ಹೊಚ್ಚಹೊಸ ಇಎಸ್ ಸೆಲ್ಫ್-ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಕಾರಿನೊಂದಿಗೆ ಇಎಸ್ ಸರಣಿಯನ್ನು ವಿಸ್ತರಿಸಲಾಗುತ್ತಿದೆ.
-ಲೆಕ್ಸಸ್‌ನ ಮುಂದಿನ ಪೀಳಿಗೆಯ ವಿದ್ಯುದೀಕರಿಸಿದ ವಾಹನಗಳ ಸರಣಿಯನ್ನು ಮುನ್ನಡೆಸುತ್ತಿರುವ ಮೊದಲ ಮಾದರಿ ಇದಾಗಿದ್ದು, ಇದು ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (ಎಚ್.ಇ.ವಿ.) ಮತ್ತು ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ (ಬಿ.ಇ.ವಿ) ಪವರ್‌ಟ್ರೇನ್ ಎರಡರ ಆಯ್ಕೆಯಲ್ಲೂ ಲಭ್ಯವಿದೆ.
-ಇದು ಲೆಕ್ಸಸ್ ನ ಹೊಸ ವಿನ್ಯಾಸ ಭಾಷೆಯನ್ನು ಹೊಂದಿದ್ದು ಮುಂದಿನ ತಲೆಮಾರಿನ ವಿನ್ಯಾಸ ತತ್ವ, “ಪ್ರಚೋದನಾತ್ಮಕ ಸರಳತೆ”ಯಿಂದ ಸ್ಫೂರ್ತಿ ಪಡೆದಿದೆ.
- ಹೆಚ್ಚಿನ ಆತ್ಮವಿಶ್ವಾಸ ಮತ್ತು ನಿಶ್ಚಿಂತತೆಗಾಗಿ ಅತ್ಯಾಧುನಿಕ ಲೆಕ್ಸಸ್ ಸೇಫ್ಟಿ ಸಿಸ್ಟಮ್+ ತಂತ್ರಜ್ಞಾನವನ್ನು ಅಳವಡಿಸಲಾಗಿದೆ
- ವಿಶಾಲವಾದ ಒಳಾಂಗಣ, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ಭವಿಷ್ಯದ ವಿನ್ಯಾಸ ಮತ್ತು ದೊಡ್ಡ ಗಾತ್ರದೊಂದಿಗೆ
-14.0-ಇಂಚಿನ ಹೈ-ಡೆಫಿನಿಷನ್ ಟಚ್ ಸ್ಕ್ರೀನ್ ಹೊಂದಿರುವ ಹೊಸ ಪೀಳಿಗೆಯ ಮಲ್ಟಿಮೀಡಿಯಾ ಸಿಸ್ಟಮ್ - ಸುಧಾರಿತ ವಾಹನ ಕಾರ್ಯಕ್ಷಮತೆ ಮತ್ತು ಎಲೆಕ್ಟ್ರಿಫಿಕೇಶನ್ ತಂತ್ರಜ್ಞಾನಗಳು ವಾಹನದ ನಿಶ್ಯಬ್ದತೆ, ಸವಾರಿಯ ಆರಾಮದಾಯಕತೆ ಮತ್ತು ಅತ್ಯುತ್ತಮ ಚಾಲನಾ ಅನುಭವವನ್ನು ಮತ್ತಷ್ಟು ಹೆಚ್ಚಿಸುತ್ತವೆ.
-ಇದು ‘ಎಕ್ಸ್‌ಕ್ವಿಸಿಟ್’ ಮತ್ತು ‘ಲಕ್ಸುರಿ’ ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದೆ. - 6 ಪ್ರೀಮಿಯಂ ಹೊರಾಂಗಣ ಬಣ್ಣಗಳು ಮತ್ತು 2 ಒಳಾಂಗಣ ಬಣ್ಣಗಳು
- ಭಾರತದಾದ್ಯಂತ ಇರುವ ಎಲ್ಲಾ ಲೆಕ್ಸಸ್ ಗೆಸ್ಟ್ ಎಕ್ಸ್‌ಪೀರಿಯನ್ಸ್ ಸೆಂಟರ್ ಗಳಲ್ಲಿ ಹೊಚ್ಚ ಹೊಸ ಇ.ಎಸ್.350ಎಚ್ ಕಾರಿನ ಬುಕ್ಕಿಂಗ್‌ಗಳು ಈಗ ಮುಕ್ತವಾಗಿವೆ.
-ಬೆಲೆ ಈ ಕೆಳಕಂಡ ಕೋಷ್ಠಕದಲ್ಲಿ ನೀಡಿದಂತೆ
ಕ್ರ.ಸಂಖ ಮಾದರಿ ರೂ.ಎಕ್ಸ್-ಶೋರೂಂ
1 ಎಕ್ಸ್ ಕ್ವಿಸಿಟ್ 66,10,000
2 ಲಕ್ಷುರಿ 71,80,000
ಬೆಂಗಳೂರು,: ಲೆಕ್ಸಸ್ ಇಂಡಿಯಾ ತನ್ನ ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಿಸಲಾದ ಎಂಟನೇ ತಲೆಮಾರಿನ ಎಕ್ಸಿಕ್ಯೂಟಿವ್ ಸೆಡಾನ್ ಕಾರಿನ, ಸೆಲ್ಫ್-ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಆವೃತ್ತಿ ಆಲ್-ನ್ಯೂ ಇ.ಎಸ್.350ಎಚ್ ಬುಕಿಂಗ್ ಪ್ರಾರಂಭಿಸಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಇ.ಎಸ್.500ಇ ಜೊತೆಯಲ್ಲಿ ಇ.ಎಸ್.350ಎಚ್ ಬ್ರಾಂಡ್ ನ ವಿದ್ಯುದೀಕರಿಸಿದ ಪೋರ್ಟ್ ಫೋಲಿಯೊ ವಿಸ್ತರಿಸುತ್ತಿದ್ದು ಅತಿಥಿಗಳಿಗೆ ಅತ್ಯುತ್ತಮ ಆಯ್ಕೆ ನೀಡಿದೆ ಮತ್ತು ಲೆಕ್ಸಸ್ ನ ಇಂಗಾಲ-ತಟಸ್ಥ ಭವಿಷ್ಯದತ್ತ ಲೆಕ್ಸಸ್ ಸಂಸ್ಥೆಯ ಬಹು-ಮಾರ್ಗದ ಬದ್ಧತೆಯನ್ನು ಇದು ಒತ್ತಿಹೇಳುತ್ತದೆ.
1989ರಲ್ಲಿ ಸಂಸ್ಥೆಯ ಮುಂಚೂಣಿಯ ಮಾದರಿಯಾದ ಎಲ್.ಎಸ್. ಕಾರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಾಗಿನಿಂದಲೂ, ಇ.ಎಸ್. ಸರಣಿಯು ಜಾಗತಿಕ ಮಟ್ಟದಲ್ಲಿ ಲೆಕ್ಸಸ್ ನ ಪ್ರಮುಖ ಮಾಡೆಲ್‌ಗಳಲ್ಲಿ ಒಂದಾಗಿದೆ. ತನ್ನ ಅಪ್ರತಿಮ ನಿಶ್ಯಬ್ದ, ಆರಾಮದಾಯಕ ಪ್ರಯಾಣ ಮತ್ತು ವಿಶಾಲವಾದ ಒಳಾಂಗಣ ವಿನ್ಯಾಸಕ್ಕೆ ಹೆಸರಾಗಿರುವ ಇ.ಎಸ್. ಕಾರು, ವಿಶ್ವಾದ್ಯಂತ 80ಕ್ಕೂ ಹೆಚ್ಚು ದೇಶ ಹಾಗೂ ಪ್ರಾಂತ್ಯಗಳಲ್ಲಿ ಮಾರಾಟವಾಗಿದೆ. ಭಾರತದಲ್ಲಿ ಲೆಕ್ಸಸ್ ಕಂಪನಿಯ ಉತ್ಪನ್ನಗಳ ಪೈಕಿ ಈ ಮಾಡೆಲ್ ಪ್ರಮುಖ ಆಧಾರಸ್ತಂಭವಾಗಿದ್ದು, ಮಾರುಕಟ್ಟೆಯಲ್ಲಿ ಬ್ರಾಂಡ್ ಸ್ಥಾನವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆಲ್-ನ್ಯೂ ಇ.ಎಸ್. 350ಎಚ್ ಕಾರನ್ನು ಭಾರತದಲ್ಲೇ ತಯಾರಿಸಲಾಗುತ್ತಿದ್ದು, ಇದು ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಮತ್ತಷ್ಟು ಮುಂದುವರಿಸಲಿದೆ. ಇದು ತನ್ನ ಸುಧಾರಿತ ಪ್ಲಾಟ್ ಫಾರ್ಮ್ ಮತ್ತು ವಿನ್ಯಾಸದ ಶೈಲಿಯನ್ನು ಇ.ಎಸ್. 500ಸಿಯೊಂದಿಗೆ ಹಂಚಿಕೊಳ್ಳುವುದಲ್ಲದೆ, ಭಾರತೀಯ ಮಾರುಕಟ್ಟೆಯ ಬಗ್ಗೆ ಲೆಕ್ಸಸ್ ಸಂಸ್ಥೆಗಿರುವ ಆಳವಾದ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ.
ಈ ಪ್ರಕಟಣೆಯ ಕುರಿತು ಲೆಕ್ಸಸ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಹಿಕರು ಇಕೆಯುಚಿ ಅವರು, “ನಾವು ನಮ್ಮ ಇ.ಎಸ್. ಕುಟುಂಬವನ್ನು ಮತ್ತಷ್ಟು ಬಲಪಡಿಸುತ್ತಿರುವಂತೆ ಹಿಂದಿನ ತಲೆಮಾರಿನ ಯಶಸ್ಸಿನ ಹಾದಿಯಲ್ಲೇ ಈ ಆಲ್-ನ್ಯೂ ಇ.ಎಸ್. 350ಎಚ್ ಕಾರನ್ನು ಕೂಡ ಭಾರತದಲ್ಲೇ ತಯಾರಿಸಲಾಗುತ್ತದೆ. ಇದು ಭಾರತೀಯ ಮಾರುಕಟ್ಟೆಯ ಬಗ್ಗೆ ನಮಗಿರುವ ದೀರ್ಘಕಾಲದ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಈ ಹೊಸ ಮಾಡೆಲ್, ವಿದ್ಯುದೀಕರಣದ ಲೆಕ್ಸಸ್ ಸಂಸ್ಥೆಯ ಬಹು-ಮಾರ್ಗದ ಕಾರ್ಯವಿಧಾನವನ್ನು ಒತ್ತಿಹೇಳುತ್ತದೆ ಮತ್ತು ಭಾರತದಲ್ಲಿ ಸುಸ್ಥಿರ ಚಲನಶೀಲತೆಯನ್ನು ಉತ್ತೇಜಿಸುವ ನಮ್ಮ ಸಮರ್ಪಣಾ ಮನೋಭಾವವನ್ನು ಬಲಪಡಿಸುತ್ತದೆ. ಇದೇ ಹಾದಿಯಲ್ಲಿ, ಭಾರತದಲ್ಲಿ ನಮ್ಮ ಗ್ರಾಹಕರು ದೀರ್ಘಕಾಲದಿಂದ ಅಪಾರವಾಗಿ ಇಷ್ಟಪಟ್ಟಿರುವ ಆಲ್-ನ್ಯೂ ಇ.ಎಸ್.350ಎಚ್ ಕಾರಿನ ಬುಕ್ಕಿಂಗ್ ಪ್ರಾರಂಭಿಸುತ್ತಿರುವುದನ್ನು ತಿಳಿಸಲು ನಾವು ಬಹಳ ಸಂತೋಷಪಡುತ್ತೇವೆ. ಈ ಹೊಸ ತಲೆಮಾರಿನ ಕಾರಿನ ಬಗ್ಗೆ ವ್ಯಕ್ತವಾಗಿರುವ ಪ್ರತಿಕ್ರಿಯೆ ಮತ್ತು ನಿರೀಕ್ಷೆಗಳು ನಮಗೆ ಅಪಾರ ಪ್ರೋತ್ಸಾಹವನ್ನು ನೀಡಿವೆ.
ನಮ್ಮ ಗ್ರಾಹಕರಿಗೆ ವೈವಿಧ್ಯಮಯ ವಿದ್ಯುದೀಕರಿಸಿದ ವಾಹನಗಳ ಸರಣಿಯನ್ನು ಒದಗಿಸುವುದರ ಕಡೆಗೆ ನಮ್ಮ ಗಮನ ಸದಾ ಕೇಂದ್ರಿತವಾಗಿದೆ ಮತ್ತು ಈ ಹೊಸ ಇ.ಎಸ್.350ಎಚ್ ಆ ಭರವಸೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಲೆಕ್ಸಸ್ ನ ವಿಶಿಷ್ಟ ತಾಕುಮಿ ಕರಕುಶಲತೆಯ ಉತ್ಸಾಹ ಮತ್ತು ಜಾಗತಿಕ ಮಟ್ಟದಲ್ಲಿ ಪ್ರತಿ ಲೆಕ್ಸಸ್ ವಾಹನವನ್ನು ವ್ಯಾಖ್ಯಾನಿಸುವ ಅದೇ ವಿಶ್ವದರ್ಜೆಯ ಗುಣಮಟ್ಟದ ಮಾನದಂಡಗಳೊಂದಿಗೆ ಇದನ್ನು ಭಾರತದಲ್ಲೇ ತಯಾರಿಸಲಾಗಿದೆ. ಒಟ್ಟಾರೆಯಾಗಿ ಈ ಇ.ಎಸ್. ಮಾದರಿಯು ಸುಧಾರಿತ ತಂತ್ರಜ್ಞಾನ, ಅಪ್ರತಿಮ ಪ್ರಯಾಣದ ಆರಾಮದಾಯಕತೆ ಮತ್ತು ಅತ್ಯುತ್ತಮ ಸ್ಥಿರತೆಯನ್ನು ಹೊಂದಿದ್ದು, ಇವೆಲ್ಲವೂ ನಮ್ಮ ಸಾಂಪ್ರದಾಯಿಕ ಓಮೊಟೆನಾಶಿ ತತ್ವದಿಂದ ಪ್ರೇರಿತವಾಗಿವೆ. ಈ ಆಲ್-ನ್ಯೂ ಇ.ಎಸ್.350ಎಚ್ ನಮ್ಮ ಗಣ್ಯ ಗ್ರಾಹಕರಲ್ಲಿ ಇ.ಎಸ್. ಸರಣಿಯ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂಬ ವಿಶ್ವಾಸ ನಮಗಿದೆ” ಎಂದರು.
ಎಂಟನೇ ತಲೆಮಾರಿನ ಇ.ಎಸ್. ಮಾದರಿಯಾದ ಈ ಆಲ್-ನ್ಯೂ ಕಾರನ್ನು, ಲೆಕ್ಸಸ್ ಸಂಸ್ಥೆಯ ಮುಂದಿನ ತಲೆಮಾರಿನ ಎಲೆಕ್ಟ್ರಿಫೈಡ್ ವಾಹನಗಳ ಸರಣಿಯ ಮುಂಚೂಣಿಯ ಮಾಡೆಲ್ ಆಗಿ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದೆ. ಕಾರ್ಬನ್-ಮುಕ್ತ ಭವಿಷ್ಯದತ್ತ ಲೆಕ್ಸಸ್ ನ ಬಹು-ಮಾರ್ಗದ ಬದ್ಧತೆಯನ್ನು ಬೆಂಬಲಿಸುವ ಈ ಹೊಸ ಇ.ಎಸ್. ಕಾರು, ಹೈಬ್ರಿಡ್ ಎಲೆಕ್ಟ್ರಿಕ್ ವಾಹನ(ಎಚ್.ಇ,ವಿ,) ಮತ್ತು ಬ್ಯಾಟರಿ ಎಲೆಕ್ಟ್ರಿಕ್ ವಾಹನ(ಬಿ.ಇ.ವಿ.) ಹೀಗೆ ಎರಡೂ ರೀತಿಯ ಪವರ್ ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ.
“ಆತ್ಮವಿಶ್ವಾಸವನ್ನು ಕಂಡುಕೊಳ್ಳಿ” ಎಂಬ ವಿಷಯದ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಹೊಸ ಇ.ಎಸ್. ಮಾದರಿಯು, ಹಿಂದಿನ ಪ್ರತಿ ಪೀಳಿಗೆಯ ವಾಹನಗಳು ನೀಡುತ್ತಿದ್ದ ದೀರ್ಘ-ಪ್ರಯಾಣದ ಆರಾಮದಾಯಕತೆಯನ್ನು ಮತ್ತಷ್ಟು ವಿಸ್ತರಿಸುತ್ತದೆ; ಅದರೊಂದಿಗೆ ಚಾಲನೆಗೆ ಗರಿಷ್ಠ ಮಟ್ಟದ ಆತ್ಮವಿಶ್ವಾಸ ಮತ್ತು ನಿಯಂತ್ರಣವನ್ನು ಒದಗಿಸುತ್ತದೆ. ಇದರ ವಿಶಾಲವಾದ ಹಾಗೂ ಹಿತಕರವಾದ ಕ್ಯಾಬಿನ್, ಪ್ರಯಾಣದ ಉದ್ದಕ್ಕೂ ಪ್ರತಿಯೊಬ್ಬ ಪ್ರಯಾಣಿಕರಿಗೂ ನೆಮ್ಮದಿ ಮತ್ತು ನಿರಾಳತೆಯ ಭಾವನೆಯನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ.
- ವಿನ್ಯಾಸ ಪರಿಕಲ್ಪನೆ:
ಹೊಸ ಇ.ಎಸ್. ಮಾದರಿಯು ಒಂದು ಹೊಸ ಮೌಲ್ಯವನ್ನು ಸೃಷ್ಟಿಸಲು ಕ್ಲೀನ್ ಟೆಕ್ x ಎಲಿಗನ್ಸ್ ಎಂಬ ವಿನ್ಯಾಸದ ಪರಿಕಲ್ಪನೆಯನ್ನು ಪರಿಚಯಿಸುತ್ತದೆ. ಇದರ ವಿಶಿಷ್ಟವಾದ ಸೊಗಸನ್ನು ಮತ್ತಷ್ಟು ಪರಿಷ್ಕರಿಸಲಾಗಿದ್ದು, ಸರಳ ಹಾಗೂ ಸ್ವಚ್ಛವಾದ ಸೌಂದರ್ಯವನ್ನು ಸಾಧಿಸಲು ಕ್ರಿಯಾತ್ಮಕ ಮತ್ತು ಭಾವನಾತ್ಮಕ ಮೌಲ್ಯಗಳನ್ನು ಸಮ್ಮಿಳಿತಗೊಳಿಸಲಾಗಿದೆ. “ಎಲ್ಲಾ ಸೀಟುಗಳಿಗೂ ಆಹ್ಲಾದಕರ ಸಮಯ” ಎಂಬ ಪರಿಕಲ್ಪನೆಯ ಮಾರ್ಗದರ್ಶನದಲ್ಲಿ, ಪ್ರತಿ ಪ್ರಯಾಣಿಕರಿಗೂ ಆರಾಮದಾಯಕ ಮತ್ತು ಅತ್ಯಾಧುನಿಕ ಅನುಭವವನ್ನು ನೀಡುವಂತೆ ಈ ಇ.ಎಸ್. ಅನ್ನು ವಿನ್ಯಾಸಗೊಳಿಸಲಾಗಿದೆ. ತನ್ನದೇ ಆದ ವಿಶಿಷ್ಟ ನಿಶ್ಯಬ್ದತೆ ಮತ್ತು ಪ್ರಯಾಣದ ಆರಾಮದಾಯಕತೆಯ ಸಾಮರ್ಥ್ಯಗಳ ಆಧಾರದ ಮೇಲೆ, ಈ ಹೊಸ ಮಾದರಿಯು ಒಟ್ಟಾರೆ ಚಾಲನಾ ಅನುಭವದ ಪರಿಷ್ಕರಣೆಯನ್ನು ಮತ್ತಷ್ಟು ಹೆಚ್ಚಿಸಲು ಹಲವು ಸುಧಾರಣೆಗಳನ್ನು ಪರಿಚಯಿಸಿದೆ. - ಪ್ರಮುಖ ಹೊರಾಂಗಣ ವಿಶೇಷತೆಗಳು
<ಉನ್ನತೀಕರಿಸಿದ ಉಪಸ್ಥಿತಿ ಮತ್ತು ಸೌಖ್ಯ>
ಆಲ್-ನ್ಯೂ ಇ.ಎಸ್.350ಎಚ್ ತನ್ನ ಹಿಂದಿನ ಆವೃತ್ತಿಗಿಂತ ಆಯಾಮದಲ್ಲಿ ದೊಡ್ಡದಾಗಿದೆ. ದೊಡ್ಡ ವ್ಹೀಲ್ ಬೇಸ್, ಹೆಚ್ಚಿನ ಅಗಲ ಮತ್ತು ಎತ್ತರದ ಪ್ರೊಫೈಲ್ ಹೆಚ್ಚು ಪ್ರಭಾವಶಾಲಿ ರಸ್ತೆಯ ಉಪಸ್ಥಿತಿಗೆ ಕೊಡುಗೆ ನೀಡುತ್ತವೆ. ಈ ಪರಿಷ್ಕರಿಸಿದ ಪ್ರಮಾಣಗಳು ಹೆಚ್ಚಿನ ಒಳಾಂಗಣ ಸ್ಥಳ ಮತ್ತು ಚಾಲಕರು ಹಾಗೂ ಪ್ರಯಾಣಿಕರಿಗೆ ಉನ್ನತೀಕರಿಸಿದ ಸೌಖ್ಯಕ್ಕೆ ಕೊಡುಗೆ ನೀಡುತ್ತವೆ.
< ವಿಶಿಷ್ಟ ವಿವರಗಳು ಮತ್ತು ಸಮಗ್ರ ತಂತ್ರಜ್ಞಾನ >
ವಾಹನದ ಹೊರಭಾಗವು ಲೆಕ್ಸಸ್ ನ ವಿಶಿಷ್ಟ ವಿನ್ಯಾಸದ ಶೈಲಿಯನ್ನು ಹೊಂದಿದ್ದು, ಇದರಲ್ಲಿ ಸಿಗ್ನೇಚರ್ ಎಲ್-ಆಕಾರದ ಲೈಟಿಂಗ್ ಎಲಿಮೆಂಟ್‌ಗಳು ಮತ್ತು ಅತ್ಯಾಧುನಿಕ ಹಿಂಭಾಗದ ವಿನ್ಯಾಸ ಸೇರಿವೆ. ಸೇಫ್ ಎಕ್ಸಿಟ್ ಅಸಿಸ್ಟ್ ತಂತ್ರಜ್ಞಾನದೊಂದಿಗಿನ ಎಲೆಕ್ಟ್ರಾನಿಕ್ ಡೋರ್ ಲ್ಯಾಚ್ ರಿಲೀಸ್ ಗಳಂತಹ ಸಮಗ್ರ ತಂತ್ರಜ್ಞಾನಗಳು, ಅನುಕೂಲತೆ ಮತ್ತು ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.
< ಬಾಹ್ಯ ಬಣ್ಣಗಳ ಅತ್ಯಾಧುನಿಕ ಆಯ್ಕೆ >
ಹೊಸ ಇ.ಎಸ್.350ಎಚ್ ಕಾರು ವೈವಿಧ್ಯಮಯ ಜೀವನಶೈಲಿಗಳಿಗೆ ಹೊಂದುವಂತಹ ಆಯ್ದ ಬಣ್ಣಗಳಲ್ಲಿ ಲಭ್ಯವಿರಲಿದೆ. ಈ ಬಣ್ಣಗಳ ಪಟ್ಟಿಯಲ್ಲಿ ವೈಟ್ ನೋವಾ, ಸೋನಿಕ್ ಟೈಟಾನಿಯಂ, ಸೋನಿಕ್ ಕ್ರೋಮ್ ಮತ್ತು ಗ್ರ್ಯಾಫೈಟ್ ಬ್ಲ್ಯಾಕ್ ನಂತಹ ಈಗಾಗಲೇ ಜನಪ್ರಿಯವಾಗಿರುವ ಆಯ್ಕೆಗಳೊಂದಿಗೆ, ಹೊಸದಾಗಿ ಪರಿಚಯಿಸಲಾದ ಸೌ ಮತ್ತು ಸೋನಿಕ್ ಕಾಪರ್ ಬಣ್ಣಗಳೂ ಸೇರಿವೆ. - ಪ್ರಮುಖ ಒಳಾಂಗಣದ ವಿಶೇಷತೆಗಳು
<ಅಂತರ್ಬೋಧೆಯ ಮತ್ತು ಪರಿಷ್ಕರಿಸಿದ ಕ್ಯಾಬಿನ್ ಅನುಭವ>
ಇ.ಎಸ್. 350ಎಚ್ ಕಾರಿನ ಒಳಾಂಗಣವನ್ನು ಆರಾಮದಾಯಕ ಮತ್ತು ಅಂತರ್ಬೋಧೆಯ ಚಾಲನಾ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಇದರ ತಝುನಾ ಕಾಕ್ ಪಿಟ್ ಪರಿಕಲ್ಪನೆಯು ಮುಖ್ಯ ನಿಯಂತ್ರಣಗಳು ಮತ್ತು ಮಾಹಿತಿಯನ್ನು ಚಾಲಕನಿಗೆ ಸುಲಭವಾಗಿ ಕೈಗೆಟುಕುವ ಹಾಗೆ ಹಾಗೂ ಕಣ್ಣಿಗೆ ಕಾಣಿಸುವ ಹಾಗೆ ಇರಿಸುತ್ತದೆ; ಇದು ವಾಹನದೊಂದಿಗೆ ಮತ್ತಷ್ಟು ಸಂಪರ್ಕಿತ ಚಾಲನಾ ಅನುಭವವನ್ನು ನೀಡಲು ಸಹಾಯ ಮಾಡುತ್ತದೆ. 14.0-ಇಂಚು ಹೈ-ಡೆಫಿನಿಷನ್ ಟಚ್ ಸ್ಕ್ರೀನ್ ಇತ್ತೀಚಿನ ಲೆಕ್ಸಸ್ ಇಂಟರ್‌ಫೇಸ್ ಅನ್ನು ಹೊಂದಿದ್ದರೆ, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೆಚ್ಚಿನ ಅನುಕೂಲತೆ ಮತ್ತು ಸುಲಭ ಬಳಕೆಗಾಗಿ ವಾಹನದ ಮಾಹಿತಿಯನ್ನು ಪ್ರದರ್ಶಿಸುತ್ತದೆ. - ಹೈಬ್ರಿಡ್ ಕಾರ್ಯಕ್ಷಮತೆಯ ಹೊಸ ಯುಗ
ಹೊಸದಾಗಿ ಅಭಿವೃದ್ಧಿಪಡಿಸಲಾದ ಹೈಬ್ರಿಡ್ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಇದು ಅತ್ಯಂತ ದಕ್ಷತೆಯುಳ್ಳ 2.5 ಲೀಟರ್ ಇನ್-ಲೈನ್ 4-ಸಿಲಿಂಡರ್ ಎಂಜಿನ್, ಟ್ರಾನ್ಸ್ ಆಕ್ಸಲ್‌ನೊಂದಿಗೆ ಸಂಯೋಜಿಸಲ್ಪಟ್ಟ ಪಿಸಿಯು (ಪವರ್ ಕಂಟ್ರೋಲ್ ಯೂನಿಟ್) ಹೊಂದಿರುವ ಹೊಸ ಇ-ಆಕ್ಸಲ್ ಮತ್ತು ಲೀಥಿಯಂ-ಐಯಾನ್ ಬ್ಯಾಟರಿಯನ್ನು ಒಳಗೊಂಡಿದೆ. ಈ ಹೈಬ್ರಿಡ್ ವ್ಯವಸ್ಥೆಯು ಅತ್ಯುತ್ತಮ ಶಕ್ತಿಯ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆ ಮತ್ತು ನಿಶ್ಯಬ್ದತೆಯ ನಡುವೆ ಉನ್ನತ ಮಟ್ಟದ ಸಮತೋಲನವನ್ನು ಒದಗಿಸುತ್ತದೆ. ಇದರ ಜೊತೆಗೆ, ಹೊಸದಾಗಿ ಅಭಿವೃದ್ಧಿಪಡಿಸಲಾದ ಲಿಥಿಯಂ-ಐಯಾನ್ ಬ್ಯಾಟರಿ ಸೆಲ್, ಹೆಚ್ಚಿನ ಫಲಿತಾಂಶ ನೀಡುವ ಜೊತೆಗೆ ಬ್ಯಾಟರಿಯ ವಿನ್ಯಾಸವು ಕಿರಿದು ಹಾಗೂ ಹಗುರವಾಗಿರಲು ಸಹಾಯ ಮಾಡಿದೆ. - ಲೆಕ್ಸಸ್ ಅನುಭವಕ್ಕೆ ಜೀವ ನೀಡುವ ಸುಧಾರಿತ ತಂತ್ರಜ್ಞಾನಗಳು
o ವಿಶ್ವದ ಮೊದಲ*** ರೆಸ್ಪಾನ್ಸಿವ್ ಹಿಡನ್ ಸ್ವಿಚ್ ಗಳು ಅತ್ಯಾಧುನಿಕ ಒಳಾಂಗಣ ವಿನ್ಯಾಸದೊಂದಿಗೆ ಕ್ರಿಯಾತ್ಮಕತೆಯನ್ನು ತಡೆರಹಿತವಾಗಿ ಸಂಯೋಜಿಸುತ್ತವೆ. ಇದು ಬಳಕೆಯ ಸುಲಭತೆ ಮತ್ತು ಸೌಂದರ್ಯದ ಸಾಮರಸ್ಯ ಎರಡನ್ನೂ ಹೆಚ್ಚಿಸುತ್ತದೆ.
o ಹೊಸ ಪೀಳಿಗೆಯ ಮಲ್ಟಿಮೀಡಿಯಾ ಸಿಸ್ಟಮ್: 14-ಇಂಚಿನ ಡಿಸ್ಪ್ಲೇಯನ್ನು ಹೊಂದಿರುವ ಈ ವ್ಯವಸ್ಥೆಯು ಬಳಕೆದಾರರೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಪ್ರಯಾಣದಲ್ಲಿ ಸ್ವಾತಂತ್ರ್ಯ ಮತ್ತು ಸ್ಫೂರ್ತಿಯ ಭಾವನೆಯನ್ನು ಜಾಗೃತಗೊಳಿಸುತ್ತದೆ. ಇದು ಅತ್ಯಂತ ದಕ್ಷ, ಅಂತರ್ಬೋಧೆ ಮತ್ತು ನಿಖರವಾಗಿದೆ. ತ್ವರಿತ ಪ್ರತಿಕ್ರಿಯೆ ಮತ್ತು ಸುಲಭ ಪ್ರವೇಶಕ್ಕಾಗಿ ಇದನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದ್ದು, ಗ್ರಾಹಕರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಪ್ರತಿ ಪ್ರಯಾಣದಲ್ಲೂ ಬಳಕೆದಾರ-ಕೇಂದ್ರಿತ ವಿನ್ಯಾಸವನ್ನು ಒದಗಿಸುತ್ತದೆ. - ಸುಧಾರಿತ ಸುರಕ್ಷತೆಯ ತಂತ್ರಜ್ಞಾನ
ಲೆಕ್ಸಸ್ ಸಂಸ್ಥೆಗೆ ಗ್ರಾಹಕರ ಸುರಕ್ಷತೆಯೇ ಸರ್ವೋಚ್ಚ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ, ಇ.ಎಸ್. 350ಎಚ್ ಕಾರನ್ನು ಅತ್ಯಾಧುನಿಕ ಲೆಕ್ಸಸ್ ಸೇಫ್ಟಿ ಸಿಸ್ಟಮ್+ ನೊಂದಿಗೆ ಸಜ್ಜುಗೊಳಿಸಲಾಗಿದೆ. ಸಕ್ರಿಯ ಸುರಕ್ಷತಾ ತಂತ್ರಜ್ಞಾನಗಳ ಈ ಸಮಗ್ರ ಪ್ಯಾಕೇಜ್‌ನಲ್ಲಿ ಸುಧಾರಿತ ಪ್ರಿ-ಕೊಲಿಷನ್ ಸಿಸ್ಟಮ್ (ಪಿಸಿಎಸ್), ಆಲ್-ಸ್ಪೀಡ್ ಡೈನಾಮಿಕ್ ರೇಡಾರ್ ಕ್ರೂಸ್ ಕಂಟ್ರೋಲ್, ಲೇನ್ ಟ್ರೇಸಿಂಗ್ ಅಸಿಸ್ಟ್ (ಎಲ್.ಟಿ.ಎ) ಮತ್ತು ಡ್ರೈವ್ ಮಾನಿಟರ್ (ಕೇವಲ ಲಕ್ಸುರಿ ಮಾದರಿ ಮಾತ್ರ) ಸೇರಿವೆ. ಇವೆಲ್ಲವನ್ನೂ ಚಾಲಕನ ಜಾಗರೂಕತೆಯನ್ನು ಬೆಂಬಲಿಸಲು ಹಾಗೂ ಹೆಚ್ಚು ನೈಸರ್ಗಿಕ ಮತ್ತು ಮಾನವ ಸಹಜವಾದ ಮಧ್ಯಸ್ಥಿಕೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.
7 ತಡೆರಹಿತ ಸೌಖ್ಯ ಮತ್ತು ಅನುಕೂಲ
ಸಂಪೂರ್ಣ ಹೊಸದಾದ ಇ.ಎಸ್.350ಎಚ್ ಮಾದರಿಯು ಸೌಕರ್ಯ, ನಿಯಂತ್ರಣ ಮತ್ತು ಮನಸ್ಸಿನ ಶಾಂತಿಯನ್ನು ಮರು ವ್ಯಾಖ್ಯಾನಿಸುವ ಸಂಪರ್ಕಿತ ವಿಶೇಷತೆಗಳ ಸಮಗ್ರ ಪ್ಯಾಕೇಜ್ ನೊಂದಿಗೆ ಸಜ್ಜುಗೊಂಡಿದ್ದು, ಅತ್ಯುನ್ನತ ಮಾಲೀಕತ್ವದ ಅನುಭವವನ್ನು ಖಾತ್ರಿಪಡಿಸುತ್ತದೆ. ಲೆಕ್ಸಸ್ ಕನೆಕ್ಟೆಡ್ ಅಪ್ಲಿಕೇಷನ್ ಮೂಲಕ, ಚಾಲಕರು ಇಂಧನದ ಮಟ್ಟ ಮತ್ತು ಡ್ರೈವಿಂಗ್ ರೇಂಜ್ ಅನ್ನು ಯಾವುದೇ ಶ್ರಮವಿಲ್ಲದೆ ಮೇಲ್ವಿಚಾರಣೆ ಮಾಡಬಹುದು. ಇದರೊಂದಿಗೆ, ಇಂಜಿನ್ ಸ್ಟಾರ್ಟ್ ಮಾಡುವುದು, ಡೋರ್ ಲಾಕ್ ಮಾಡುವುದು, ಕಿಟಕಿಗಳನ್ನು ಮುಚ್ಚುವುದು ಮತ್ತು ಸ್ಲೈಡ್ ರೂಫ್ ಅನ್ನು ನಿಯಂತ್ರಿಸುವುದರಂತಹ ಪ್ರಮುಖ ಕಾರ್ಯಗಳನ್ನು ದೂರದಿಂದಲೇ ಸುಲಭವಾಗಿ ನಿರ್ವಹಿಸಬಹುದು. ಈ ತಡೆರಹಿತ ಏಕೀಕರಣವು ವಾಹನದೊಂದಿಗಿನ ದೈನಂದಿನ ಒಡನಾಟವನ್ನು ಹೆಚ್ಚು ಸಹಜ ಹಾಗೂ ಪರಿಣಾಮಕಾರಿಯಾಗಿಸುತ್ತದೆ.
ಈ ಮೂಲಭೂತ ಕಾರ್ಯಚಟುವಟಿಕೆಗಳ ಆಚೆಗೂ, ಈ ಸಂಪರ್ಕಿತ ವ್ಯವಸ್ಥೆಯು ಆರಾಮದಾಯಕತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುತ್ತದೆ. ವಾಹನ ಮಾಲೀಕರು ಪ್ರತಿ ಪ್ರಯಾಣಕ್ಕೂ ಮುನ್ನ ಕಾರು ಸಂಪೂರ್ಣವಾಗಿ ಸಿದ್ಧವಾಗಿರುವಂತೆ ನೋಡಿಕೊಳ್ಳಲು — ಹವಾನಿಯಂತ್ರಣ, ಸೀಟ್ ಹೀಟಿಂಗ್ ಮತ್ತು ವೆಂಟಿಲೇಶನ್ ಸೇರಿದಂತೆ — ಕ್ಯಾಬಿನ್‌ನ ವಾತಾವರಣ ಸೆಟ್ಟಿಂಗ್ ಗಳನ್ನು ಮುಂಚಿತವಾಗಿಯೇ ನಿಗದಿಪಡಿಸಬಹುದು ಮತ್ತು ರಿಮೋಟ್ ಮೂಲಕ ಸಕ್ರಿಯಗೊಳಿಸಬಹುದು. ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್‌ವಾಚ್ ಗಳ ಜೋಡಣೆಯು ಈ ವೈಶಿಷ್ಟ್ಯಗಳನ್ನು ಸುಲಭವಾಗಿ ಬಳಸಲು ಅನುವು ಮಾಡಿಕೊಡುತ್ತದೆ, ಹಾಗೂ ಲೈವ್ ಕಾರ್ ಟ್ರ್ಯಾಕಿಂಗ್ ಚಾಲಕರು ತಮ್ಮ ವಾಹನ ಇರುವ ಸ್ಥಳದೊಂದಿಗೆ ಯಾವಾಗಲೂ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ. ಮತ್ತಷ್ಟು ನೆಮ್ಮದಿಯನ್ನು ನೀಡಲು, ಇದರಲ್ಲಿ ಅಳವಡಿಸಲಾಗಿರುವ ತುರ್ತು ಕರೆ ವೈಶಿಷ್ಟ್ಯವು ಅಗತ್ಯವಿದ್ದಾಗ ತಕ್ಷಣದ ಸಹಾಯವನ್ನು ಒದಗಿಸುತ್ತದೆ. ಈ ಮೂಲಕ ತಂತ್ರಜ್ಞಾನ ಮತ್ತು ವಿಶ್ವಾಸಾರ್ಹತೆಯನ್ನು ಸಂಯೋಜಿಸಿ, ನಿಜಕ್ಕೂ ಒಂದು ಉನ್ನತ ಮಟ್ಟದ ಚಾಲನಾ ಅನುಭವವನ್ನು ನೀಡುತ್ತದೆ. - ಸಮಗ್ರ ಮೌಲ್ಯಾಧಾರತ ಸೇವಾ ಕೊಡುಗೆಗಳು
ಲೆಕ್ಸಸ್ ಇಂಡಿಯಾ, ವಾಹನ ಮಾಲೀಕತ್ವದ ಪ್ರಯಾಣವು ಯಾವುದೇ ಅಡೆತಡೆಗಳಿಲ್ಲದೆ ಸಾಗುವಂತೆ ಮಾಡಲು ಮೌಲ್ಯವರ್ಧಿತ ಸೇವೆಗಳು ಮತ್ತು ಸುಧಾರಿತ ರೋಡ್ ಸೈಡ್ ಅಸಿಸ್ಟೆನ್ಸ್ ಪ್ಯಾಕೇಜ್‌ಗಳನ್ನು ನೀಡುತ್ತದೆ. ಇದು 5-ವರ್ಷಗಳ ರೋಡ್ ಸೈಡ್ ಅಸಿಸ್ಟೆನ್ಸ್ (ಆರ್.ಎಸ್.ಎ) ಪ್ಯಾಕೇಜ್ ಅನ್ನು ಒಳಗೊಂಡಿದ್ದು, ಇದರಲ್ಲಿ ಟೋಯಿಂಗ್, ಟ್ಯಾಕ್ಸಿ ಸೇವೆ ಮತ್ತು ಸ್ವದೇಶಕ್ಕೆ ವಾಪಸ್ ಕಳುಹಿಸುವಿಕೆ ಮುಂತಾದ ಸೇವೆಗಳು ಸೇರಿವೆ. ಇದರ ಜೊತೆಗೆ, ಮಾಲೀಕತ್ವದ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಲು, ಇ.ಎಸ್.350ಎಚ್ ಕಾರಿನ ಮೇಲೆ 8-ವರ್ಷಗಳು/2,00,000 ಕಿಮೀ ವಾಹನ ಮತ್ತು ಹೈಬ್ರಿಡ್ ಬ್ಯಾಟರಿ ವಾರಂಟಿಯನ್ನು ನೀಡಲಾಗುತ್ತದೆ. ಇದು ಮಾಲೀಕತ್ವದ ಸಂಪೂರ್ಣ ಪ್ರಯಾಣದಲ್ಲಿ ಗ್ರಾಹಕರಿಗೆ ಹೆಚ್ಚಿನ ನೆಮ್ಮದಿಯನ್ನು ನೀಡುತ್ತದೆ.
ಇದಲ್ಲದೆ, ಕಡಿಮೆ ಇಎಂಐ ಮತ್ತು ನಿಶ್ಚಿತ ಭವಿಷ್ಯದ ಮರುಖರೀದಿ ಮೌಲ್ಯವನ್ನು ಹೊಂದಿರುವ ಅಶ್ಯೂರ್ಡ್ ಬೈ ಬ್ಯಾಕ್ ಪ್ರೋಗ್ರಾಂ ಪ್ರೀಮಿಯಂ ಮಾಲೀಕತ್ವದ ಅನುಭವದೊಂದಿಗೆ ಆರ್ಥಿಕ ಅನುಕೂಲ ಬಯಸುವ ಗ್ರಾಹಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ವಿಶಿಷ್ಟವಾದ ಲೆಕ್ಸಸ್ ಲಕ್ಸುರಿ ಕೇರ್ ಸೇವಾ ಪ್ಯಾಕೇಜ್ ಗಳು ಕಂಫರ್ಟ್, ರಿಲ್ಯಾಕ್ಸ್ ಮತ್ತು ಪ್ರೀಮಿಯರ್ ಆಯ್ಕೆಗಳಲ್ಲಿ ಲಭ್ಯವಿದ್ದು, ಇವು 3 ವರ್ಷಗಳು / 40,000 ಕಿಮೀ ನಿಂದ ಪ್ರಾರಂಭಿಸಿ 8 ವರ್ಷಗಳು / 1,60,000 ಕಿಮೀ ವರೆಗಿನ ಅವಧಿಗೆ ಲಭ್ಯವಿವೆ.
ಆಲ್-ನ್ಯೂ ಇ.ಎಸ್.350ಎಚ್ ಬುಕಿಂಗ್ ಗಳು ಈಗ ಪ್ರಾರಂಭವಾಗಿವೆ. ಅತಿಥಿಗಳು ತಮ್ಮ ಹತ್ತಿರದ ಲೆಕ್ಸಸ್ ಗೆಸ್ಟ್ ಎಕ್ಸ್ ಪೀರಿಯೆನ್ಸ್ ಸೆಂಟರ್ ಗೆ ಭೇಟಿ ನೀಡಿ ತಮ್ಮ ಬುಕಿಂಗ್ ಗಳನ್ನು ಮಾಡಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಅತಿಥಿಗಳು www.lexusindia.com ಇಲ್ಲಿಗೆ ಲಾಗಾನ್ ಆಗಬಹುದು.
** ನಿಯಮ ಹಾಗೂ ನಿಬಂಧನೆಗಳು ಅನ್ವಯಿಸುತ್ತವೆ. ವಿವರಗಳಿಗೆ ದಯವಿಟ್ಟು ನಿಮ್ಮ ಹತ್ತಿರದ ಲೆಕ್ಸಸ್ ಡೀಲರ್ ಸಂಪರ್ಕಿಸಿ ಅಥವಾ ನಿಮ್ಮ ವಾಹನದೊಂದಿಗೆ ನೀಡಲಾದ ವಾರೆಂಟಿ ಮ್ಯಾನ್ಯುಯಲ್ ಪರಿಶೀಲಿಸಿ.
- ಏಪ್ರಿಲ್ 2025ರಂತೆ, ಪ್ರಕಟಿಸಲಾದ ಮಾದರಿಗಳಿಗೆ ಲೆಕ್ಸಸ್ ಆಂತರಿಕ ದತ್ತಾಂಶ ಆಧರಿಸಿ

