ಉಡುಪಿ: ಇಂದು ಜೂನ್ 30, ಸೋಮವಾರ ಮಧ್ಯಾಹ್ನ ಗಂಟೆ 3.15ಕ್ಕೆ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ ಅವರ ಪತ್ರಿಕಾ ಗೋಷ್ಠಿಯು ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆಯಲಿದೆ. ಮಧ್ಯಾಹ್ನ ಗಂಟೆ 3.45ಕ್ಕೆ ‘ತುರ್ತು ಪರಿಸ್ಥಿತಿಯ ಕರಾಳ ದಿನಗಳ ನೆನಪು” ಕುರಿತು ಸಿ.ಟಿ. ರವಿ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.