ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ : ಬ್ರಹ್ಮಕಲಶೋತ್ಸವದ ಪ್ರಚಾರ ಭಿತ್ತಿಪತ್ರ ಬಿಡುಗಡೆ

0
10

ಉಡುಪಿ: ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಜನವರಿ 20ರಂದು ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಚಾರ ಭಿತ್ತಿಪತ್ರವನ್ನು ವೇ.ಮೂ. ಪುತ್ತೂರು ಹಯವದನ ತಂತ್ರಿ ಅವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಪವಿತ್ರಪಾಣಿ ಜನಾರ್ದನ್ ಕೊಡವೂರು, ಸಮಿತಿ ಸದಸ್ಯರಾದ ಸೀತಾರಾಮ ಆಚಾರ್ಯ, ರಾಜ ಎ. ಸೇರಿಗಾರ್, ವಾದಿರಾಜ ಸಾಲ್ಯಾನ್, ಯಶೋಧರ ಸಾಲ್ಯಾನ್, ಭಾಸ್ಕರ್ ಪಾಲನ್, ಕೆ. ಬಾಬ, ಶೀಲಾ ದೇವಾಡಿಗ ಹಾಗೂ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಸಾಧು ಸಾಲ್ಯಾನ್ ಉಪಸ್ಥಿತರಿದ್ದರು.

ಕಟ್ಟಡಬುಡ ಮಾರಿಕಾಂಬ ದೇವಿ ಸನ್ನಿಧಿಯ ಅಧ್ಯಕ್ಷ ಚಂದ್ರಶೇಖರ್ ಟಿ., ಕೋಶಾಧಿಕಾರಿ ವಿಜಯ ಎಂ. ಬಂಗೇರ, ಉದ್ಯಮಿಗಳಾದ ಸುಧಾಕರ್ ಎ. ಕುಂದರ್, ಹಿರಿಯಣ್ಣ ಕಾಂಚನ್, ರಾಜರಾಜೇಶ್ವರ ಟೂರಿಸ್ಟ್ ಬೋಟಿನ ಗಣೇಶ್ ಅಮೀನ್ ಬಾಪುತೋಟ, ಪ್ರಮುಖರಾದ ಉದಯಕುಮಾರ್ ತೋಂದುಬೆಟ್ಟು, ಉಮೇಶ್ ರಾವ್, ವಾಸುದೇವ ಉಪಾಧ್ಯ, ಗೋವಿಂದ ಪಾಲನ್, ಆನಂದ್ ಟೈಲರ್, ಬಾಲಕೃಷ್ಣ ಕೊಡವೂರು, ಸತೀಶ್ ಕೊಡವೂರು, ಪೂರ್ಣಿಮಾ ಜನಾರ್ದನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಸಿದ್ಧತೆಗಳು ನಡೆಯುತ್ತಿದ್ದು, ಭಕ್ತರು ಹಾಗೂ ಸಾರ್ವಜನಿಕರು ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.