ಕುಕ್ಕುಂದೂರು ಮೇಲ್ಜಡ್ಡು ಬಳಿ 2 ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಕುಲಾಲ ಸಂಘಗಳು ಮನವಿ

0
6

ಕುಕ್ಕುಂದೂರುನ ಮೇಲ್ಜಡ್ಡು ಬಳಿಯಲ್ಲಿ 2 ಕುಟುಂಬಗಳಿಗೆ ಹಕ್ಕು ಪತ್ರ ನೀಡುವಂತೆ ಹಾಗೂ ಆ ಕುಟುಂಬಗಳಿಗೆ ರಕ್ಷಣೆ ನೀಡುವಂತೆ ಕುಲಾಲ ಸಂಘಗಳು ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿದೆ.

ಇಂದು ಆ 2 ಮನೆಗಳಿಗೆ ಭೇಟಿ ಮಾಡಿದ ನಾನಿಳ್ತಾರ್ ಕುಲಾಲ ಸಂಘ, ಕಾರ್ಕಳ ಕುಲಾಲ ಸಂಘ,ಹೊಸ್ಮಾರು ಕುಲಾಲ ಸಂಘದ ಸದಸ್ಯರು ಆ ಮನೆಯವರ ರಕ್ಷಣೆಗೆ ತಮ್ಮ ಸಹಕಾರ ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಾನಿಲ್ತಾರ್ ಕುಲಾಲ ಸಂಘದ ಮಾಜಿ ಅಧ್ಯಕ್ಷರಾದ ಕುಶ ಮೂಲ್ಯರವರು ಈ ಕುಟುಂಬ ಕಳೆದ 35 ವರ್ಷಗಳಿಂದಲೇ ಅಲ್ಲಿ ಮನೆ ಕಟ್ಟಿ ಕೊಂಡಿದ್ದು ಅವರಿಗೆ ಅನಾವಶ್ಯಕ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದರು.

ಬಳಿಕ ಅಲ್ಲಿಂದ ತಹಸೀಲ್ದಾರ್ ರಿಗೆ ಮನವಿ ಮಾಡಲಾಯಿತು. ಈ ಸಮಸ್ಯೆ ಹಲವಾರು ವರ್ಷಗಳಿಂದ ಇದ್ದು ಇದನ್ನು ಪರಿಹಾರ ಮಾಡುವಂತೆ ಆಗ್ರಹಿಸಲಾಯಿತು.

ಅಲ್ಲಿಂದ ಪೊಲೀಸ್ ಇಲಾಖೆಗೆ ಮನವಿ ಮಾಡಿ ಆ ಎರಡು ಕುಟುಂಬಗಳಿಗೆ ರಕ್ಷಣೆ ನೀಡುವಂತೆ ಮನವಿ ನೀಡಲಾಯಿತು.

ಜಯರಾಮ್ ಬಂಗೇರ ಕೆರ್ವಾಶೆ, ಪ್ರಮೋದ್ ಕುಲಾಲ್ ಹೊಸ್ಮಾರು, ಜಗನ್ನಾಥ ಕುಲಾಲ್ ಬೆಳ್ಮಣ್ ವಿಠಲ್ ಕುಲಾಲ್ ಬೆಲಾಡಿ, ಬೊಗ್ಗು ಮೂಲ್ಯ ಬೇಲಾಡಿ, ರಮೇಶ್ ಮಾಳ, ಜ್ಯೋತಿ ಕುಲಾಲ್ ಪದವು, ಜ್ಯೋತಿ ಬಾರಡಿ, ಗೋಪಾಲ ಮೂಲ್ಯ, ಸಂತೋಷ ಕುಲಾಲ್ ಪದವು, ಚಂದ್ರ ಮೂಲ್ಯ ರಾಜೇಶ್ ಕುಲಾಲ ಸಾಂತೂರ್, ಚಿತ್ರೀಶ್ ಕುಲಾಲ್ ಇನ್ನಾ, ನಿಲೇಶ್ ಕುಲಾಲ, ಪ್ರೇಮ್ ಕುಲಾಲ್, ರಾಜೇಶ್ ಕುಲಾಲ್ ಇನ್ನಾ, ನಾಗೇಶ್ ಕುಲಾಲ್ ಬೆಳ್ಮಣ್, ವಿಕಾಸ್ ಕುಲಾಲ್, ಶಶಿಧರ್ ಕುಲಾಲ್ ಕೆರ್ವಾಷೆ, ಸುರೇಶ್ ಕುಲಾಲ್ ಪಾಲಜೆ,ದೇವಪ್ಪ ಕುಲಾಲ್ ನಿಟ್ಟೆ , ಶಂಕರ್ ಕುಲಾಲ್ ಗುರ್ಬೇಟ್ಟು ಮತ್ತಿತರರು ಭಾಗವಹಿಸಿದ್ದರು.

ನಿನ್ನೆಯ ದಿನ ಕಾರ್ಕಳ ಕುಲಾಲ ಸಂಘದ ಮಾಜಿ ಅಧ್ಯಕ್ಷರಾದ ಭೋಜ ಕುಲಾಲ್, ಕಾರ್ಕಳ ಕುಲಾಲ ಸಂಘದ ಅಧ್ಯಕ್ಷ ಹರೀಶ್ಚಂದ್ರ ಕುಲಾಲ್, ಸುರೇಂದ್ರ ಕುಲಾಲ್, ದಿವಾಕರ್ ಬಂಗೇರ ಕೃಷ್ಣ ಕುಲಾಲ್, ವಸಂತ್ ಕುಲಾಲ್, ವಿಜೇಶ್ ಕುಲಾಲ್, ದೇವಪ್ಪ ಕುಲಾಲ್, ವಿನಯ ಧವಳ ಕೀರ್ತಿ ಹಾಗೂ ಸದಸ್ಯರು ಅಲ್ಲಿಗೆ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here