“ಬಲೆ ತುಳು ಕಲ್ಪುಗ” ಕಾರ್ಯಕ್ರಮಕ್ಕೆ ಚಾಲನೆ

0
7

ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ ಆಡಳಿತ ಸಮಿತಿ(ರಿ.)ಬೂಡು ಬೆಳ್ಳಾರೆ ಮತ್ತು ಜೈ ತುಳುನಾಡು (ರಿ.) ಇದರ ಸಹಭಾಗಿತ್ವದಲ್ಲಿ ನಡೆದ ಬಲೆ ತುಳು ಕಲ್ಪುಗ ಕಾರ್ಯಕ್ರಮವು ದಿನಾಂಕ 11.10.2026ರಂದು ಮೊಗೇರ್ಕಳ ಗರಡಿ ಬೂಡುವಿನಲ್ಲಿ ನಡೆಯಿತು. ಭವಿತ್ ಬೂಡು ಮಧುರವಾದ ಕೊಳಲು ವಾದನದೊಂದಿಗೆ ದೇವರನ್ನು ಪ್ರಾರ್ಥಿಸದರು. ಚೋಮ ಪಾಟಾಜೆ ದುಡಿ ಬಡಿಯುವ ಮೂಲಕ ಆರ್.ಕೆ ಭಟ್ ಕುರುಂಬುಡೇಲು ಅಧ್ಯಕ್ಷರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಬೆಳ್ಳಾರೆ ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಾಯಿಲು ಪುಡ್ಕಜೆಯವರ ಪಾಡ್ದನದೊಂದಿಗೆ ಶ್ರೀ ಐತ್ತಪ್ಪ ಅಲೆಕ್ಕಾಡಿ ಉಪನ್ಯಾಸಕರು ಬಿ.ಇ.ಎಂ ಕಾಲೇಜು ಮಂಗಳೂರು ಇವರು ಅಕ್ಕಿಯ ಮೇಲೆ ತುಲು ಲಿಪಿಯಲ್ಲಿ ಓಂ ಬರೆಯುವ ಮೂಲಕ ತುಳು ಅಕ್ಷರಭ್ಯಾಸಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಆಥಿತಿಗಳಾಗಿ ಕರುಣಾಕರ ಪಲ್ಲತ್ತಡ್ಕ ಅಧ್ಯಕ್ಷರು ಮೊಗೇರ ಸಂಘ ಸುಳ್ಯ ತಾಲೂಕು, ಸುಕೇಶ್ ಗೌಡ ಕೆಮ್ಮಾಯಿ ಪ್ರಧಾನ ಕಾರ್ಯದರ್ಶಿ ಜೈ ತುಳುನಾಡು(ರಿ.)ಕೇಂದ್ರ ಸಮಿತಿ, ಪೂರ್ಣಿಮಾ ಬಂಟ್ವಾಳ ಅಧ್ಯಕ್ಷರು ಜೈ ತುಳುನಾಡು (ರಿ.) ಲೇಲೇಲೇಗ ಸಾಂಸ್ಕೃತಿಕ ಕೂಟ, ಕಿಶೋರ್ ಪೂಜಾರಿ ಮುಂಡ್ಲಿ ಅಧ್ಯಕ್ಷರು ಜೈ ತುಳುನಾಡು (ರಿ.) ಬಂಟ್ವಾಳ ಘಟಕ
ಆಥಿತಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ಮೊಗೇರ್ಕಳ ಗರಡಿ ಬೂಡುವಿನಲ್ಲಿ ತುಲು ಲಿಪಿ ಕಲಿಯುವ ಕಾರ್ಯಕ್ರಮ ನಡೆಸಲು ಶ್ರಮಿಸಿದ ಕುಮಾರಿ ಚಿತ್ರಾಕ್ಷಿ ಮುಗೇರ ತೆಗ್ಗು ಇವರನ್ನು ಆರ್.ಕೆ ಭಟ್ ಕುರುಂಬುಡೇಲು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಆಡಳಿತ ಸಮಿತಿ ಅಧ್ಯಕ್ಷರು ವಿಜಯ್ ಪಾಟಾಜೆ ಸ್ವಾಗತಿಸಿ ಕುಮಾರಿ ಚೈತ್ರ ಪುಡ್ಕಜೆ ಪ್ರಥಮ ದರ್ಜೆ ಕಾಲೇಜು ಬೆಳಂದೂರು ಧನ್ಯವಾದ ಅರ್ಪಿಸಿದರು. ಜೈ ತುಲುನಾಡ್(ರಿ.) ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿ ಚಿತ್ರಾಕ್ಷಿ ಮುಗೇರ ತೆಗ್ಗು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನಾರಾಯಣ ಹೈಂದಗೂರು ಪೊಲೀಸ್ ಅಧಿಕಾರಿ ಮಂಗಳೂರು, ಜನಾರ್ಧನ ಕಲ್ಲೋಣಿ ಗೌರವ ಸಲಹೆಗಾರರು ಮೊಗೇರ್ಕಳ ದೈವಸ್ಥಾನ ಬೂಡು ಮೊಗೇರ್ಕಳ ದೈವಸ್ಥಾನದ ಆಡಳಿತ ಸಮಿತಿಯ ಎಲ್ಲ ಪದಾಧಿಕಾರಿಗಳು ಊರಿನ ಹಿರಿಯರು, ಮಕ್ಕಳು ಭಾಗವಹಿಸಿದ್ದರು. ಮಕ್ಕಳಿಗೆ ಜೈ ತುಳುನಾಡು ಸಂಘಟನೆಯವರು ತುಳು ಲಿಪಿ ತರಬೇತಿ ನೀಡಿದರು.
ಸುಮಾರು 35 ಮಕ್ಕಳು ತರಬೇತಿಯನ್ನು ಪಡೆಯಲಿದ್ದಾರೆ.