ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಬೃಹತ್‌ ರಸ್ತೆ ಹೊಂಡ‌:- ಕ್ಯಾರೆ ಅನ್ನದ ಅಧಿಕಾರಿಗಳು‌‌-ಕ.ರ.ವೇ‌ ಪದಾಧಿಕಾರಿಗಳಿಂದ ಆಕ್ರೋಶ

0
4

ಕುಶಾಲನಗರ‌ : ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಸಿ ಎನ್ ಜಿ ಬಂಕ್ ಪಕ್ಕದ ರಸ್ತೆಯಲ್ಲಿ ದೊಡ್ಡದಾದ ಹೊಂಡವೊಂದು ಎರಡು ವರ್ಷಗಳಿಂದ ನೆನೆಗುದಿಗೆ‌ ಬಿದ್ದಿದೆ. ಈ ಗುಂಡಿಗೆ ಹಲವಾರು ಬಾರಿ ವಾಹನಗಳು ಮತ್ತು ಜಾನುವಾರುಗಳು‌ ಹಾಗೂ ರಾತ್ರಿ ಸಮಯದಲ್ಲಿ ಕುಡಿದ ಅಮಲಿನಲ್ಲಿ ಕೆಲ ವ್ಯಕ್ತಿಗಳು ಬಿದ್ದಿರುವ ಘಟನೆಯು ಕೂಡ ಇದೆ.

ಆದರೆ ಇದನ್ನು ಅಧಿಕಾರಿಗಳು ಗಮನಿಸಿದರು ಕೂಡ ಗಂಭೀರವಾಗಿ ಪರಿಗಣಿಸದೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಸಾರ್ವಜನಿಕರ ಪ್ರಾಣ ಹೋದರೂ ಪರವಾಗಿಲ್ಲ ಅನ್ನೋ ರೀತಿಯಲ್ಲಿ ಕಣ್ಣು ಮುಚ್ಚಿ ಕುಳಿತಿದ್ದಾರೆ .ಇದನ್ನು ಗಮನಿಸಿದ ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಅಧಿಕಾರಿಗಳ ಕಣ್ಣು ತೆರೆಸಲೆಂದೇ ಗುಂಡಿಯ ಮುಂದೆ ನಿಂತ ಪ್ರತಿಭಟನೆ ಮಾಡಿರುತ್ತಾರೆ. ಇನ್ನು ಒಂದು ವಾರದೊಳಗೆ ಸಂಬಂಧಪಟ್ಟ ಅಧಿಕಾರಿಗಳು ಗುಂಡಿಯನ್ನು ಸರಿಪಡಿಸದೆ ಹೋದರೆ ಕಚೇರಿಯ ಮುಂದೆ ಉಗ್ರವಾದ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ‌ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಕೆ.ಚಂದ್ರು, ಪುಟ್ಟಸ್ವಾಮಿ ತಾಲ್ಲೂಕು ಅಧ್ಯಕ್ಷರು, ರಂಗಸ್ವಾಮಿ ತಾಲ್ಲೂಕು ಉಪಾಧ್ಯಕ್ಷರು, ಪುಟ್ಟಮ್ಮ ತಾಲ್ಲೂಕು ಗೌರವಾಧ್ಯಕ್ಷರು, ಎಂ.ಸ್ ಸತೀಶ್ ಜಿಲ್ಲಾ ಕಾರ್ಯದರ್ಶಿ, ಪ್ರೇಮ‌ ಜಂಟಿ ಕಾರ್ಯದರ್ಶಿಕಮಲುದ್ದೀನ್ ತಾಲ್ಲೂಕು ಕಾರ್ಯದರ್ಶಿ ರಾಜೇಗೌಡ‌‌, ಗೌರವಾಧ್ಯಕ್ಷರು ಮೀನಾಕ್ಷಿ
ತಾಲ್ಲೂಕು ಸಲಹೆಗಾರರು, ವೆಂಕಟೇಶ್ ಡಿವಿ ,ತಾಲ್ಲೂಕು ಸಹ ಕಾರ್ಯದರ್ಶಿ, ಕಾರ್ತಿಕ್, ಸುಂದರೇಶ್, ರಮೇಶ್ ಅವರ್ತಿ,ಗಣಪತಿ, ಮುಂತಾದವರು ಪಾಲ್ಗೊಂಡಿದ್ದರು.

ವರದಿ: ಪ್ರಿತುನ್ ಪೂವಣ್ಣ