ಮಾ.7 : ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಂಘ (ರಿ.), ಬೋಳ ಇವರ ವತಿಯಿಂದ 13ನೇ ವರ್ಷದ ಸಾರ್ವಜನಿಕ ಶನಿಪೂಜೆ

0
15

ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಂಘ (ರಿ.), ಬೋಳ ಇವರ ವತಿಯಿಂದ 13ನೇ ವರ್ಷದ ಸಾರ್ವಜನಿಕ ಶನಿಪೂಜೆ ಇದೇ ಬರುವ ತಾ- 07-03-2026 ರ ಶನಿವಾರದಂದು ಶ್ರೀ ಬ್ರಹ್ಮ ಬೈದರ್ಕಳ ಗರಡಿ, ಬೋಳ ದಲ್ಲಿ ನಡೆಯಲಿದೆ.

ಆವತ್ತು ಬೆಳಿಗ್ಗೆ 9.30 ಗಂಟೆಗೆ ಸರಿಯಾಗಿ ಬೋಳ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಬೊಲ್ಯ ಶಾಂತಿ ಮರದ ಕಟ್ಟೆಯಲ್ಲಿ ಬೋಳ ಜಲಪಾದೆ ಶ್ರೀ ಕೃಷ್ಣಮೂರ್ತಿ ಆಚಾರ್ಯರವರ ನೇತೃತ್ವದಲ್ಲಿ ಹಾಗೂ ಹರೀಶ್ ಪೂಜಾರಿ, ಗರಡಿ ಮನೆ ಬೋಳ ಇವರ ಸಂಪೂರ್ಣ ಮುಂದಾಳತ್ವದಲ್ಲಿ ಈ ದೈವಿಕ ಕಾರ್ಯಕ್ರಮ ಜರಗಲಿರುವುದು.

ಮಧ್ಯಾಹ್ನ 12.00 ಗಂಟೆಗೆ ಮಹಾಪೂಜೆ, 1.00 ಗಂಟೆಗೆ ಮಹಾ ಅನ್ನಸಂತರ್ಪಣೆ ನಡೆದು ಮಧ್ಯಾಹ್ನ 2.00 ರಿಂದ ಶ್ರೀ ವಾಗ್ದೇವಿ ಯಕ್ಷಗಾನ ಕಲಾ ಮಂಡಳಿ, ಶ್ರೀ ಮೂಡು ಮಹಾಗಣಪತಿ ದೇವಸ್ಥಾನ, ಬಂಡಿಮಠ, ಕಾರ್ಕಳ ಇವರಿಂದ ಯಕ್ಷಗಾನ ತಾಳಮದ್ದಳೆ ” ಶ್ರೀ ಶನೀಶ್ವರ ಮಹಾತ್ಮೆ” ಪುಣ್ಯ ಕಥಾ ಭಾಗ ನಡೆಯಲಿದೆ.

ಈ ಎಲ್ಲಾ ಭಕ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಗವದ್ಭಕ್ತರಾದ ತಾವೆಲ್ಲರೂ ಭಾಗಿಯಾಗಬೇಕೆಂದು ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಂಘ (ರಿ.), ಬೋಳ ಇದರ ಅಧ್ಯಕ್ಷರಾದ ಸಂದೀಪ್ ಬಿ., ಹಾಗೂ ಸರ್ವ ಸದಸ್ಯರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here