ಮಲ್ಪೆ: ಪಾನಿಪುರಿ ವಿಚಾರದಲ್ಲಿ ಗಲಾಟೆ, ಪರಸ್ಪರ ಹೊಡೆದಾಟ..!

0
560

ಉಡುಪಿ: ಹೆಚ್ಚುವರಿ ಪಾನಿಪುರಿ ನೀಡುವ ವಿಚಾರದಲ್ಲಿ ಗಲಾಟೆ ನಡೆದು ಪ್ರವಾಸಿಗರು ಮತ್ತು ಸ್ಥಳೀಯ ಪಾನಿಪೂರಿ ಅಂಗಡಿಯವರು ಪರಸ್ಪರ ಹೊಡೆದಾಡಿಕೊಂಡ ಘಟನೆ ಮಲ್ಪೆ ಬೀಚ್ ನಲ್ಲಿ ನಡೆದಿದೆ.

ಮಲ್ಪೆ ಬೀಚ್ ಬಳಿಯ ಪಾನಿಪುರಿ ಅಂಗಡಿಯಲ್ಲಿ ಮಂಡ್ಯ ಜಿಲ್ಲೆಯಿಂದ ಬಂದಿದ್ದ ಪ್ರವಾಸಿಗರು ಪಾನಿಪುರಿ ತಿನ್ನಲು ಹೋಗಿದ್ದಾರೆ. ಆಗ ಹೆಚ್ಚುವರಿ ಪಾನಿಪುರಿ ನೀಡುವಂತೆ ಯುವಕರು ಪಾನಿಪುರಿ ಅಂಗಡಿಯವನ ಜೊತೆಗೆ ಕಿರಿಕ್ ಮಾಡಿದ್ದಾರೆ.

ಇದೇ ವಿಚಾರವಾಗಿ ಗಲಾಟೆಯಾಗಿ ಬೈದಾಡಿಕೊಂಡು ನಂತರ ಹೊಡೆದಾಟ ಕೂಡಾ ನಡೆದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರುಗಳು ದಾಖಲಾಗಿದೆ.

LEAVE A REPLY

Please enter your comment!
Please enter your name here