ಶ್ರೀ ದುರ್ಗಾಪರಮೇಶ್ವರಿ ಗದ್ದುಗೆ ಅಮ್ಮನವರ ದೇವಸ್ಥಾನ ಬಚ್ಚಪ್ಪು ಹೆಬ್ರಿ, ಇದರ ನೂತನ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ ವೇದಮೂರ್ತಿ ಜಾರ್ಕಳ ಶ್ರೀ ಪ್ರಸಾದ ತಂತ್ರಿಗಳ ನೆೇತೃತ್ವದಲ್ಲಿ ನಡೆಯಿತು. ಸುಮಾರು 80 ಲಕ್ಷ ವೆಚ್ಚದಲ್ಲಿ ಶ್ರೀ ದೇವಿಗೆ ಶಿಲಾಮಯ ಗರ್ಭಗುಡಿ, ಪರಿವಾರ ಶಕ್ತಿಗಳ ಗುಡಿ ಹಾಗೂ ತಗಡು ಚಪ್ಪರ, ಇನ್ನಿತರ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸತೀಶ್ ಶೆಟ್ಟಿ ಮುಟ್ಲುಪಾಡಿಯವರು ಜೀರ್ಣೋದ್ದಾರ ಹುಂಡಿಯನ್ನು ಉದ್ಘಾಟಿಸಿ, ಶ್ರೀ ದೇವಿಯ ಜೀರ್ಣೋದ್ದಾರ ಕಾರ್ಯಕ್ಕೆ ಊರ -ಪರವೂರ ಭಗವಧ್ಭಕ್ತರು ತನು -ಮನ -ಧನ ದ ಸಹಕಾರ ನೀಡಿ ಆದಷ್ಟು ತೀವ್ರಗತಿಯಲ್ಲಿ ಗರ್ಭಗುಡಿಯು ರಚನೆಯಾಗಲಿ ಎಂದು ಶುಭ ಹಾರೈಸಿದರು. ಕ್ಷೇತ್ರದ ಅರ್ಚಕರಾದ ಅಣ್ಣೋಜಿ ನಾಯ್ಕ, ದೇವಸ್ಥಾನ ದ ಟ್ರಸ್ಟಿನ ಗೌರವಾಧ್ಯಕ್ಷರಾದ ಮಹಾಬಲ ನಾಯ್ಕ್, ಲಕ್ಷ್ಮೀನಾರಾಯಣ ನಾಯಕ್ ರೈತಸೇವ ಗ್ರಾಮೋದ್ಯೋಗ, ಗಣೇಶ್ ಕುಮಾರ್, ನಾರಾಯಣ ಪೂಜಾರಿ, ಸುಮಿತ್ರ ಹೆಗ್ಡೆ, ಭಜನಾ ಮಂಡಳಿ ಅಧ್ಯಕ್ಷರಾದ ರಮೇಶ್ ನಾಯ್ಕ ಹಾಗೂ ರೇವತಿ ನಾಯ್ಕ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.