ಕರ್ನಾಟಕ ರಾಜ್ಯದಲ್ಲಿ ಬ್ಯಾಟರಿ ಚಾಲಿತ ರಿಕ್ಷಾಗಳಿಗೆ ಪರವಾನಿಗೆ ಇಲ್ಲದೇ ಯಾವುದೇ ನಿಲ್ದಾಣಗಳಲ್ಲಿ ನಿಲ್ಲಬಹುದು ರಾಜ್ಯದ ಯಾವುದೇ ಭಾಗಗಳಲ್ಲಿ ಸಂಚರಿಸಬಹುದೆಂದು ರಾಜ್ಯಸರ್ಕಾರ ಕಾನೂನು ತಿದ್ದುಪಡಿ ಮಾಡಿ ಸ್ಥಳ ನಿಗದಿಪಡಿಸಿ ಸಂಚರಿಸುವ ಸ್ಥಳವನ್ನು ಪರ್ಮಿಟ್ ಮೂಲಕ ಅನುಷ್ಠಾನಗೊಳಿಸಬಹುದೆಂದು ರಾಜ್ಯದ ಸಾರಿಗೆ ಸಚಿವರಾದ ಸನ್ಮಾನ್ಯ ಶ್ರೀ ರಾಮಲಿಂಗರೆಡ್ಡಿಯವರ ಗಮನ ಸೆಳೆದು ಸರಕಾರದ ಭರವಸೆ ಸಮಿತಿಯ ಮೂಲಕ ಸರಕಾರವನ್ನು ಒತ್ತಾಯಿಸಿ ಇಲೆಕ್ಟ್ರಿಕಲ್ ರಿಕ್ಷಾವನ್ನು ಕಾನೂನಿನಡಿಯಲ್ಲಿ ತರಲು ಸಹಕರಿಸಿ ಕಾನೂನು ಜಾರಿಗೆ ತಂದ ಆಟೋಚಾಲಕರ ಸಂಘದ ಅಧ್ಯಕ್ಷರಾದ ಶ್ರೀ ಐವನ್ ಡಿʼಸೋಜಾರವರಿಗೆ ಇಂದು ಗೃಹಕಛೇರಿಯಲ್ಲಿ ರಿಕ್ಷಾ ಚಾಲಕರ ಸಂಘದ ಒಕ್ಕೂಟ ಅಭಿನಂದಿಸಿದರು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಆಟೋ ರಿಕ್ಷಾ ಚಾಲಕರ ಸಂಘ ದ ಅಧ್ಯಕ್ಷರಾದ ಭರತ್ ಕುಮಾರ್,ಉಪಾಧ್ಯಕ್ಷ ಶೇಖರ ದೇರಳಕಟ್ಟೆ, ವಿವಿಧ ರಿಕ್ಷಾ ಸಂಘದ ಪದಾಧಿಕಾರಿಗಳಾದ ವಸಂತ ಶೆಟ್ಟಿ ವೀರನಗರ, ಗಣೇಶ್ ಉಳ್ಳಾಲ್ , ಅನಿಲ್ ಲೋಬೋ, ರಾಜೇಶ್ ವೀರನಗರ, ವಿಲ್ಫ್ರೆಡ್ ಫೆರ್ನಾಂಡಿಸ್, ರೇಮಂಡ್, ಶೈಲೇಶ್. ಕ್ಲಿಫರ್ಡ್ಡ ಡಿಸೋಜ, ಆಂಟನಿ ಡಿಸೋಜ. ಸ್ಟೀವನ್, ಸೈಮನ್ ಮತ್ತಿತರರು ಉಪಸ್ಥಿತರಿದ್ದರು.