ಕೊಲೆಯಾದ ರಹಿಮಾನ್‌ ನಿವಾಸಕ್ಕೆ ಹಾಗೂ ಗಾಯಗೊಂಡ ವ್ಯಕ್ತಿ ಕಲಂದರ್‌ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ವಿಧಾನ ಪರಿಷತ್‌ ಶಾಸಕ ಐವನ್‌ ಡಿʼಸೋಜಾ ಭೇಟಿ

0
111

ಕೊಳ್ತಮಜಲು ಅಬ್ದುಲ್‌ ರಹಿಮಾನ್‌ ನಿವಾಸಕ್ಕೆ ಹಾಗೂ ಗಾಯಗೊಂಡ ವ್ಯಕ್ತಿ ಕಲಂದರ್‌ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ವಿಧಾನ ಪರಿಷತ್‌ ಶಾಸಕರಾದ  ಐವನ್‌ ಡಿʼಸೋಜಾ ಭೇಟಿ.

ಕೊಳ್ತಮಜಲು ಅಬ್ದುಲ್‌ ರೆಹೆಮಾನ್‌ರವರನ್ನು ಕೋಮುವಾದಿಗಳ ಗುಂಪೊಂದು ವ್ಯಾಪಾರ ದೃಷ್ಟಿಯಿಂದ ಕರೆದು ವಂಚನೆ ಮಾಡಿ ಕೊಲೆ ಮಾಡುವ ಮೂಲಕ ಸಮಾಜದಲ್ಲಿ ಮಾಡಿದ ಹೇಯ ಕೃತ್ಯವನ್ನು ವಿಧಾನ ಪರಿಷತ್‌ ಶಾಸಕರಾದ ಶ್ರೀ ಐವನ್‌ ಡಿʼಸೋಜಾರವರು ತೀವ್ರವಾಗಿ ಖಂಡಿಸಿದ್ದಾರೆ.

ಇಂದು ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ನೀಡಿದರಲ್ಲದೇ ಇದರ ಹಿಂದೆ ಇರುವ ಶಕ್ತಿಗಳನ್ನುಯಾವುದೇ  ಮುಲಾಜಿಲ್ಲದೇ ಮಟ್ಟಹಾಕಲು ಸರಕಾರವು ಬದ್ದವಾಗಿದೆ ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ಮಾತನಾಡಿದ ಐವನ್‌ ಡಿʼಸೋಜಾರವರು ಸಮಾಜದಲ್ಲಿ ಘಾತುಕ ಶಕ್ತಿಗಳು ಮತ್ತು ಧರ್ಮದ ಜಾತಿಯ ಆಧಾರದಲ್ಲಿ ನಡೆಯುತ್ತಿರುವ ಗಲಭೆಗಳು ಸಮಾಜಕ್ಕೆ ಡೊಡ್ಡ ಕಂಟಕವಾಗಿ ಮಾರ್ಪಟ್ಟಿದೆ. ಇದನ್ನು ಯಾವುದೇ ರೀತಿಯಲ್ಲಿ ಸಹಿಸಲಾಗುವುದಿಲ್ಲ ಇದರ ಹಿಂದೆ ಇರುವ ಘಾತುಕ ಶಕ್ತಿಯನ್ನು ಹುಡುಕಿ ಮಟ್ಟಹಾಕಲು ಸರಕಾರ ಬದ್ದವಾಗಿದೆ. ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಿಳಿಸಲಾಗಿದೆ. ಗೃಹಸಚಿವರು ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಈ ವಿಚಾರವನ್ನು  ಗಂಭೀರವಾಗಿ ತೆಗೆದುಕೊಂಡಿದ್ದಧಾರೆ. ಶಾಂತಿ ನೆಲೆಸಲು ಬೇಕಾದ ಕ್ರಮ ಕೈಗೊಳ್ಳುವುದರ ಜೊತೆಗೆ ಪ್ರಚೋದನಕಾರಿ ಭಾಷಣಗಳ  ಬಗ್ಗೆ ಪೋಲಿಸರು ತೆಗೆದುಕೊಳ್ಳಬೇಕಾದ ತೀರ್ಮಾನದ ಬಗ್ಗೆ ಸರಕಾರವು ಪುನರ್‌ಪರಿಶೀಲನೆ ನಡೆಸಲಿದೆ ಎಂದು ಐವನ್‌ ಡಿʼಸೋಜಾರವರು ತಿಳಿಸಿದರು.

ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವುದರ ಜೊತೆಗೆ ಇದೊಂದು ಘಟನೆಯಿಂದ ಅಮಾಯಕರು ಬಲಿಯಾಗುತ್ತಿರುವುದು ಬೇಸರದ ಸಂಗತಿ ಮತ್ತು ಖಂಡನೀಯ. ಹಾಗೇಯೆ ಆಸ್ಪತ್ರೆಗೆ ತೆರಳಿ ಗಾಯಗೊಂಡ ಕಲಂದರ್‌ರವರನ್ನು ಭೇಟಿ ಮಾಡಿ ಶೀಘ್ರ ಗುಣಮುಖರಾಗಲೆಂದು ಹಾರೈಸಿ, ಚಿಕಿತ್ಸೆಯ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಸರಕಾರ ಕೂಡಲೇ ಸರಕಾರ ತೀರ್ಮಾನ ತೆಗೆದುಕೊಳ್ಳುವುದು ಎಂದು ಐವನ್‌ ಡಿʼಸೋಜಾ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಪಂ. ಮಾಜಿ ಸದಸ್ಯರು ಇಬ್ರಾಹಿಂ ಅಡ್ಡೂರು, ವಲಯ ಅಧ್ಯಕ್ಷರು ವಸಂತ, ಪಂಚಾಯತ್‌ ಸದಸ್ಯರಾದ ಏ.ಕೆ. ಅಶ್ರಫ್‌, ಹನೀಫ್‌, ಅಬಿಬುಲ್ಲಾ ಕಣ್ಣೂರು ಮುಂತಾದವರು ಜೊತೆಗಿದ್ದರು.

LEAVE A REPLY

Please enter your comment!
Please enter your name here