ಲಯನ್ಸ್ ಕ್ಲಬ್ ಸೋಮೇಶ್ವರ – ವಿಶ್ವ ಹೃದಯ ದಿನಾಚರಣೆ

0
132

ಮಂಗಳೂರು: ಲಯನ್ಸ್ ಕ್ಲಬ್ ಸೋಮೇಶ್ವರದ ಸೇವಾ ಚಟುವಟಿಕೆಗಳ ಅಂಗವಾಗಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟೇಕಾರ್ ಸಹಯೋಗದಲ್ಲಿ ವಿಶ್ವ ಹೃದಯ ದಿನವನ್ನು ಆಚರಿಸಲಾಯಿತು.

ಬೆಳಿಗ್ಗೆ ಕೋಟೇಕಾರಿನಲ್ಲಿ ಪ್ರಾರಂಭವಾದ ಪಾದಯಾತ್ರೆಗೆ ಲಯನ್ಸ್ ಡಿಸ್ಟ್ರಿಕ್ಟ್ ಎಲ್.ಸಿ.ಎಫ್ ಸಂಯೋಜಕ ಲಯನ್ ಪಿ.ವಿ. ಅನಿಲ್ ಕುಮಾರ್ ಫ್ಲ್ಯಾಗ್ ಆಫ್ ಮಾಡಿ ಉದ್ಘಾಟನೆ ನೆರವೇರಿಸಿದರು. “Don’t skip the beat” ಎಂಬ ಸಂದೇಶದೊಂದಿಗೆ ನಡೆದ ಪಾದಯಾತ್ರೆಯಲ್ಲಿ ಲಯನ್ಸ್ ಕ್ಲಬ್ ಸದಸ್ಯರು ಮತ್ತು ಅವರ ಕುಟುಂಬದವರು, ಕೋಟೇಕಾರ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಪಾಂಡ್ಯರಾಜ್ ಬಳ್ಳಲ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರು, ಎಕ್ಸ್ ಸರ್ವಿಸ್‌ಮೆನ್ ಅಸೋಸಿಯೇಶನ್ ಅಬ್ಬಕ್ಕ ವಲಯದ ಮಾಜಿ ಸೈನಿಕರು, ಆಶಾಕಾರ್ಯಕರ್ತೆಯರು ಹಾಗೂ ಸ್ಥಳೀಯರು ಉತ್ಸಾಹದಿಂದ ಭಾಗವಹಿಸಿದರು.

ಬೇರೀ ಪಟ್ಟಣದಲ್ಲಿ ಆಟೋ ಚಾಲಕರಿಗಾಗಿ ಸಿಪಿಆರ್ ಡೆಮೋ ಪ್ರದರ್ಶಿಸಲಾಯಿತು. ನಂತರ ಕೋಟೇಕಾರ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸವಿತಾ ಎಸ್.ಜಿ. ಹೃದಯಾರೋಗ ಜಾಗೃತಿ ಕುರಿತು ಉಪನ್ಯಾಸ ನೀಡಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಕೆ. ವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲಯನ್ ನಿತಿನ್ ಕೃಷ್ಣ ಮಾತನಾಡಿದರು. ಕಾರ್ಯದರ್ಶಿ ಕೆ. ಗೋಪಿನಾಥನ್ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here