Saturday, June 14, 2025
Homeಸುರತ್ಕಲ್ಸುರತ್ಕಲ್ ಸ್ಪೋರ್ಟ್ಸ್ ಕ್ಲಬ್ ಮತ್ತು ಕಲ್ಚರಲ್ ಟ್ರಸ್ಟ್ ಅಧ್ಯಕ್ಷರಾಗಿ ಮನೋಹರ ಶೆಟ್ಟಿ ಸೂರಿಂಜೆ ಆಯ್ಕೆ

ಸುರತ್ಕಲ್ ಸ್ಪೋರ್ಟ್ಸ್ ಕ್ಲಬ್ ಮತ್ತು ಕಲ್ಚರಲ್ ಟ್ರಸ್ಟ್ ಅಧ್ಯಕ್ಷರಾಗಿ ಮನೋಹರ ಶೆಟ್ಟಿ ಸೂರಿಂಜೆ ಆಯ್ಕೆ

ಸುರತ್ಕಲ್ ಸ್ಪೋಟ್ಸ್೯ ಕ್ಲಬ್ ಮತ್ತು ಕಲ್ಚರಲ್ ಕ್ಲಬ್ ನ ಅಧ್ಯಕ್ಷರಾಗಿ ಮನೋಹರ ಶೆಟ್ಟಿ ಸೂರಿಂಜೆ ಆಯ್ಕೆಯಾಗಿದ್ದಾರೆ.

ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ನ ಸಮಾಲೋಚನೆ ಸಭೆಯು ಸುರತ್ಕಲ್ ಸೂರಜ್ ಹೋಟೆಲ್ ನಲ್ಲಿ ಕ್ಲಬ್ ನ ಮಹಾಪೋಷಕರು ವಿರಾಜಪೇಟೆ ಪೋಲಿಸ್ ಸಹಾಯಕ ಅಯುಕ್ತರಾದ ಎಸ್ ಮಹೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಸಮಾಜ ಮುಖಿ ಕೆಲಸಗಳಿಗೆ ನೂತನ ಟ್ರಸ್ಟ್ ರಚಿಸಲು ನಿರ್ಧರಿಸಲಾಯಿತು ಟ್ರಸ್ಟ್ ನ ಮಹಾಪೋಷಕರಾಗಿ ಎಸ್ ಮಹೇಶ್ ಕುಮಾರ್, ಮಹಾಬಲ ಪೂಜಾರಿ ಕಡಂಬೋಡಿ, ಅಧ್ಯಕ್ಷರಾಗಿ ಮನೋಹರ ಶೆಟ್ಟಿ ಸೂರಿಂಜೆ ಶೆಟ್ಟಿ, ಸದಸ್ಯರಾಗಿ ನಾಗರಾಜ್ ಕಡಂಬೋಡಿ, ಸಂತೋಷ್ ಬೇಕಲ್, ಪುಷ್ಪರಾಜ್ ಶೆಟ್ಟಿ ಮಧ್ಯ, ಕುಶಲ ಮಣಿಯಾಣಿ, ಅನಿಲ್ ಶೆಟ್ಟಿ ಸೂರಿಂಜೆ, ಸಂದೀಪ್ ಪೂಜಾರಿ, ಶಿವಪ್ರಸಾದ್, ರಾಜೇಶ್ ಮುಂಚೂರು, ಜೀವನ್, ದಿಲೀಪ್ ಇವರನ್ನು ಅಯ್ಕೆ ಮಾಡಲಾಯಿತು.

ಅಗಸ್ಟ್ 10 ತಾರೀಖು ರಕ್ತದಾನ ಶಿಬಿರ ಮಾಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಉಪಾಧ್ಯಕ್ಷರಾದ ಮನೋಹರ ಶೆಟ್ಟಿ ಸೂರಿಂಜೆ, ನಾಗರಾಜ್ ಕಡಂಬೋಡಿ, ಕಾರ್ಯದರ್ಶಿ ಕಿರಣ್ ಅಚಾರ್ಯ, ಕೋಶಾಧಿಕಾರಿ ಜಗದೀಪ್ ಶೆಟ್ಟಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular