ಜೈನ ಕಾಶಿ ಶ್ರೀ ದಿಗಂಬರ ಜೈನ ಮಠದಲ್ಲಿ 11.5.2025 ರಂದು ಬೆಳಿಗ್ಗೆ 8.45ಕ್ಕೆ ನಮ್ಮ ರಾಷ್ಟ್ರ ದ ಯುದ್ಧ ಸನ್ನಿವೇಶ ದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಮೂಡುಬಿದಿರೆ ಶ್ರೀ ಜೈನ ದಿಗಂಬರ ಮಠದಲ್ಲಿ ಮಾಡಲಾಯಿತು.
ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ, ಉಪಸ್ಥಿತಿ ಯಲ್ಲಿ ಭಗವಾನ್ ಪಾರ್ಶ್ವ ನಾಥ ಸ್ವಾಮಿ ಗೆ ಕ್ಷೀರ ಅಭಿಷೇಕ ನೆರವೇರಿಸಿ ಪಟ್ಟ ದ ಮಹಾ ಮಾತೆ ಅಭಿಷ್ಟ ವರ ಪ್ರಧಾಯಿನಿ ಯಕ್ಷಿ
ಕೂಷ್ಮಾoಡಿನೀದೇವಿ, ಪದ್ಮಾವತಿ ದೇವಿ ಗೆ ವಿಶೇಷ ಪೂಜೆ ಸಲ್ಲಿಸಿ ಸಾಮೂಹಿಕ ಪ್ರಾರ್ಥನೆ ಮಾಡಿ, ಯುದ್ಧ ಸಂಧರ್ಭ ಎಲ್ಲಾ ಭಯೋತ್ಪದನೆ ದೂರ ವಾಗಲಿ ಸರ್ವ ಧರ್ಮಿ ಯರು ಸರ್ವ ಭಾಷೆ ಯವರು ನಾವೆಲ್ಲರೂ ಐಕ್ಯ ತೆ ಯಿಂದ ಭಾರತ ದೇಶದ ವಿಜಯ ಪ್ರಾಪ್ತಿಗಾಗಿ ಪ್ರಾರ್ಥಿಸೋಣ ಲೋಕದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆ ಯಾಗಲಿ ಇಂತಹ ವಿಷಮ ಸ್ಥಿತಿಯಲ್ಲಿ ರಾಷ್ಟ್ರ ಧರ್ಮ ದ ಏಕತೆ ಗಾಗಿ ಶ್ರಮಿಸೋಣ ಭಾರತ ಸರಕಾರ ಹಾಗೂ ಸೈನಿಕರ ಆತ್ಮ ಸ್ಥೈರ್ಯ ಹೆಚ್ಚಿಸೋಣ ಎಂದು ಶ್ರೀ ಗಳವರು ನುಡಿದರು.
ಶ್ರೀ ಅಭಯ ಚಂದ್ರ ಜೈನ್, ದಯಾನಂದ ಪೈ ವಿಜಯ ಕುಮಾರ್, ಬಾಹುಬಲಿ ಪ್ರಸಾದ್,ಎ ಗುಣಪಾಲ್ ಹೆಗ್ಡೆ, ಗುಣಪಾಲ್ ಮುದ್ಯ ನಿರಂಜನ್, ರಾಘವೇಂದ್ರ ಭಂಡಾರ್ಕರ್,ಶ್ರೀಧರ್ ಅರಮನೆ ವೃoದ ರಾಜೇಂದ್ರ,
ಶ್ವೇತಾ ಜೈನ್ ವೀಣಾ, ಸುದಾ, ಮಂಜುಳಾ ಅಭಯ ಚಂದ್ರ ಮೊದಲಾದವರಿದ್ದರು.
ವರದಿ:ಸಂಜಯಂತ ಕುಮಾರ್ ಶೆಟ್ಟಿ