ಕೊಲ್ಕತ್ತಾ ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ಆರೋಪಿ ಕಾಲೇಜಿನಲ್ಲಿ ಸೈಕೋನಂತೆ ವರ್ತಿಸುತ್ತಿದ್ದನಂತೆ
ಕೋಲ್ಕತ್ತಾ: ದಕ್ಷಿಣ ಕೋಲ್ಕತ್ತಾದ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ಮನೋಜಿತ್ ಮಿಶ್ರಾ ಹಾಗೂ ಇನ್ನೂ ಇಬ್ಬರು ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಈ ಅತ್ಯಾಚಾರಕ್ಕೂ ಮುನ್ನವೇ ಮನೋಜಿತ್ ಕಂಡರೆ ವಿದ್ಯಾರ್ಥಿನಿಯರು ನಡುಗುತ್ತಿದ್ರಂತೆ.
ಮನೋಜಿತ್ ಮಿಶ್ರಾ ಅತ್ಯಾಚಾರ ವೆಸಗುವ ಮುನ್ನವೇ ಆತನನ್ನು ಕಂಡರೆ ಹೆಣ್ಣುಮಕ್ಕಳೆಲ್ಲಾ ನಡುಗುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಮನೋಜಿತ್ ಸೈಕೋನಂತೆ ವರ್ತಿಸುತ್ತಿದ್ದ, ಆ ವಿದ್ಯಾರ್ಥಿನಿ ಬಳಿ ಮೊದಲೇ ಮದುವೆ ಪ್ರಸ್ತಾಪ ಮಾಡಿದ್ದ. ಇಷ್ಟೇ ಅಲ್ಲ ಹುಡುಗಿಯರ ಅಶ್ಲೀಲ ವಿಡಿಯೋಗಳು ಹಾಗೂ ಫೋಟೊಗಳನ್ನು ಸ್ನೇಹಿತರಿಗೆ ಕಳುಹಿಸುವುದು, ಲೈಂಗಿಕ ದೌರ್ಜನ್ಯ ಎಸಗುವುದು ಮತ್ತು ವಿದ್ಯಾರ್ಥಿನಿಯರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವುದು ಆತನ ಕೆಟ್ಟ ಅಭ್ಯಾಸವಾಗಿತ್ತು.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಮನೋಜಿತ್ ಮಿಶ್ರಾ ಕಾನೂನು ಕಾಲೇಜಿನಲ್ಲಿ ಮ್ಯಾಂಗೋ ಎಂದೇ ಪರಿಚಿತನಾಗಿದ್ದ. ಮನೋಜಿತ್ ವಿರುದ್ಧ ಕಿರುಕುಳ, ಹಲ್ಲೆ ಮತ್ತು ಬ್ಲ್ಯಾಕ್‌ಮೇಲಿಂಗ್ ದೂರುಗಳು ಕಾಲೇಜು ಆಡಳಿತ ಮಂಡಳಿ ಮತ್ತು ಪೊಲೀಸರಿಗೆ ತಲುಪಿವೆ.