತರಿದ್ದರು.
ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷಾಚಾರ್ಯ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು.