
ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವದ, ಕೊನೆಯ ದಿನವಾದ ಆರಾಟ್ ಮಹೋತ್ಸವದಂದು, ಮನ್ನಿಪಾಡಿಯ ಅಲಂಗೋಡು ಶ್ರೀ ಧೂಮಾವತಿ ನೃತ್ಯ ತಂಡದವರಿಂದ ಫ್ಯೂಷನ್ ತಿರುವಾದಿರ”ವು ನೆರೆದಿರುವ ಭಕ್ತ ಜನಸ್ತೋಮರ ಗಮನ ಸೆಳೆಯಿತು. ಶ್ರೀಮತಿ ಓಮನ ರವಿ, ಶ್ರೀಮತಿ ಪೂರ್ಣಿಮಾ ರಾಜೇಶ್, ಕುಮಾರಿ ಅನುಶ್ರೀ, ಶ್ರೀಮತಿ ಶೀಬಾ ಸತೀಶ್, ಶ್ರೀಮತಿ ಲತಾ ವಸಂತ, ಶ್ರೀಮತಿ ವಿನಿತಾ ರಾವ್, ಶ್ರೀಮತಿ ಅಶ್ವಿನಿ ಶರತ್, ಡಾ. ಚೈತ್ರ ರವಿ, ಡಾ. ಮೃದುಲ ರಾಘವನ್, ಕು.ಧನಶ್ರೀ, ಕು.ರಮ್ಯ , ಶ್ರೀಮತಿ ಅಮಿತಾ ಶರತ್, ಶ್ರೀಮತಿ ಸೌಮ್ಯ ಸುನೀಶ್, ಶ್ರೀಮತಿ ಪ್ರಶಾಂತಿ ದೇವದಾಸ್ ಹಾಗೂ ಮುಂತಾದವರು, ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ,ನ ದಿವ್ಯ ಸನ್ನಿಧಿಯಲ್ಲಿ ” ತಿರುವಾದಿರ”ಕ್ಕೆ ಹೆಜ್ಜೆ ಹಾಕಿ ಜನಮನ ಸೂರೆಗೊಂಡರು.
ಶ್ರೀ ಉದಯಕುಮಾರ್ ಮನ್ನಿ ಪಾಡಿ, ಶ್ರೀ ನಾರಾಯಣ ಬೋವಿಕಾನ , ಶ್ರೀ ವಸಂತ ಕಾಂತಿಕೆರೆ ಹಾಗೂ ಮುಂತಾದ ಗಣ್ಯರು ಕಾರ್ಯಕ್ರಮಕ್ಕೆ ಸಹಕರಿಸಿದರು. ದೇವಸ್ಥಾನದ ಸಮಿತಿ ಸದಸ್ಯರು ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ದೇವಸ್ಥಾನದ ಸಮಿತಿ ಸದಸ್ಯರು, ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು