ಮಂಗಳೂರು : ಮಲಬಾರ್ ಗೋಲ್ಡ್ & ಡೈಮಂಡ್ಸ್ ಮಂಗಳೂರು ಶಾಖೆಯಲ್ಲಿ ತನ್ವಿಕ ಸಂಗ್ರಹ ಅನಾವರಣ

0
5

*ಮಂಗಳೂರು* : ಮಲಬಾರ್ ಗೋಲ್ಡ್ & ಡೈಮಂಡ್ಸ್ ಮಂಗಳೂರು ಶಾಖೆಯಲ್ಲಿ ಮೇ 10ರಂದು ತನ್ವಿಕ ಸಂಗ್ರಹವನ್ನು ಅನಾವರಣಗೊಳಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಲಬಾರ್ ಗೋಲ್ಡ್ ನ ಗ್ರಾಹಕರು ಹಾಗೂ ಹಿತೆಷಿಗಳಾದ ಶ್ರೀಮತಿ. ದಿಶಾ ಶೆಟ್ಟಿ ಮತ್ತು ನಮಿತಾ ಹೆಗಡೆ ಸಂಗ್ರಹವನ್ನು ಅನಾವರಣ ಗೊಳಿಸಿದರು. ದಿಶಾ ಶೆಟ್ಟಿ ಕಾರ್ಯಕ್ರಮದಲ್ಲಿ ಮಾತನಾಡಿ ತನ್ವಿಕ ಎಂಬ ದೈವತ್ವದಿಂದ ಪ್ರಭಾವಿತವಾಗಿರುವ ಅನನ್ಯ ಆಭರಣಗಳ ವಿಶಾಲ ಸಂಗ್ರಹವಿದೆ. ಎಂದು ತನ್ನ ಮಾತುಗಳಿಂದ ವ್ಯಕ್ತ ಪಡಿಸಿದರು. ನಮಿತಾ ಪಿ ಹೆಗಡೆಯವರು ತನ್ವಿಕ ವಿಶಾಲ ಸಂಗ್ರಹದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.

ತನ್ವಿಕ ಕಲೆಕ್ಷನ್ ಸುಂದರ ವಿನ್ಯಾಸಗಳು ಮತ್ತು ಶಾಶ್ವತ ಕಲೆಗಳನ್ನು ಒಟ್ಟುಗೂಡಿಸುತ್ತದೆ. ಪ್ರತಿ ಒಂದು ಆಭರಣವು ಕರಕುಶಲತೆ ಸಾಂಸ್ಕೃತಿಕ ಅರ್ಥ ಮತ್ತು ಪವಿತ್ರ ಪರಂಪರೆಗಳನ್ನು ಪ್ರದರ್ಶಿಸುತ್ತದೆ. ಎಲ್ಲಾ ಆಭರಣಗಳು ಎಲೆಕ್ಟ್ರಾಫೋರ್ಮಿಗ್ ಮತ್ತು ಡೈರೆಕ್ಟ್ ಕಾಸ್ಟಿಂಗ್ ಮೂಲಕ ತಯಾರಿಸಲಾಗುತ್ತದೆ. ಎಂದು ಹಫೀಜ್ ರೆಹ್ಮಮ್ ಅಡ್ಯಾರ್ ಸ್ಟೋರ್ ಹೆಡ್ ಕಾರ್ಯಕ್ರಮದಲ್ಲಿ ಮಾತನಾಡಿ ಸಂಗ್ರಹದ ಬಗ್ಗೆ ಮಾಹಿತಿ ನೀಡಿದರು.

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಂಗಳೂರು ಶಾಖಾ ಮುಖ್ಯಸ್ಥರು ಹಫೀಜ್ ರಹ್ಮಾನ್ ಅಡ್ಯಾರ್ , ಉಪ ಶಾಖಾ ಮುಖ್ಯಸ್ಥರು ನಝರ್ ಅಹಮ್ಮದ್,ಶಾಖಾ ಮ್ಯಾನೇಜರ್ ರಘುರಾಮ್ ಸಿಎಸ್, ಮಾರ್ಕೆಟಿಂಗ್ ಮ್ಯಾನೇಜರ್ ಶೇಖ್ ಫರ್ಹಾನ್, ಸೇಲ್ಸ್ ಮೇನೇಜರ್ ಗಿರೀಶ್ ಶೆಟ್ಟಿ, ಸಮೀರ್ ಡೆಪ್ಯೂಟಿ ಸೇಲ್ಸ್ ಮ್ಯಾನೇಜರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here