ಕೊಕ್ರಾಡಿ: ಶ್ರೀ. ಕ್ಷೇ.ಧ.ಗ್ರಾ ಯೋ, BC ಟ್ರಸ್ಟ್ ಗುರುವಾಯನಕೆರೆ ಹಾಗೂ ಸರಕಾರಿ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜ್ ಕೊಕ್ರಾಡಿ ಇವುಗಳ ಸಹಕಾರದೊಂದಿಗೆ ಪರಿಸರ ಜಾಗೃತಿ ಮಾಹಿತಿ ಗಿಡ ನಾಟಿ ಕಾರ್ಯಕ್ರಮ ಕಾರ್ಯಕ್ರಮವನ್ನು ತಾಲೂಕು ಜನಜಾಗ್ರತಿ ವೇದಿಕೆ ಸದಸ್ಯರು ರಾಜು, ಪಿ, ಶೆಟ್ಟಿ ಉದ್ಘಾಟನೆ ಮಾಡಿ ಮಾತನಾಡಿ ಮುಂದಿನ ಪೀಳಿಗೆಯ ನೆಮ್ಮದಿ ಜೀವನಕ್ಕೆ ಪರಿಸರ ಸಂರಕ್ಷಣೆ ಅತೀ ಮುಖ್ಯ ಮಾಹಿತಿ ನೀಡಿದರು.
ಪ್ರಸ್ತಾವಿಕವಾಗಿ ಮಾತನಾಡಿದ ವಲಯದ ಮೇಲ್ವಿಚಾರಕರು ಶ್ರೀಮತಿ ವಿಶಾಲ್ ಕೆ ರವರು ಮಾತನಾಡಿ ಯೋಜನೆ ನಡೆದು ಬಂದ ದಾರಿ ಯೋಜನೆ ಯಿಂದ ಸಿಗುವ ಸೌಲಭ್ಯದ ಬಗ್ಗೆ ಯೋಜನೆಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಶಾಲೆಯ ಪ್ರಾಂಶುಪಾಲರಾದ ದಯಾನಂದ್ ರವರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ,ಪ್ರಾಣಿ ಪಕ್ಷಿ ಗಳಿಗೆ ಎಲ್ಲಾ ಸಮಯದಲ್ಲಿ ಆಹಾರ ಸಿಗುವ ರೀತಿಯಲ್ಲಿ ನಾವು ಹೆಚ್ಚು ಹೆಚ್ಚು ಗಿಡ ನಾಟಿ ಮಾಡಬೇಕು ಎಲ್ಲಾ ವಿದ್ಯಾರ್ಥಿಗಳು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ದಿನದಂದು ಗಿಡ ನಾಟಿ ಮಾಡುವಂತೆ ಮಾಹಿತಿ ನೀಡಿದರು.
ಪರಿಸರ ಸಂರಕ್ಷಣೆ ಕುರಿತಂತೆ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಗಿಡ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕಿನ csc ನೋಡಲ್ ಅಧಿಕಾರಿ ಸುರೇಶ ರವರು ಸಾಮಾನ್ಯ್ ಸೇವಾ ಕೇಂದ್ರದಲ್ಲಿ ಸಿಗುವ ಸೇವೆ ಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕರು ಕೃಷ್ಣ, ಮುಖ್ಯ ಶಿಕ್ಷಕರ ಮಹಮ್ಮದ್ ರಿಯಾಜ್, ಕೊಕ್ರಾಡಿ ಮತ್ತು ಸಾವ್ಯ ಒಕ್ಕೂಟದ ಅಧ್ಯಕ್ಷರುಗಳಾದ, ಶ್ರೀ ಮತಿ ವಾರಿಜ, ಯಮುನಾ,ಸೇವಾಪ್ರತಿನಿಧಿ ಶಶಿಧರ್,ವಿಪತ್ತು ಘಟಕ ಸಾಯೋಜಕರು ಹರೀನಾಕ್ಷಿ, ದಿನೇಶ್ ಶೆಟ್ಟಿ ಸಂತೋಷ್ ಪೂಜಾರಿ, ಅಣ್ಣಿm k ರಾಜು ಪೂಜಾರಿ, ಕರಿಯ ಪೂಜಾರಿ, ಹರೀಶ್ ಕಾರ್ಯಕ್ರಮ ನಿರೂಪಣೆ ಅಕ್ಕಮ್ಮ ಕನ್ನಡ ಶಿಕ್ಷಕರು ಮಾಡಿ ಶಾಲಾ ಅಧ್ಯಾಪಕಿ ಲವೀನಾ ವೀಣಾ ಡಯಾಸ್ ಸ್ವಾಗತಿಸಿ ಸಹ ಶಿಕ್ಷಕಿ ವಿದ್ಯಾ ಧನ್ಯವಾದ ಮಾಡಿದರು.ಈ ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರು sdmc ಸದಸ್ಯರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.