ಮಂಗಳಾದೇವಿಯ ಶ್ರೀ ರಾಮಕೃಷ್ಣ ಮಠದಲ್ಲಿ ಅಕ್ಟೋಬರ ತಿಂಗಳ ಸಂಜೆಯ [5 ಗಂಟೆಯ]ಶಿಬಿರವನ್ನು ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿಜಿತಕಾಮಾನಂದಜೀ ಮಹಾರಾಜ್ ಉದ್ಘಾಟಿಸಿ, ತಮ್ಮ ಆಶೀರ್ವಚನದಲ್ಲಿ ಇಂದು ವಿಶ್ವವೇ ಯೋಗದ ಕಡೆಗೆ ಮುಖ ಮಾಡುತ್ತಿದೆ. ಯೋಗದ ಬಗ್ಗೆ ಅರಿವು ಮೂಡಿದೆ. ಅಭ್ಯಾಸ ಮಾಡುವವ ಸಂಖ್ಯೆ ಹೆಚ್ಚಾಗುತ್ತದೆ. ಯೋಗ ಕಲಿತವರು (ನಿತ್ಯ ಅಭ್ಯಾಸ ಮಾಡುವವರು) ಅದರ ಪ್ರಯೋಜನಗಳನ್ನು ಇನ್ನೊಬ್ಬರಿಗೆ ಹಂಚುತ್ತಿರುವುದು ಕಂಡು ಬಂದಿದೆ. ನಮ್ಮ ಹೆಚ್ಚಿನ ಆರೋಗ್ಯ ಸಮಸ್ಯೆ ಉಂಟಾಗುವುದು ಮನಸ್ಸಿನ ದೋಷದಿಂದಲೇ ಎಂಬುದು ದೃಡಪಟ್ಟಿದೆ. ಮನಸ್ಸಿನ ಶಾಂತಿ ನೆಮ್ಮದಿಗೆ ಹಾಗೂ ನಿಯಂತ್ರಣಕ್ಕೆ ನಮ್ಮ ಭಾರತೀಯ ಸಂಸ್ಕೃತಿಕಲೆಯಾದ ಯೋಗ ಎಂಬುದೇ ರಾಜಮಾರ್ಗವಾಗಿದೆ. ವೈದ್ಯರು ಈಗ ಔಷಧಗಳೊಂದಿಗೆ ನಡಿಗೆ, ವ್ಯಾಯಾಮ ಹಾಗೂ ಯೋಗ ಮಾಡಿಎಂದು ಸೂಚಿಸುತ್ತಾರೆ. ಈಗ ವಿಶ್ವ ಸಂಸ್ಥೆ ಯೋಗವನ್ನು ಅಂಗೀಕರಿಸಿದೆ. ಯೋಗ ಆಸನಗಳ ಅಭ್ಯಾಸವು ಶಕ್ತಿ ಮತ್ತು ನಮ್ಯತೆಯನ್ನು ಬೆಳೆಸುತ್ತದೆ. ಅದೇ ಸಮಯದಲ್ಲಿ ನಿಮ್ಮ ನರಗಳನ್ನು ಶಮನಗೊಳಿಸುತ್ತದೆ ಮತ್ತು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಆಸನಗಳು ಸ್ನಾಯುಗಳು, ಕೀಲುಗಳು ಮತ್ತು ಚರ್ಮ ಮತ್ತು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತವೆ ಯೋಗವು ವ್ಯಕ್ತಿಯ ಬಾಹ್ಯ ಆರೋಗ್ಯಕ್ಕೆ ಕೊಡುವಷ್ಟೇ ಪ್ರಾಮುಖ್ಯತೆಯನ್ನುಆತಂರಿಕಆರೋಗ್ಯಕ್ಕೆ ನೀಡುತ್ತದೆಎಂದು ತಿಳಿಸಿದರು. 40 ವರ್ಷಗಳಿಂದ ಯೋಗ ಶಿಕ್ಷಣ ಮೂಲಕ ಸಾವಿರಾರುಜನರಿಗೆ ಮಾರ್ಗದರ್ಶನ ನೀಡಿರುವದೇಲಂಪಾಡಿಯೋಗ ಪ್ರತಿಷ್ಠಾನದÀ“ಯೋಗರತ್ನ” ಗೋಪಾಲಕೃಷ್ಣ ದೇಲಂಪಾಡಿಯವರ ನೇತೃತ್ವದಲ್ಲಿ ಮಂಗಳೂರಿನ ಮಂಗಳಾದೇವಿ ಸಮೀಪದರಾಮಕೃಷ್ಣ ಮಠದಲ್ಲಿವರ್ಷಪೂರ್ತಿಯೋಗಾಸನ ಶಿಬಿರವನ್ನು ತಂಡತAಡವಾಗಿಆಯೋಜಿಸುತ್ತಿದ್ದು ನಾಗರಿಕರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ದೇಲಂಪಾಡಿಯೋಗ ಪ್ರತಿಷ್ಠಾನದ ಯೋಗಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ಯೋಗದ ಮಹತ್ವ ಪ್ರಯೋಜನಗಳನ್ನು ತಿಳಿಸಿದರು.ಶಿಬಿರದಲ್ಲಿ ಪ್ರಾರ್ಥನೆ, ಧ್ಯಾನ, ಅಷ್ಟಾಂಗ ಯೋಗದ ಮಾಹಿತಿ, ಆಸನಗಳು, ಪ್ರಾಣಾಯಾಮ ಮಂತ್ರ ಹಾಗೂ ಯಾವ ಕಾಯಿಲೆಗೆ ಯಾವಯೋಗ, ಮಂತ್ರ ಮುದ್ರೆಗಳು ತಿಳಿಸಿಕೊಡಲಾಗುವುದು. ಯೋಗಚಕ್ರದ ಮಾಹಿತಿ, ವರ್ಣಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಶ್ರೀ ದೇಲಂಪಾಡಿಯವರು ಶಿಬಿರದ ಮಾಹಿತಿ ತಿಳಿಸಿದರು.
ಶ್ರೀ ದೇಲಂಪಾಡಿ ಶಿಷ್ಯರಾದ ಸುಮಾ, ಚಂದ್ರಹಾಸ ಬಾಳ,ಪ್ರೇಮ ಹಾಗೂ ಹರಿಣಿಇವರು ಸಹಕರಿಸಿದರು. ಆಸಕ್ತರು ನೋಂದಾಯಿಸಿಕೊಳ್ಳಲು ಆಶ್ರಮದಕಾರ್ಯಾಲವನ್ನು ಸಂಪರ್ಕಿಸಬಹುದು.
ಸಂಪರ್ಕ: 0824-2414412

