ಬೆಳ್ಮಣಿನಲ್ಲಿ ಲಯನ್ಸ್‌ ತರಬೇತಿ ಶಿಬಿರ

0
7

ಲಯನ್‌ ಸದಸ್ಯರ ಕರ್ತವ್ಯ ಮತ್ತು ಜವಬ್ದಾರಿ, ನಾಯಕತ್ವ ಮತ್ತು ಕ್ಲಬ್ಬಿನ ಪರಿಣಾಮಕಾರಿ ನಿರ್ವಹಣೆ, ಲಯನ್ಸ್‌ ಸಂಸ್ಥೆಯ ಹಿನ್ನೋಟ ಮತ್ತು ಸಾಮಾಜಿಕ ಜವಬ್ದಾರಿಗಳ ಕುರಿತು ಲಯನ್‌ ಸದಸ್ಯರಿಗೆ ವಲಯ ಮಟ್ಟದ ತರಬೇತಿ ಶಿಬಿರವನ್ನು ಬೆಳ್ಮಣ್‌ ಲಯನ್ಸ್‌ ಕ್ಲಬ್ಬಿ ನ ಆತಿಥ್ಯದಲ್ಲಿ ನಡೆಸಲಾಯಿತು. ಜಿಲ್ಲಾ ನಾಯಕತ್ವ ವಿಭಾಗದ ಮುಖ್ಯ ಸಂಯೋಜಕ ಲಯನ್‌ ಕೆ ವರುಣ್‌ ಕುಮಾರ್‌ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಉಪಯುಕ್ತ ಮಾಹಿತಿ ನೀಡಿದರು.

ಮಾಜಿ ಜಿಲ್ಲಾ ಗವರ್ನರ್‌ ಲಯನ್‌ ಎನ್‌ ಎಮ್‌ ಹೆಗಡೆ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು. ಲಯನ್ಸ್‌ ಕ್ಲಬ್‌ ಬೆಳ್ಮಣ್‌, ಲಯನ್ಸ್‌ ಕ್ಲಬ್‌ ಮುದರಂಗಡಿ, ಲಯನ್ಸ್‌ ಕ್ಲಬ್‌ ಪಡುಬಿದ್ರೆ ಮತ್ತು ಲಯನ್ಸ್‌ ಕ್ಲಬ್‌ ಮುಂಡ್ಕೂರು ಕಡಂದಲೆಯ ಪದಾಧಿಕಾರಿಗಳು ಮತ್ತು ಹಲವಾರು ಸದಸ್ಯರು ಉಪಸ್ಥಿತರಿದ್ದರು. ವಲಯಾಧ್ಯಕ್ಷರಾದ ಲಯನ್‌ ಡಾ. ಮನೋಜ್‌ ಕುಮಾರ್‌ ಶೆಟ್ಟಿ ಮುಖ್ಯ ಅತಿಥಿಯಾಗಿ ಹಾಜರಿದ್ದರು.