ಮಂಗಳೂರು ಮ್ಯಾರಥಾನ್‌-2025: ಮಂಗಳೂರು ನಗರ ಪೊಲೀಸ್ ಸಂಚಾರ ಸಲಹೆಗಳು

0
73

ಮಂಗಳೂರು: ದಿನಾಂಕ 09-11-2025 ರಂದು ಭಾನುವಾರ ಬೆಳಿಗ್ಗೆ 4-00 ಗಂಟೆಯಿಂದ 10-00 ಗಂಟೆಯ ವರೆಗೆ Mangalore Runners Club ವತಿಯಿಂದ ಆಯೋಜಿಸಲಾಗಿರುವ ಮಂಗಳೂರು ಮ್ಯಾರಥಾನ್‌-2025 ಕಾರ್ಯಕ್ರಮದಲ್ಲಿ 6000 ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದು, ವಿವಿಧ ವಿಭಾಗಗಳಲ್ಲಿ ಮಂಗಳಾ ಸ್ಟೇಡಿಯಂನಿಂದ ಹೊರಟು ನಾರಾಯಣಗುರು ವೃತ್ತ – ಕೊಟ್ಟಾರ ಚೌಕಿ – ಕುದುರೆಮುಖ ಜಂಕ್ಷನ್ – ತಣ್ಣೀರುಬಾವಿ ಫೆರಿ – NMPA ಸರ್ವಿಸ್ ರಸ್ತೆ – ಡಿಕ್ಸಿ ಕ್ರಾಸ್ – ಪಣಂಬೂರು ಬೀಚ್ – ಪಣಂಬೂರು ಜಂಕ್ಷನ್ – ವಾಪಾಸ್ಸು ಕೊಟ್ಟಾರಚೌಕಿ – ನಾರಾಯಣಗುರು ವೃತ್ತ – ಮಂಗಳಾ ಕ್ರೀಡಾಂಗಣದಲ್ಲಿ ಕೊನೆಗೊಳ್ಳಲಿದೆ. ಮೇಲ್ಕಂಡ ರಸ್ತೆಗಳಲ್ಲಿ ಮ್ಯಾರೇಥನ್ ಸಾಗುವಾಗ ವಾಹನ ಸಂಚಾರದಲ್ಲಿ ನಿಧಾನಗತಿಯಾಗುವ ಸಾಧ್ಯತೆಗಳಿದ್ದು ಹಾಗೂ ಸದ್ರಿ ಮ್ಯಾರೇಥನ್ ಸಾಗುವ ಮುಖ್ಯ ರಸ್ತೆಗೆ ಸಂಪರ್ಕಿಸುವ ಅಡ್ಡ ರಸ್ತೆಯಲ್ಲಿ ಬರುವ ವಾಹನಗಳನ್ನು ಕ್ರೀಡಾಪಟುಗಳ ಸುರಕ್ಷತಾ ದೃಷ್ಟಿಯಿಂದ ಅಲ್ಪ ವೇಳೆಗೆ ನಿಲ್ಲಿಸಬೇಕಾಗಿದ್ದು, ಸದ್ರಿ ಮಾರ್ಗವನ್ನು ಉಪಯೋಗಿಸುವ ಸಾರ್ವಜನಿಕರು ಸದ್ರಿ ಅವಧಿಯಲ್ಲಿ ಈ ಕೆಳಕಂಡ ಬದಲಿ ಮಾರ್ಗವನ್ನು ಉಪಯೋಗಿಸಬಹುದಾಗಿದೆ.
ವಾಹನ ಸಂಚಾರದಲ್ಲಿ ಮಾಡಿರುವ ಬದಲಿ ಮಾರ್ಗಗಳ ವಿವರ

  1. ಪಿ.ವಿ.ಎಸ್ ಕಡೆಯಿಂದ ನಾರಾಯಣ ಗುರು ವೃತ್ತ (ಲೇಡಿಹಿಲ್)ದ ಕಡೆಗೆ ಸಂಚರಿಸುವ ವಾಹನಗಳು ಲಾಲ್ಬಾಗ್ – ಕೆ.ಎಸ್.ಆರ್.ಟಿ.ಸಿ.- ಕುಂಟಿಕಾನ ಮೂಲಕ ಸಂಚರಿಸುವುದು.
  2. ಕುದ್ರೋಳಿ- ಮಣ್ಣಗುಡ್ಡೆ ಮತ್ತು ಉರ್ವ ಮಾರ್ಕೆಟ್ ನಿಂದ ನಾರಾಯಣ ಗುರು ವೃತ್ತ (ಲೇಡಿಹಿಲ್) ದ ಕಡೆಗೆ ಕಡೆಗೆ ಸಂಚರಿಸುವ ವಾಹನಗಳು ಮಣ್ಣಗುಡ್ಡೆ – ಬಲ್ಲಾಳ್ಬಾಗ್/ನೆಹರೂ ಅವಿನ್ಯೂ ರಸ್ತೆ – ಲಾಲ್ಬಾಗ್ – ಕೆ.ಎಸ್.ಆರ್.ಟಿ.ಸಿ. – ಕುಂಟಿಕಾನ ಮೂಲಕ ಸಂಚರಿಸುವುದು.
  3. ಕೆ.ಎಸ್.ಆರ್.ಟಿ.ಸಿ ಕಡೆಯಿಂದ ಉಡುಪಿ ಕಡೆಗೆ ಸಂಚರಿಸುವ ವಾಹನಗಳು ಬಿಜೈ ಕಾಪಿಕಾಡ್ ಕಡೆಯಿಂದ ಕುಂಟಿಕಾನ ಮುಖೇನ ಸಂಚರಿಸುವುದು.
  4. ಆಶೋಕ ನಗರ, ಶೇಡಿಗುರಿ, ದಂಬೇಲ್, ಸುಲ್ತಾನ್ ಬತ್ತೇರಿ ಕಡೆಯಿಂದ ಬರುವ ವಾಹನಗಳು ಉರ್ವ ಮಾರ್ಕೆಟ್, ಮಣ್ಣಗುಡ್ಡೆ ಮುಖಾಂತರ ಸಂಚರಿಸುವುದು.
  5. ಕೊಟ್ಟಾರಚೌಕಿ ಜಂಕ್ಷನ್ ಕಡೆಯಿಂದ ಉಡುಪಿ ಕಡೆಗೆ ಸಂಚರಿಸುವ ವಾಹನಗಳು ಕೋಡಿಕಲ್ ಕ್ರಾಸ್ವರೆಗೆ ಉಡುಪಿ-ಮಂಗಳೂರು ರಸ್ತೆಯಲ್ಲಿ ದ್ವಿಮುಖವಾಗಿ ಸಂಚರಿಸುವುದು. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ವಿನಂತಿ.
    ಸಂಚಾರ ನಿಯಮಗಳನ್ನು ಪಾಲಿಸಿ, ಸುರಕ್ಷಿತರಾಗಿರಿ.
    “Follow traffic rules, Save Lives”
    ಪೊಲೀಸ್ ಆಯುಕ್ತರು ಮಂಗಳೂರು ನಗರ
    .

LEAVE A REPLY

Please enter your comment!
Please enter your name here