ಮುಕ್ಕ: ಉನ್ನತ ಶಿಕ್ಷಣ ಪಡೆಯುವ ಬಡ ವಿದ್ಯಾರ್ಥಿಗಳಿಗೆ ಸಂಘ ಸಂಸ್ಥೆಗಳ ಹಾಗೂ ಸಮಾಜದ ಪ್ರೋತ್ಸಾಹ ಸಿಕ್ಕಿದಲ್ಲಿ ಕಲಿಕೆಯ ಪ್ರಯತ್ನದಿಂದ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯಲು ಸಾಧ್ಯ ಎಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಮಾಜಿ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕೂರಾಡಿ ಹೇಳಿದರು.
ಅವರು ಮುಕ್ಕದ ಮಿತ್ರಪಟ್ಣ ಯುವಕ ಮಂಡಲದ ವತಿಯಿಂದ ಮಿತ್ರಪಟ್ಣ ಜ್ಞಾನ ದೇಗುಲದ ಸಭಾಂಗಣದಲ್ಲಿ ಭಾನುವಾರ ನಡೆದ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಗೌರವಾಪ೯ಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ನಿಕಟಪೂರ್ವ ಸದಸ್ಯೆ ಶೋಭಾ ರಾಜೇಶ್, ಉದ್ಯಮಿ ದಿನಕರ ಎಮ್, ಮುಕ್ಕ ಪ್ರೋಟೀನ್ಸ್ ಲಿಮಿಟೆಡ್ ಸಂಸ್ಥೆಯ ಮ್ಯಾನೇಜರ್ ಜಗನ್ನಾಥ ಕೋಟ್ಯಾನ್ ಸಸಿಹಿತ್ಲು, ಮಿತ್ರಪಟ್ಣ ಮೊಗವೀರ ಸಂಘದ ಉಪಾಧ್ಯಕ್ಷ ಪುರಂದರ ಬಂಗೇರ,ಶ್ರೀರಾಮ ಭಜನಾ ಮಂದಿರ ಅಧ್ಯಕ್ಷ ಪ್ರದೀಪ್ ಕುಂದರ್,ಮಹಿಳಾ ಸಂಘದ ಅಧ್ಯಕ್ಷೆ ಕವಿತಾ ಶರತ್, ಯಶವಂತ ಪೂಜಾರಿ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಿತ್ರಪಟ್ಣ ಯುವಕ ಮಂಡಲದ ಅಧ್ಯಕ್ಷ ವಿಜಯ ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ತೇಗ೯ಡೆಯಾದ ವಿದ್ಯಾರ್ಥಿ ಆಕಾಶ್ ಜಿ.ಕರ್ಕೇರ ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಹಾಗೂ ಸಮಾಜಕ್ಕೆ ದುಡಿದು, ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ರವೀಂದ್ರ ಕರ್ಕೇರ, ವಿಠ್ಠಲ್ ಶ್ರೀಯಾನ್, ಹರೀಶ್ ಸಾಲ್ಯಾನ್ ಇವರಿಗೆ ಅಭಿನಂದನ ಪತ್ರ ನೀಡಿ ಗೌರವಿಸಲಾಯಿತು.
ಸುಮಾರು 73 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಮಿತ್ರಪಟ್ಣ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಸಂತ ಸುವರ್ಣ,ಮಾರುತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕಿಶೋರ್ ಪುತ್ರನ್, ಭಜನಾ ಮಂದಿರ ಉಪಾಧ್ಯಕ್ಷ ಪುಷ್ಪರಾಜ್ ಕರ್ಕೇರ, ಸುನೀಲ್ ಸಾಲ್ಯಾನ್, ಮೊಗವೀರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಆರ್, ಯಶ್ ರಾಜ್ ಕರ್ಕೇರ,ರಾಜ್ ಕುಮಾರ್ ಕರ್ಕೇರ, ಪ್ರಶಾಂತ್ ಸುವರ್ಣ, ಗೋಪಾಲ್ ಕಾಂಚನ್, ಸಂಘದ ಕೋಶಾಧಿಕಾರಿ ಶಶಿ ಕಕೇ೯ರ,ಅರುಣ್ ಕುಮಾರ್ ಯಾದವ ಕಕೇ೯ರ, ದಾಮೋದರ ಬಂಗೇರ, ಲೋಕೇಶ್ ಬಂಗೇರ,ರಾಜೇಶ್ ಕುಂದರ್,ಪದ್ಮನಾಭ ಸುವಣ೯, ನಿತ್ಯಾನಂದ ಸುವಣ೯,ಜಯರಾಮ್ ಶ್ರೀಯಾನ್,ರಾಜೇಶ್ ಕುಂದರ್,ಪ್ರಶಾಂತ್ ಪುತ್ರನ್,ಸನತ್ ಕೋಟ್ಯಾನ್, ಲೂಯಿಸ್ ಡಿಸೋಜ, ಮೋಹನದಾಸ್ ಬಂಗೇರ, ಕಿಶೋರ್ ಕುಮಾರ್ ಮೊದಲಾದವರು ಭಾಗವಹಿಸಿದರು.
ಪುರುಷೋತ್ತಮ ಸುವಣ೯ ಸ್ವಾಗತಿಸಿದರು, ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಪುತ್ರನ್ ವಂದಿಸಿದರು.