ಮೂಡುಬಿದಿರೆ: ಕೃಷಿ ಕ್ಷೇತ್ರದ ಸರ್ವಾಂಗೀಣ ಸಾಧನೆಗಾಗಿ ಕರ್ನಾಟಕ ರಾಜ್ಯ ಸರ್ಕಾರ ಕೊಡಮಾಡುವ 2023-24ನೇ ಸಾಲಿನ ರಾಜ್ಯ ಮಟ್ಟದ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ಮೂಡುಬಿದಿರೆಯ ಅಂಬೂರಿ ನಾಗರಾಜ ಶೆಟ್ಟಿ ಅವರಿಗೆ ಲಭಿಸಿದೆ.
ಕೃಷಿ ಕ್ಷೇತ್ರದಲ್ಲಿ ವಿನೂತನ ಹಾಗೂ ಹೊಸ ಮತ್ತು ಸೃಜನಾತ್ಮಕ ಅನ್ವೇಷಣೆಯ ಕಾರ್ಯಗಳೊಂದಿಗೆ ಸಾಧನೆ ಮೆರೆದ ರೈತರಿಗೆ ಈ ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಯೊಂದಿಗೆ 50 ಸಾವಿರ ನಗದು ಬಹುಮಾನವನ್ನು ಕೂಡ ನೀಡಲಾಗುತ್ತಿದೆ. ಅಂಬೂರಿ ನಾಗರಾಜ ಶೆಟ್ಟಿ ಅವರು ತನ್ನ ಕೃಷಿ ಕ್ಷೇತ್ರದಲ್ಲಿ ಬಹು ವಿಧದ ಬೆಳೆಗಳನ್ನು ಅನುಷ್ಠಾನಗೊಳಿಸಿ ಉತ್ಪತ್ತಿ ಪಡೆಯುತ್ತಿರುವುದಲ್ಲದೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತನ್ನ ಕೃಷಿ ಕ್ಷೇತ್ರದಿಂದಾಗಿ ಗಮನಸೆಳೆಯುತ್ತಿದ್ದಾರೆ.