ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಡಿ ವತಿಯಿಂದ ಅಕ್ಷಯ ಪಾತ್ರೆ ಮಕ್ಕಳ ಬಿಸಿ ಊಟ ಯೋಜನೆಗೆ 25 ಲಕ್ಷ ರೂಪಾಯಿಯ ಫುಡ್ ಟ್ರಕ್ ಹಸ್ತಾಂತರ

0
30

ಬೆಂಜನ ಪದವು ಮಂಗಳೂರು, ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಡಿ ವತಿಯಿಂದ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಫೌಂಡೇಶನ್ (LCIF) ಸಹಕಾರದೊಂದಿಗೆ ಸಮಾಜದ ಬಡ ಮಕ್ಕಳ ಶಿಕ್ಷಣ ಮತ್ತು ಆಹಾರ ದ ಅವಶ್ಯಕತೆಗಳನ್ನು ಪೂರೈಸುವ ಉದಾತ್ತ ಕಾರ್ಯಕ್ರಮವಾದ ಅಕ್ಷಯ ಪಾತ್ರೆ ಮಕ್ಕಳ ಬಿಸಿ ಊಟ ಯೋಜನೆಗೆ 25 ಲಕ್ಷ ರೂಪಾಯಿಯ ಫುಡ್ ಟ್ರಕ್ ಹಸ್ತಾಂತರ ಮಾಡಲಾಯಿತು. ಜಿಲ್ಲಾ ರಾಜ್ಯಪಾಲರಾದ ಕುಡ್ಪಿ ಅರವಿಂದ ಶನೈ ಯವರು ಅಕ್ಷಯ ಪಾತ್ರೆ ಪೌಂಡೇಶನ್ ಗೆ ಹಸ್ತಾಂತರಿಸಿದರು. ಈ ಕಾರ್ಯಕ್ರಮದಲ್ಲಿ ಅಕ್ಷಯ ಪಾತ್ರೆ ಫೌಂಡೇಶನ್ ಉಪಾಧ್ಯಕ್ಷರಾದ ಸನಾಧನ ದಾಸ್ ಪ್ರಭು ಹಾಗೂ ನಕುಲ್ ಕೃಷ್ಣ ದಾಸ್ ಪ್ರಭು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು ಕಾರ್ಯಕ್ರಮದಲ್ಲಿ ಪ್ರಥಮ ಉಪರಾಜ್ಯಪಾಲ ಗೋವರ್ಧನ್ ಶೆಟ್ಟಿ ದ್ವಿತೀಯ ಉಪರಾಜ್ಯಪಾಲ ವೆಂಕಟೇಶ್ ಹೆಬ್ಬಾರ್ ಸಂಪುಟ ಕಾರ್ಯದರ್ಶಿ ಎಚ್ ಆರ್ ಚಂದ್ರೇಗೌಡ ಕೋಶಾಧಿಕಾರಿ ಬಾಲಕೃಷ್ಣ ಹೆಗಡೆ ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯರ್ ವಿಟ್ಲ ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ್ ರೈ ಗವರ್ನರ್ ಸಂಯೋಜಿಕೆ ಜ್ಯೋತಿ ಎಸ್ ಶೆಟ್ಟಿ ಕ್ಯಾಬಿನೆಟ್ ಸಂಯೋಜಕೀ ನ್ಯಾನ್ಸಿ ಮಸ್ಕರೇನಸ್ ಕೋಆರ್ಡಿನೇಟರ್ ಲೋಕೇಶ್ ಶೆಟ್ಟಿ LCIF ಗ್ರಾಂಟೆ ಕೋ ಆರ್ಡಿನೇಟರ್ ಅನಿಲ್ ಕುಮಾರ್ ಮಾಜಿ ಗವರ್ನರ್ ಗಳಾದ ಕಿಶೋರ್ ಕುಮಾರ್ ಕೆಸಿ ಪ್ರಭು ಡಾಕ್ಟರ್ ಗೀತ್ ಪ್ರಕಾಶ್ ಹಾಗೂ ಕುಂಬಳೆ ನರಸಿಂಹ ಪ್ರಭು ಜಿಲ್ಲೆಯ ಲಯನ್ಸ್ ನಾಯಕರಗಳು ಸದಸ್ಯರುಗಳು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಜಿ ಎಸ್ ಟಿ ಸಂಯೋಜಕ ರಮಾನಂದ ನೂಜಿಪಾಡಿ ನಿರ್ವಹಿಸಿದರು.

LEAVE A REPLY

Please enter your comment!
Please enter your name here