ಲಯನ್ಸ್ ಕ್ಲಬ್ ವೇಣೂರುಗೆ ಪ್ರಾಂತ್ಯ ಅಧ್ಯಕ್ಷರ ಬೇಟಿ ಕಾರ್ಯಕ್ರಮ ಹಾಗೂ ವಲಯ ಅಧ್ಯಕ್ಷರ ಬೇಟಿ ಕಾರ್ಯಕ್ರಮ ಜರಗಿತು ಸಭಾಧ್ಯಕ್ಷರಾದ ಹರೀಶ್ ಕುಮಾರ್ ರವರು ಸಭೆಯನ್ನು ಸುಸ್ಥಿತಿಗೆ ತಂದು ಸರ್ವರನ್ನು ಸ್ವಾಗತಿಸಿದರು ಸೇವ ಕಾರ್ಯಕ್ರಮಗಳ ವರದಿಯನ್ನು ಕಾರ್ಯದರ್ಶಿ ಜಯರಾಮ್ ಹೆಗಡೆ ಮಂಡಿಸಿದರು ಸ್ಥಳೀಯ ಗ್ರಾಮ ಪಂಚಾಯಿತಿನ ಉಗ್ರಾಣಿಯಾದ ಜಗದೀಶ ದೇವಾಡಿಗ ರವರನ್ನು ಅವರ ವಿಶೇಷ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಅನೇಕ ಸೇವಾ ಚಟುವಟಿಕೆಗಳು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಸಮವಸ್ತ್ರಗಳ ವಿತರಣೆ ಕಾರ್ಯಕ್ರಮ ಜರಗಿತು.
ಮಾಜಿ ಅಧ್ಯಕ್ಷರಾದ ನಿತೇಶ್ ಎಚ್ ಪ್ರಾಂತ್ಯ ಅಧ್ಯಕ್ಷರ ಪರಿಚಯವನ್ನು ಸಭೆಗೆ ಮಾಡಿದರು ತರುವಾಯ ಪ್ರಾಂತ್ಯ ಅಧ್ಯಕ್ಷರಾದ ಲಯನ್ ವೆಂಕಟೇಶ್ ಹೆಬ್ಬಾರ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಕ್ಲಬ್ ಗಳಲ್ಲಿ ಒಂದಾದ ವೇಣೂರು ಕ್ಲಬ್ ವಿಶೇಷವಾಗಿ ಎರಡು ಬಾರಿ ರಕ್ತದಾನ ಶಿಬಿರ ಹಾಗೂ ಸ್ಥಳೀಯ ಅಂಬುಲೆನ್ಸ್ ಗೆ ಸಹಾಯಧನ ವೈದ್ಯಕೀಯ ಶಿಬಿರಗಳನ್ನು ಹಾಗೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನೆರವೇರಿಸಿ ಪ್ರಾಂತ್ಯ ಮಾತ್ರವಲ್ಲ ಲಯನ್ಸ್ ಜಿಲ್ಲೆಯಲ್ಲಿ ಮಾದರಿ ಸಂಸ್ಥೆಯಾಗಿ ಮೂಡಿಬಂದಿದೆ ವಿಶೇಷವಾಗಿ ಕ್ಲಬ್ಬಿನ ಮಾಜಿ ಪ್ರಾಂತ್ಯಧ್ಯಕ್ಷರಾದ ಲಯನ್ ಪ್ರವೀಣ್ ಕುಮಾರ್ ಇಂದ್ರ ರವರು ತಮ್ಮ ಅಧಿಕಾರಾವಧಿಯಲ್ಲಿ ಕ್ಲಬ್ಬಿಗೆ ಸ್ವಂತ ಕಟ್ಟಡ ಹಾಗೂ ನಿಯೋಜಿತ ಪ್ರಾಂತ್ಯ ಅಧ್ಯಕ್ಷರಾದ ಜಗದೀಶ್ ಚಂದ್ರ ಡಿಕೆ ಯವರ ಸೇವೆಯನ್ನು ಸ್ಮರಿಸಿದರು ಅಲ್ಲದೆ ನಿಯೋಜಿತ ಅಧ್ಯಕ್ಷರಾದ ಸುಧೀರ್ ಭಂಡಾರಿ ಕಾರ್ಯದರ್ಶಿ ಜಯರಾಮ್ ಹೆಗ್ಡೆ ಕೋಶಾಧಿಕಾರಿ ಸತೀಶ್ ಚಿಗುರು ಹಾಗೂ ನಿಯೋಜಿತ ಪ್ರಾಂತ್ಯ ಅಧ್ಯಕ್ಷರಾದ ಜಗದೀಶ್ ಚಂದ್ರ ಡಿಕೆ ಹಾಗೂ 2025-26 ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ತರುವಾಯ ಪ್ರಾಂತ್ಯ ಅಧ್ಯಕ್ಷ ದಂಪತಿಗಳಿಗೆ ಹಾಗೂ ವಲಯ ಅಧ್ಯಕ್ಷರಿಗೆ ಗೌರವಿಸಲಾಯಿತು ವಲಯ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಹಾಗೂ ರೋಷನ್ ಡಿಸೋಜ, ಪ್ರಾಂತ್ಯ ರಾಯಬಾರಿ ವಸಂತ್ ಶೆಟ್ಟಿ ಶ್ರದ್ಧಾ ಶುಭ ಸಂಶನೆಗೈದರು ವೇದಿಕೆಯಲ್ಲಿ ಪ್ರಾಂತ್ಯದ ಪ್ರಥಮ ಮಹಿಳೆ ಪ್ರತಿಭಾ ಹೆಬ್ಬಾರ್, ಝೋನ್ ಎನ್ ವೈ ಜೆಸ್ಸಿ ಮೆನೇಜಸ್ ಕಾರ್ಯದರ್ಶಿ ಜಯರಾಮ್ ಹೆಗಡೆ ಕೋಶಾಧಿಕಾರಿ ಧನಂಜಯ್ ಭಂಡಾರಿ ದೇವದಾಸ ಶೆಟ್ಟಿ ಹಿಬರೋಡಿ ಬಿ ಶಿವಪ್ರಸಾದ್ ರವಿಶೆಟ್ಟಿ ಸುಲ್ಕೇರಿ ಮೊದಲಾದವರು ಉಪಸ್ಥಿತರಿದ್ದರು ಜಗದೀಶ್ ಚಂದ್ರ ಡಿಕೆ ಕಾರ್ಯಕ್ರಮವನ್ನು ನಿರೂಪಿಸಿದರು ಪ್ರಾಂತ್ಯದ ವಿವಿಧ ಕ್ಲಬ್ಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತ ರಿದ್ದರು