ಕೋಟೇಶ್ವರ : ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನ ಕೋಟೇಶ್ವರ ಶ್ರೀ ಚಾತುರ್ಮಾಸ್ಯ ಸಮಿತಿ ಕೋಟೇಶ್ವರ: ಹಾಗೂ ಅನಂತ ವೈದಿಕ ಕೇಂದ್ರ, ಉಡುಪಿ ಇವರ ಸಹಯೋಗದಲ್ಲಿ
ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವ ಮತ್ತು ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತ ಪ್ರಯುಕ್ತ “ಹಿಮಾಲಯ ಯೋಗ ಕ್ರೀಯೆ ಹಾಗೂ ಸಂಹಿತಾ ಪ್ರಾಣಾಯಾಮ ಧ್ಯಾನ ಕಾರ್ಯಾಗಾರ” ಅ 4 ಮತ್ತು 5 ರಂದು ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಾಲಯದಲ್ಲಿ ಜರುಗಿತು.
ಈ ಕಾರ್ಯಾಗಾರವನ್ನು ಅಂತಾರಾಷ್ಟ್ರೀಯ ಖ್ಯಾತಿಯ ಯೋಗಗುರು ಡಾ. ಕಾರ್ಕಳ ರಾಘವೇಂದ್ರ ರಂಗನಾಥ ಪೈ (ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನ, ಮೈಸೂರು) ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಯಿತು. ಅವರೊಂದಿಗೆ ಶ್ರೀಮತಿ ಭವಾನಿ ಆರ್. ಪೈ ಹಾಗೂ ಗುರುಪ್ರಸಾದ ಆಚಾರ್ಯ ಸಹ ತರಬೇತುದಾರರಾಗಿ ಭಾಗವಹಿಸಿದರು.
ಪೂಜ್ಯ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಆಶೀರ್ವಚನದಲ್ಲಿ “ಯೋಗ ಮತ್ತು ಧ್ಯಾನವು ಮಾನವನ ಜೀವನದ ಅವಿಭಾಜ್ಯ ಅಂಶಗಳು. ಭಾರತೀಯ ವಿದ್ಯೆಯು ಅಗಾಧ ಜ್ಞಾನಭಂಡಾರವಾಗಿದೆ; ಅದರಲ್ಲಿ ಅಡಗಿರುವ ತತ್ತ್ವಗಳು, ಸಂಶೋಧನೆಗಳು ಮತ್ತು ಅನುಭವಪಾಠಗಳು ಆಧುನಿಕ ಸಮಾಜಕ್ಕೂ ಬೆಳಕು ನೀಡಬಲ್ಲವು. ಸನಾತನ ವಿದ್ಯೆಯು ಕೇವಲ ಪೌರಾಣಿಕತೆಯೆಂದು ಕಾಣದೆ ಅದರ ವೈಜ್ಞಾನಿಕ ಅರ್ಥವನ್ನು ತಿಳಿಯಬೇಕು.” ಆಶಿಸಿದರು.
ಕಾರ್ಯಾಗಾರದ ಪ್ರಾತಃಕಾಲದ ಸುಸಮಯದಲ್ಲಿ ಯೋಗಾಭ್ಯಾಸಿಗಳು “ಸರಳ ಯೋಗ ವ್ಯಾಯಾಮ”, “ಹಿಮಾಲಯ ಯೋಗ ಕ್ರೀಯೆ”, “ಸೂರ್ಯನಮಸ್ಕಾರ”, “ಯೋಗನಡಿಗೆ”, “ಸಂಹಿತಾ ಧ್ಯಾನ”, “ಯೋಗನಿದ್ರೆ”, “ಪ್ರಾಣಾಯಾಮ”, “ವಿಠ್ಠಲಭಾತಿ ತಂತ್ರ” ಮತ್ತು “ಸೀತಾ ಧ್ಯಾನ” ಸೇರಿದಂತೆ ಅನೇಕ ಯೋಗ ತಂತ್ರಗಳನ್ನು ನೆಡೆಸಿಕೊಟ್ಟರು . ಸುಮಾರು 200 ಕ್ಕಿಂತ ಅಧಿಕ ಸಂಖ್ಯೆ ಯಲ್ಲಿ ಭಾಗವಹಿಸಿದರು , ಕಾರ್ಯಾಗಾರವು “ಸಮೂಹ ಪ್ರಾರ್ಥನೆ” ಮತ್ತು “ಧ್ಯಾನ ಸಮಾಪನೆ”ಯೊಂದಿಗೆ ಸಂಪನ್ನವಾಯಿತು. ಮಕ್ಕಳಿಗೆ ಯೋಗದ ಮಹತ್ವ ಹಾಗೂ ಆಹಾರ ಸೇವನೆ ಹಾಗೂ ನಮ್ಮ ದಿನ ನಿತ್ಯದ ಆಚರಣೆ ಬಗ್ಗೆ ಯೋಗ ರಾಘವೇಂದ್ರ ಪೈ ಹಾಗೂ ಅವರ ಧರ್ಮ ಪತ್ನಿ ಶ್ರೀಮತಿ ಭವಾನಿ ಪೈ ಮಕ್ಕಳಿಗೆ ತಿಳಿಯಪಡಿಸಿದರು. ಕಾರ್ಯಗಾರ ನೆಡೆಸಿಕೊಟ್ಟ ಯೋಗಗುರು ಡಾ. ರಾಘವೇಂದ್ರ ಪೈ, ಭವಾನಿ ಪೈ, ಮತ್ತು ಗುರುಪ್ರಸಾದ ಆಚಾರ್ಯ ರವರಿಗೆ ಪೂಜ್ಯ ಶ್ರೀ ಪಾದರು ಗೌರವಾರ್ಪಣೆ ಮಾಡಿ ಫಲ ಮಂತ್ರಾಕ್ಷತೆ ನೀಡಿ ಈ ಯೋಗ ಸಂಸ್ಕೃತಿಯ ಹರಿವು ಮುಂದುವರಿಯಲಿ ಎಂದು ಶುಭ ಹಾರೈಸಿದರು.