ಕುಕ್ಕುಂದೂರು: ಸ್ವಚ್ಛತಾ ಸಹಕಾರ ಹಾಗೂ ಗಿಡ ನೆಡುವ ಕಾರ್ಯಕ್ರಮ

0
42

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರು, ಇಲ್ಲಿ ಇಂದು ಶ್ರೀ ದುರ್ಗಾಪರಮೇಶ್ವರಿ ವಿವಿದೋದ್ದೇಶ ಸಹಕಾರಿ ಸಂಘ (ನಿ) ಜೋಡು ರಸ್ತೆ, ಕುಕ್ಕುಂದೂರು . ಕರ್ನಾಟಕ ರಾಜ್ಯ ಸರಕಾರಿ ಮಂಡಳಿ (ನಿ) ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ (ನಿ)ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛತಾ ಸಹಕಾರ (ಸ್ವಚ್ಛತಾ ಅಭಿಯಾನ್) ಹಾಗೂ ಏಕ್ ಪೆಡ್ ಮಾ ಕೆ ನಾಮ್ ( ಗಿಡ ನೆಡುವ ಕಾರ್ಯಕ್ರಮ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸಭಾ ಕಾರ್ಯಕ್ರಮ ದ ಮೊದಲು ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆಯವರ ಹಸ್ತದಿಂದ ಶಾಲಾ ವಠಾರದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಜಗದೀಶ್ ಹೆಗ್ಡೆ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾದ ದುರ್ಗಪರಮೇಶ್ವರಿ ವಿವಿಧೋದ್ದೇಶ ಸಂಘದ ಅಧ್ಯಕ್ಷರಾದ ಸಂತೋಷ ರಾವ್,C .E .O ಜಯಶ್ರೀ, ಉಪ ಅರಣ್ಯಾಧಿಕಾರಿಗಳಾದ ಚಂದ್ರ ಕಾಂತ್, ಸಹಕಾರಿ ಸಂಘದ ನಿರ್ದೇಶಕರಾದ ಶ್ರಿಯೂ ಅಮೀನ್ ರವರು, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವೃಷಭ ರಾಜ ಕಡಂಬರು ವೇದಿಕೆಯಲ್ಲಿ ಈ ಸಂದರ್ಭದಲ್ಲಿ ಸ್ವಚ್ಛ ಬ್ರಿಗೇಡ್ ತಂಡ ಕಾರ್ಕಳ ಹಾಗೂ ಕುಕ್ಕುಂದೂರು ಇಲ್ಲಿನ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಸಭೆಯಲ್ಲಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು ಎಲ್ಲಾ ಅತಿಥಿಗಳಿಗೆ ಹಾಗೂ ಶಿಕ್ಷಕರಿಗೆ ಗಿಡವನ್ನು ವಿತರಿಸಲಾಯಿತು. ಹಾಗೂ ಸಂಘದ ವತಿಯಿಂದ ಎಲ್ಲರಿಗೂ ಉತ್ತಮ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

LEAVE A REPLY

Please enter your comment!
Please enter your name here