ದಿನಾಂಕ 10/12/2025 ರಂದು ಸಂಜೆ ಗಂಟೆ 7.00 ಕ್ಕೆ ಸರಿಯಾಗಿ ನಮ್ಮ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ “ತಿಂಗಳ ಬೆಳಕಲ್ಲಿ ಪರಿಷತ್ತು” ಎಂಬ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ವೃಷಭರಾಜ್ ಜೈನ್ ಅವರು ಕರ್ಮ ಸಿದ್ಧಾಂತದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಹಲವಾರು ವರ್ಷಗಳಿಂದ ನಿರಂತರವಾಗಿ ಪಾಸಿಟಿವ್ ಲೈಫ್ ಸಲ್ಯೂಷನ್ಸ್ , ತಿಂಗಳ ಬೆಳಕು ಮುಂತಾದ ಸಮಾಜಮುಖಿ ಸತ್ಸಂಗದ ಕಾರ್ಯವನ್ನು ಮಾಡುತ್ತಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ತರಬೇತುದಾರರಾದ ಪ್ರೊ. ವೃಷಭರಾಜ್ ಜೈನ್ ರನ್ನು ಪರಿಷತ್ತು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಂಜುನಾಥ ಎಸ್. ರೇವಣಕರ್, ಅಧ್ಯಕ್ಷರು, ಕ.ಸಾ.ಪ. ಮಂಗಳೂರು ತಾಲೂಕು ವಹಿಸಿದ್ದರು.
*ಸಾಯಿ ಗ್ರ್ಯಾಂಡಿಯರ್ ಅಪಾರ್ಟ್ಮೆಂಟ್, B – ಬ್ಲಾಕ್, ರೂಫ್ ಟಾಪ್, ಸುಬ್ರಹ್ಮಣ್ಯ ಸದನ ಬಳಿ,ಜೈಲ್ ರಸ್ತೆ, ಮಂಗಳೂರು ಇಲ್ಲಿ ಈ ವಿಶೇಷ ಕಾರ್ಯಕ್ರಮ ಜರುಗಿತು. ಕ ಸಾ ಪ ಕಾರ್ಯದರ್ಶಿ ಶ್ರೀ ಗಣೇಶ್ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಮತ್ತು ಡಾ. ಮುರಲೀ ಮೋಹನ್ ಗೌರವ ಕಾರ್ಯದರ್ಶಿಗಳು ಕ.ಸಾ.ಪ. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಇವರು ವಂದನಾರ್ಪಣೆ ಮಾಡಿದರು. ಕೋಶಾಧಿಕಾರಿ ಸುಬ್ರಾಯ ಭಟ್ ಸ್ವಾಗತಿಸಿದರು. ಶ್ರೀಮತಿ ಡಾ ಮೀನಾಕ್ಷಿ ರಾಮಚಂದ್ರ,ಶ್ರೀ ಸನತ್ ಜೈನ್ ಉಪಸ್ಥಿತರಿದ್ದರು.

