ಮೂಡುಬಿದಿರೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನವಚೇತನ ಶಿಬಿರ, ಮಾತೃ ಪೂಜನದೊಂದಿಗೆ ಸಂಪನ್ನ

0
98

ಮೂಡುಬಿದಿರೆ: ಜವನೇರ್ ಬೆದ್ರ ಫೌಂಡೇಶನ್(ರಿ), ಅಬ್ಬಕ್ಕ ಬ್ರಿಗೇಡ್ ಮಹಿಳಾ ಘಟಕ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನವಚೇತನ ಶಿಬಿರದ 5 ನೇ ದಿನದ ಶಿಬಿರ ನಡೆಯಿತು. ಯೋಗ ಪ್ರಾಣಾಯಾಮ, ಧ್ಯಾನ, ಜ್ಞಾನ/ ಆಟಗಳು ಹಾಗೂ ಪೋಷಕರಿಗೆ ಪಾದ ಪೂಜೆ ಗೈದು ಮಾತೃ ಪೂಜನದೊಂದಿಗೆ ಶಿಬಿರ ಸಂಪನ ಗೊಂಡಿತು. ಆರ್ಟ್ ಆಫ್ ಲಿವಿಂಗ್ ಯೋಗ ಶಿಕ್ಷಕಿ ಸುನಿತಾ ಉದಯ್ ತರಬೇತಿ ನೀಡಿದರು.

ಸಮಾರೋಪ ಸಮಾರಂಭದಲ್ಲಿ ಜವನೆರ್ ಬೆದ್ರ ಫೌಂಡೇಷನ್ (ರಿ) ಸ್ಥಾಪಕ/ ಅಧ್ಯಕ್ಷ ಶ್ರೀ ಅಮರ್ ಕೋಟೆ ಅವರು ಅಧ್ಯಕ್ಷತೆ ವಹಿಸಿ ಭಾರತ ದೇಶದಲ್ಲಿ ಯೋಗ ಕುರಿತು ಕಲಿಯುವ ಯೋಗ ಎಲ್ಲರಿಗೂ ಇದೆ ಎಲ್ಲರೂ ಯೋಗಾಭ್ಯಾಸ ಕುರಿತು ಅಧ್ಯಯನ ನಡೆಸಿ ಅದರ ಮಹತ್ವ ತಿಳಿದು ಎಲ್ಲರಿಗೂ ತಿಳಿಸಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮುಕ್ತೆಸರರು ಶ್ರೀ ಗುರುಪ್ರಸಾದ್ ಹೊಳ್ಳ ಮಾತಾಡಿ ಜವನೆರ್ ಬೆದ್ರ ಸಂಘಟನೆಯ ಸಮಾಜ ಸೇವೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮಾತನಾಡಿ ಮಕ್ಕಳನ್ನು ಒಗ್ಗೂಡಿಸಿ ಅದ್ಭುತವಾಗಿ ಸಂಘಟಿಸಿದ ಅಬ್ಬಕ್ಕ ಬ್ರಿಗೇಡ್ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಯೋಗ ಶಿಕ್ಷಕಿ ಸುನಿತಾ ಉದಯ್ ಅವರಿಗೆ ಗೌರವಾರ್ಪಣೆ ನಡೆಯಿತು. ಸಂಘಟನ ಕಾರ್ಯದರ್ಶಿ ಗುರುಪ್ರಸಾದ್ ಪೂಜಾರಿ ಅವರು ಸಂಘಟನೆಯ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದ್ದರು. ಯುವ ಸಂಘಟನೆ ಸಂಚಾಲಕ ನಾರಾಯಣ ಪಡುಮಲೆ ಉಪಸ್ಥಿತರಿದ್ದರು. ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಶ್ರೀಮತಿ ಸಹನಾ ನಾಯಕ್ ಸ್ವಾಗತಿಸಿದರು, ಸಂಸ್ಕಾರ ಜಾಗೃತಿ ಪ್ರಮುಖ ಅಮಿತಾ ಗಣೇಶ್ ಧನ್ಯವಾದ ಸಮರ್ಪಣೆ ಸಲ್ಲಿಸಿದರು. ಮಾರ್ಗದರ್ಶಕಿ ಸುಮಲತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here